ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಹೋಗಿ 34000 ರೂ. ಕಳಕೊಂಡ ಕೇಜ್ರಿವಾಲ್ ಪುತ್ರಿ!

By Suvarna NewsFirst Published Feb 8, 2021, 10:21 PM IST
Highlights

ಆಧುನಿಕ ಜಮಾನದಲ್ಲಿ ಎಷ್ಟು ಎಷ್ಷರಿಕೆಯಿಂದ ಇದ್ದರೂ ಸಾಲದು/ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ವಂಚನೆ/ ಸೋಫಾ ಸೆಟ್ ಮಾರಾಟ ಮಾಡಲು ಮುಂದಾಗಿದ್ದ ಕೇಜ್ರಿವಾಲ್ ಪುತ್ರಿ/ ಕ್ಯೂಆರ್ ಕೋಡ್ ಕಳಿಸಿ ಸ್ಕಾನ್ ಮಾಡಿ ಎಂದ

ನವದೆಹಲಿ (ಫೆ. 08)  ಈ ಆಧುನಿಕ ಜಮಾನಾದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ವಂಚಕರು ಒಂದೆಲ್ಲಾ ಒಂದು ರೀತಿ ಬಲೆಗೆ ನಮ್ಮನ್ನು ಕೆಡವುತ್ತಲೆ ಇರುತ್ತಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪುತ್ರಿಯೇ ಹಣ ಕಳೆದುಕೊಂಡಿದ್ದಾರೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು ಪೋರ್ಟಲ್‌ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಸೆಟ್ ಮಾರಾಟ ಮಾಡಲು   ಹೋಗಿ 34,000 ರೂ. ಮೋಸ ಹೋಗಿದ್ದಾರೆ.

ಮಾಟಗಾತಿ ಸುಂದರಿ ಎಟಿಎಂನಿಂದ ತೆಗೆದಿದ್ದು  17  ಲಕ್ಷ

ವಂಚಕ ಹರ್ಷಿತಾಳನ್ನು ವೆಬ್ ಪೋರ್ಟಲ್‌ನಲ್ಲಿ ಸಂಪರ್ಕಿಸಿದ್ದಾನೆ.  ಹರ್ಷಿತಾ ಮಾರಾಟಕ್ಕೆ ಇಟ್ಟಿದ್ದ ಸೆಕೆಂಡ್ ಹ್ಯಾಂಡ್ ಸೋಫಾ ಸೆಟ್ ಖರೀದಿಸುತ್ತೇನೆ ಎಂದು ಹೇಳಿದ್ದಾನೆ.  ಇಬ್ಬರ ನಡುವೆ ಮಾತುಕತೆ ಫೈನಲ್ ಆಗಿದ್ದು ಹರ್ಷಿತಾರ ಖಾತೆಗೆ ಒಂದಿಷ್ಟು ಹಣ ಹಾಕಿದ್ದಾನೆ.   ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೋ ಇಲ್ಲವೋ ಎಂದು ಖಾತರಿ ಮಾಡಿಕೊಳ್ಳಬೇಕು ಹಾಗಾಗಿ ಕ್ಯೂಆರ್ ಕೋಡ್ ಸ್ಕಾನ್ ಮಾಡಲು ಹೇಳಿದ್ದಾನೆ. ಇದನ್ನು ನಂಬಿದ ಹರ್ಷಿತಾ ಹಾಗೆ ಮಾಡಿದ್ದಾರೆ.

ಸ್ಕಾನ್ ಮಾಡಿದಾಗ ಮೊದಲು ಹರ್ಷಿತಾ ಖಾತೆಯಿಂದ 20,000 ರೂ.  ಕಟ್ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ತಪ್ಪು ಬಾರ್ ಕೋಡ್ ಕಳಿಸಿದ್ದೇನೆ ಹಾಗಾಗಿ ಹೀಗಾಗಿದೆ ಎಂದು ಸಮಜಾಯಿಷಿ ನೀಡಿದ್ದಾನೆ.  ಮತ್ತೊಂದು ಬಾರ್ ಕೋಡ್ ಕಳಿಸಿ ಸ್ಕಾನ್ ಮಾಡಿ ಎಂದಿದ್ದಾನೆ.  ಈ ಬಾರಿ 14,000 ರೂ.  ಕಟ್ ಆಗಿದೆ. ನಂತರ ಮೋಸ ಹೋಗಿದ್ದು ಗೊತ್ತಾಗಿ  ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ದೂರು  ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಯನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದಾರೆ. 

click me!