ಚಿಕ್ಕಬಳ್ಳಾಪುರ:  ಮಾಂಸದ ಸಾಂಬಾರಿಗೆ ಉಪ್ಪು ಜಾಸ್ತಿ ಎಂದು ಹೆಂಡತಿಯನ್ನೇ ಕೊಂದು ತಿಂದ!

By Suvarna News  |  First Published May 11, 2020, 7:04 PM IST

ಭಾನುವಾರದ ಬಾಡೂಟದ ಜಗಳ/ ಸಾರಿಗೆ ಉಪ್ಪು ಹೆಚ್ಚಿಗೆ ಆಗಿದೆ ಎಂದು ಪತ್ನಿಯನ್ನೇ ಕೊಂದು ಹಾಕಿದ ಪಾಪಿ ಪತಿ/ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಘಟನೆ


ಚಿಕ್ಕಬಳ್ಳಾಪುರ (ಮೇ 11) ಮಾಂಸದ ಸಾಂಬಾರಿಗೆ ಉಪ್ಪು ಜಾಸ್ತಿಯಾಗಿದೆ ಎಂಬ ಕಾರಣಕ್ಕೆ ಗಂಡ ಹೆಂಡಿರ ನಡುವೆ ಉಂಟಾದ ಮನಸ್ತಾಪ ಕೊಲೆಯಲ್ಲಿ ಅಂತ್ಯವಾಗಿದೆ.

ಜಗಳ ವಿಕೋಪಕ್ಕೆ ಹೋಗಿ ಹೆಂಡತಿಯ ಕತ್ತು ಹಿಸುಕಿ ಕೊಲೆ ಗಂಡ ಕೊಲೆ ಮಾಡಿದ್ದಾನೆ.  ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಉಪ್ಪಕುಂಟೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

Tap to resize

Latest Videos

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ 

ಮಧುರ (24) ಗಂಡನಿಂದ ಕೊಲೆಯಾದ ದುರ್ದೈವಿ.   ಬಾಲಚಂದ್ರ(28) ಹೆಂಡತಿಯನ್ನು ಕೊಲೆಗೈದ ಪಾಪಿ ಪತಿ. ಭಾನುವಾರದ ಬಾಡುಟಕ್ಕೆ ಉಪ್ಪು ಕಡಿಮೆ ಇದೆ ಎಂಬ ಕಾರಣಕ್ಕೆ ಜಗಳ ಆರಂಭವಾಗಿದೆ.  ನಂತರ ಪತ್ನಿಯನ್ನು ಕತ್ತು ಹಿಸುಕಿ ಪಾಪಿ ಪತಿ ಕೊಲೆ ಮಾಡಿದ್ದಾನೆ  ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತಿಯನ್ನು ವಶಕ್ಕೆ ಪಡೆಯಲಾಗಿದೆ.

ಮದ್ಯವ್ಯಸನಿಯಾಗಿದ್ದ ಗಂಡ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯೊಂದಿಗೆ ಜಗಳ ಆಡುತ್ತಿದ್ದ.   ಆದರೆ ಭಾನುವಾರದ ಬಾಡೂಟದ ಜಳದಲ್ಲಿ ಹೆಂಡತಿಯ ಪ್ರಾಣವೇ ಹಾರಿ ಹೋಗಿದೆ. 

click me!