ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ: ಫೋನ್ ಎಲ್ಲಿಂದ ಬಂತು ಎನ್ನುವುದು ಪತ್ತೆ..

By Suvarna News  |  First Published Feb 8, 2021, 7:21 PM IST

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿದ್ದಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ. 


ನವದೆಹಲಿ, (ಫೆ.08): ಕಾಂಗ್ರೆಸ್  ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ. ಮಧ್ಯಪ್ರದೇಶದಿಂದ ಕರೆ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಹಾಕಲಾಗಿದೆ.

ಪ್ರಧಾನಿ ಮೋದಿ ವಿರುದ್ಧ ಮಾತನಾಡಿದರೆ ನಿಮ್ಮನ್ನು ಬಿಡಲ್ಲ. ಪ್ರಧಾನಿ ಮೋದಿಯವರ ವಿರುದ್ಧ ಯಾಕೆ ಮಾತಾಡುತ್ತೀರಾ? ಎಂದು ಕರೆ ಮಾಡಿ ಹೆದರಿಸಿದ್ದಾರೆ.

Tap to resize

Latest Videos

 ಫೋನ್​ ಕಾಲ್​ನಲ್ಲಿ ನಾವು ನಿಮ್ಮನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಬೆದರಿಸಿದ ಅಪರಿಚಿತ ಬಳಿಕ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸದ್ಯ ಈ ಕುರಿತು ದೆಹಲಿಯ ತುಘಲಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ವಿಷ್ಯಾ ಪ್ರಸ್ತಾಪಿಸಿ ಮಲ್ಲಿಕಾರ್ಜನ ಖರ್ಗೆಗೆ ಜೀವ ಬೆದರಿಕೆ

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್​ ಸಂಸದ ನಾಸಿರ್ ಹುಸೇನ್ ಪ್ರಧಾನಿ ಮೋದಿ ಭಾಷಣದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದೆವು. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ್ದೆವು. ಈ ಸುದ್ದಿಗೋಷ್ಠಿಯ ಬಳಿಕ ಮಧ್ಯಪ್ರದೇಶದಿಂದ ಕರೆ ಬಂದಿದೆ. ಖರ್ಗೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ. ಖರ್ಗೆ ಜೀವಕ್ಕೆ ಹಾನಿ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ಹೇಳಿದರು.

ಹಿಂದೆಯೂ ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ ಬಂದಿತ್ತು. ಆಗಲೂ FIR ದಾಖಲಾಗಿತ್ತು. ಆದರೆ ಯಾವುದೇ ಕ್ರಮ ಆಗಿಲ್ಲ. ಒಟ್ಟು 3 ಬಾರಿ ಖರ್ಗೆಯವರಿಗೆ ಬೆದರಿಕೆ ಕರೆ ಬಂದಿದೆ. ಆದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ. ಈಗಲೂ ಸಹ ದೂರು ನೀಡುತ್ತಿದ್ದೇವೆ ಎಂದರು.

click me!