Kolar: ಸಾಲ ಕೊಡಿಸಲು ಮಧ್ಯೆಸ್ತಿಕೆವಹಿಸಿದ ತಪ್ಪಿಗೆ ಮಹಿಳೆ ಆತ್ಮಹತ್ಯೆಗೆ ಶರಣು; ಸಾಲ ಕೊಡಿಸುವ ಮುನ್ನ ಯೋಚಿಸಿ!

By Ravi JanekalFirst Published Jan 28, 2023, 1:52 PM IST
Highlights

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ಸಾಲ ಕೊಡಿಸಲು ಮಧ್ಯೆಸ್ತಿಕೆ ವಹಿಸಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಜ.28) : ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ಸಾಲ ಕೊಡಿಸಲು ಮಧ್ಯೆಸ್ತಿಕೆ ವಹಿಸಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಅತ್ತಿಗಿರಿಕೊಪ್ಪ(attigirikoppa) ಗ್ರಾಮದ 36 ವರ್ಷದ ಮೃತ ಮಹಿಳೆ ಪದ್ಮ(Padma) ಎಂಬುವವರು ತನ್ನ ಸ್ನೇಹಿತೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ನಿವಾಸಿ ವರಲಕ್ಷ್ಮಿ ಎಂಬುವವರಿಂದ ಅತ್ತಿಗಿರಿಕೊಪ್ಪ ಗ್ರಾಮದ ಭಾಗ್ಯ, ಹಾಗೂ ಸಮ್ರತಿ ಹಾಗೂ ಕಮ್ಮಸಂದ್ರ ಗ್ರಾಮದ ಪ್ರೇಮ ಎಂಬುವವರಿಗೆ ತಲಾ 1 ಲಕ್ಷ ಲಕ್ಷ ರೂ ಸಾಲವನ್ನು  ಕೊಡಿಸಲು ಮಧ್ಯಸ್ತಿಕೆ ವಹಿಸಿದ್ದರು.

 

ಗಂಡನ ಕಿರುಕುಳ: ಸೀಮಂತವಾದ 3ನೇ ದಿನಕ್ಕೆ 8 ತಿಂಗಳ ಗರ್ಭಿಣಿ ಆತ್ಮಹತ್ಯೆ

ಮೃತ ಪದ್ಮರವರು ಸಾಲ ಪಡೆದವರನ್ನು ಸಾಕಸ್ಟು ಬಾರಿ ಸಾಲವನ್ನು ಹಿಂತಿರುಗಿಸುವಂತೆ ಮನವಿ ಮಾಡಿದರು ಸಹ ಪ್ರಯೋಜನವಾಗಿಲ್ಲ,ಇದರ ನಡುವೆ ಸಾಲದ ಬಡ್ಡಿ ಸಹ ಕಟ್ಟದೆ ಆಟವಾಡಿಸುತ್ತಿದಕ್ಕೆ ಕೋಪಗೊಂಡ ವರಲಕ್ಷ್ಮೀ ಅವರು ಮೃತ ಪದ್ಮಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ವರಲಕ್ಷ್ಮಿಯನ್ನು ಅತ್ತಿಗಿರಿಕೊಪ್ಪ ಗ್ರಾಮದ ಭಾಗ್ಯ ಹಾಗೂ ಚಂಬರಸಿ ರವರ ಮನೆ ಬಳಿ ಕರೆದುಕೊಂಡು ಹೋಗಿ ಕೊಟ್ಟಿರುವ ಸಾಲವನ್ನು ಹಿಂದುರಿಗಿಸುವಂತೆ ಕೇಳಿದ್ದಾರೆ.

ಆದರೆ ಸಾಲ ಪಡೆದ ಭಾಗ್ಯ ಹಾಗೂ ಸಮ್ರತಿ ಹಾಗೂ ಪ್ರೇಮ ರವರು ಬೇಜವಾಬ್ದಾರಿಯುತ ನಡೆವಳಿಕೆ ತೋರಿ ಸಾಲದ ಹಣ ಹಿಂತಿರುಗಿಸುವುದಿಲ್ಲ "ಅದೇನ್ ಮಾಡ್ತೀಯೋ ಮಾಡ್ಕೋ" ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಮತ್ತಷ್ಟು ತೀವ್ರವಾಗಿ ಮನನೊಂದ ಪದ್ಮರವರು ಮನೆಗೆ ಬಂದು ನನ್ನ ಸಾವಿಗೆ ಅತ್ತಿಗಿರಿಕೊಪ್ಪದ ಗ್ರಾಮದ ಭಾಗ್ಯ, ಸಮ್ರತಿ ಹಾಗೂ ಪ್ರೇಮ ಕಾರಣವೆಂದು ಮೂವರು ಹೆಸರನ್ನು ಸೆಲ್ಫಿ ವಿಡಿಯೋ ಚಿತ್ರಿಕರಿಸಿ ಹೇಳುವ ಮೂಲಕ,ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವಿಷಯ ಮನೆ ಮಕ್ಕಳಿಗೆ ತಿಳಿದು ಅಕ್ಕಪಕ್ಕದವರ ಸಹಾಯದೊಂದಿಗೆ ಜಾಲಪ್ಪ ಆಸ್ಪತ್ರೆ(Jalappa hospital)ಗೆ ದಾಖಲಿಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಪದ್ಮರವರು ಮೃತಪಟ್ಟಿದ್ದಾರೆ.

ಗೋಕಾಕ: ಬೇರೊಬ್ಬರ ಮನೆ ಮುಂದೆ ಮುಸ್ಲಿಂ ಮಹಿಳೆ ಆತ್ಮಹತ್ಯೆ

ಬೂದಿಕೋಟೆ ಪೊಲೀಸ್ ಠಾಣೆ  ದೂರು ದಾಖಲಾಗಿದ್ದು,ಅತ್ತಿಗಿರಿ ಕೊಪ್ಪ ಗ್ರಾಮದಲ್ಲಿ ಈ ತರಹದ ಪ್ರಕರಣ ಎರಡನೇಯದಾಗಿದ್ದು ಪೊಲೀಸರು ಸೂಕ್ತ ತನಿಖೆ ಕೈಗೊಂಡು ಇಂತಹ ಪ್ರಕರಣಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಇನ್ನು ವಿಷಯ ತಿಳಿದು ಭಾಗ್ಯ,ಸಮ್ರತಿ ಹಾಗೂ ಪ್ರೇಮ ಎಸ್ಕೇಪ್ ಆಗಿದ್ದು,ಪೊಲೀಸರು ಹುಡುಕಾಟದಲ್ಲಿದ್ದಾರೆ.

click me!