ಮಗುವಿಗಿತ್ತು ಖಾಯಿಲೆ, ನೆಂಟರ ಕೊಂಕು ಮಾತು: ತಾಯಿಯೇ ಮಗುವನ್ನು ಕೊಲೆಮಾಡಲು ಇವೇ ಕಾರಣ

By Sharath Sharma KalagaruFirst Published Nov 7, 2022, 2:52 PM IST
Highlights

Bengaluru Crime News: ಬೆಂಗಳೂರು ಅಪಾರ್ಟ್‌ಮೆಂಟ್‌ ಮೇಲಿಂದ ಮಗುವನ್ನು ತಾಯಿಯೇ ಎಸೆದು ಕೊಂದಿದ್ದ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಮಗು ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತಾಯಿಯೇ ಕೊಲೆ ಮಾಡಿದ್ದಾಳೆ ಎಂಬ ಆರೋಪವಿತ್ತು.

ಬೆಂಗಳೂರು: ರಾಜಧಾನಿಯನ್ನೇ ನಡುಗಿಸಿದ್ದ ಎದೆ ಝಲ್ಲೆನಿಸುವ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ತಾಯಿಯೇ ಮಗುವನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಳು. ಮಗು ಬುದ್ಧಿಮಾಂದ್ಯವಾಗಿತ್ತು ಎಂಬ ಕಾರಣಕ್ಕೆ ತಾಯಿಯೇ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿತ್ತು. ಇದೀಗ ಪ್ರಕರಣದ ಸಮಗ್ರ ತನಿಖೆಯಾಗಿದ್ದು ಮಗುವಿಗೆ ಆಟಿಸಂ ಎಂಬ ಖಾಯಿಲೆಯಿತ್ತು ಎನ್ನಲಾಗಿದೆ. ಪ್ರತಿನಿತ್ಯ ಮಗುವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ಮಗುವನ್ನು ನೋಡಿಕೊಳ್ಳುವುದೇ ಜೀವನವಾಗಿದೆ. ನನ್ನ ಜೀವನವನ್ನು ಎಂಜಾಯ್‌ ಮಾಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾಳೆ ಎಂದು ದೋಷಾರೋಪ ಪಟ್ಟಿಯಲ್ಲಿ ಸಂಪಂಗಿ ರಾಮನಗರ ಪೊಲೀಸರು ಆರೋಪಿಸಿದ್ದಾರೆ. 

ಚಾರ್ಜ್‌ಶೀಟ್‌ನಲ್ಲೇನಿದೆ?:

ಬೆಂಗಳೂರಿನಲ್ಲಿ ಹೆತ್ತ ಮಗುವನ್ನೇ ತಾಯಿ ಕೊಂದ ಪ್ರಕರಣ ಸಂಬಂಧ ತನಿಖೆ ನಡೆಸಿದ ಸಂಪಂಗಿರಾಮನಗರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ನಾಲ್ಕನೇ ಮಹಡಿ ಮೇಲಿಂದ ಹೆಣ್ಣುಮಗುವನ್ನು ಬಿಸಾಡಿದ್ದ ತಾಯಿ ಸುಷ್ಮಾ ಪ್ರಕರಣದ ಆರೋಪಿಯಾಗಿದ್ದಾರೆ. ಸಂಪಂಗಿ ರಾಮನಗರ ಠಾಣಾ ವ್ಯಾಪ್ತಿಯಲ್ಲಿ ಇದೇ ವರ್ಷ ಏಪ್ರಿಲ್‌ 8ರಂದು ನಡೆದಿದ್ದ ಮನಕುಲುಕುವ ಘಟನೆಗೆ ತಾರ್ಕಿಕ ಅಂತ್ಯ ನೀಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ ಎಸ್.ಆರ್.ನಗರ ಪೊಲೀಸರು ತಾಯಿಯ ಮೇಲೆ ವಿಸ್ತೃತವಾದ ಆರೋಪ ಮಾಡಿದ್ದಾರೆ. 

ಬರೋಬ್ಬರಿ 193 ಪುಟಗಳ ಚಾರ್ಜ್ ಶೀಟ್ ಸಂಪಂಗಿರಾಮನಗರ ಪೊಲೀಸರು ಸಲ್ಲಿಸಿದ್ದಾರೆ. ಮಗುವನ್ನು ಬಿಸಾಡಿದ್ದನ್ನ ಪ್ರತ್ಯಕ್ಷವಾಗಿ ಕಂಡಿದ್ದ ಮೂವರು ಐ ವಿಟ್ನೆಸ್ ಗಳ ಹೇಳಿಕೆ ದಾಖಲಿಸಲಾಗಿದ್ದು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ. ಕೇಸ್ ನಲ್ಲಿ ಬರೋಬ್ಬರಿ 34 ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಮಗುವಿನ ಖಾಯಿಲೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಬುದ್ದಿಮಾಂದ್ಯ ಮಗುವಲ್ಲ, AUTISM ಎಂಬ ಖಾಯಿಲೆಯಿಂದ ಮಗು ಬಳಲುತ್ತಿತ್ತು ಎನ್ನಲಾಗಿದೆ. 

ಇದನ್ನೂ ಓದಿ: 2012 ಅತ್ಯಾಚಾರ, ಕೊಲೆ ಕೇಸ್‌: ಮೂವರ ಗಲ್ಲುಶಿಕ್ಷೆ ಖುಲಾಸೆಗೊಳಿಸಿದ SUPREME COURT

ಪ್ರತಿನಿತ್ಯ ಥೆರಫಿ ಮಾಡಿಸಲು ಮಗುವನ್ನು ತಾಯಿ ಸುಷ್ಮಾ ಕರೆದೊಯ್ಯುತ್ತಿದ್ದರು. ಇದೆ ಕಾರಣಕ್ಕೆ ಮಗುವಿನಿಂದ ಬೇಸತ್ತು, ನೋಡಿಕೊಳ್ಳಲಾಗುವುದಿಲ್ಲ ಎಂದು ಕೊಲೆ ಮಾಡಿದ್ದಾಳೆ ಎಂಬುದನ್ನು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನ್ನ ಜೀವನ ಮಗುವಿನಿಂದ ಎಂಜಾಯ್ ಮಾಡಲು ಆಗುವುದಿಲ್ಲ ಎಂದು ನಿರ್ಧಾರ ತಳೆದಿದ್ದಾರೆ. ಎರಡು ಬಾರಿ ಮಗು ಬಿಸಾಡಲು ಹೊರಗಡೆ ಬಂದು ನೋಡಿ, ಅಡ್ಡಲಾಗಿದ್ದ ಮರವನ್ನು ಗಮನಿಸಿರುತ್ತಾಳೆ. ಮಗು ಬಚಾವಾದರೆ ಎಂಬ ಕಾರಣಕ್ಕೆ ಆ ಬಳಿಕ ದೂರ ಬಂದು ಕಲ್ಲಿನ ಗಟ್ಟಿ ನೆಲದ ಸ್ಥಳವನ್ನು ನೋಡಿ ಬಿಸಾಡಿರೋದಾಗಿ ತನಿಖೆಯಲ್ಲಿ ಬೆಳಕಿಗೆ‌‌ ಬಂದಿದೆ. 

ಎಲ್ಲಾದರೂ ಕಾರ್ಯಕ್ರಮಗಳಿಗೆ ಹೋದಾಗ ಮಗುವನ್ನು ನೋಡಿ ಸಂಬಂಧಿಕರು ಕೊಂಕು ಮಾತಾಡುತ್ತಿದ್ದರು. ಇದರಿಂದ ಸುಷ್ಮಾ ಬೇಸತ್ತಿದ್ದರು.ಸುಖ ಜೀವನದ ಲೈಫ್ ಎಂಜಾಯ್ ಮಾಡಿದ್ದ ಸುಷ್ಮಾಗೆ ಮಗುವಿನ ಆರೈಕೆಯೇ ಕಷ್ಡವಾಗಿತ್ತು. ತಾಯಿ ಸುಷ್ಮಾಳ ಆರೋಗ್ಯದ ಪರಿಸ್ಥಿತಿಯ ರಿಪೋರ್ಟ್ ನಲ್ಲಿ ಅಚ್ಚರಿ ಮಾಹಿತಿ ಬೆಳಕಿಗೆ ಬಂದಿದೆ. ಫಿಟ್ ಅಂಡ್ ಟ್ರಯಲ್ ಎಂದು ನಿಮ್ಹಾನ್ಸ್ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: 10ಕ್ಕೂ ಹೆಚ್ಚು ಮಕ್ಕಳ ಅತ್ಯಾಚಾರ, ಒಬ್ಬಳ ಕೊಲೆ: ಮುರುಘಾ ಶ್ರೀ ಚಾರ್ಜ್‌ಶೀಟ್‌ನಲ್ಲಿದೆ ಎದೆ ಝಲ್ಲೆನಿಸುವ ಅಂಶಗಳು

ನಿಮ್ಹಾನ್ಸ್ ಗೆ ಕರೆದೊಯ್ದು ತಪಾಸಣೆ ಮಾಡಿಸಲಾಗಿತ್ತು. ಮಾನಸಿಕವಾಗಿ ಕುಗ್ಗಿದ್ರು, ಖಿನ್ನತೆ ಎಂಬುದು ಸುಳ್ಳು ಎಂದು ನಿಮ್ಹಾನ್ಸ್‌ ವೈದ್ಯಾಧಿಕಾರಿಗಳು ವರದಿ ನೀಡಿದ್ದರು. ತಾಯಿ ಆರೋಗ್ಯವೆಲ್ಲಾ ಫರ್ಪೆಕ್ಟ್ ಆಗಿದ್ದು,  ಯಾವುದೇ ಸಮಸ್ಯೆ ಇಲ್ಲವೆಂದು ಮಾಹಿತಿ ನೀಡಿದ್ದರು. ಈ ಮೂಲಕ ಉದ್ದೇಶಪುರ್ವಕವಾಗಿ ಮಗು ಕೊಂದದ್ದು ತನಿಖೆಯಲ್ಲಿ ಸಾಭೀತಾಗಿದೆ. ನಿಮ್ಹಾನ್ಸ್‌ ವೈದ್ಯಾಧಿಕಾರಿಗಳ ಸಾಕ್ಷಿಗಳನ್ನೂ ದಾಖಲಿಸಲಾಗಿದ್ದು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. 

click me!