ನಟಿ ಅನುಷ್ಕಾ ಶೆಟ್ಟಿ ಅಣ್ಣನ ಹತ್ಯೆಗೆ ಸಂಚು, ಮಂಗಳೂರು ಪೊಲೀಸರಿಂದ ನೋಟಿಸ್

By Suvarna News  |  First Published Jun 29, 2022, 3:12 PM IST

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಅಣ್ಣ ಗುಣ ರಂಜನ್ ಶೆಟ್ಟಿ  ಕೊಲೆ ಸ್ಕೆಚ್ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ, ಮಂಗಳೂರು ಪೊಲೀಸರು ಗುಣ ರಂಜನ್ ಶೆಟ್ಟಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.


ಮಂಗಳೂರು (ಜೂ.29): ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರ ಅಣ್ಣ ಗುಣ ರಂಜನ್ ಶೆಟ್ಟಿ (Gunaranjan Shetty ) ಕೊಲೆ ಸ್ಕೆಚ್ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ, ಮಂಗಳೂರು ಪೊಲೀಸರು (Mangaluru police) ಗುಣ ರಂಜನ್ ಶೆಟ್ಟಿಗೆ ನೋಟಿಸ್ ನೀಡಿದ್ದು, ಜೂನ್ 29 ರಂದು  ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಗೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ  ಗುಣರಂಜನ್ ಶೆಟ್ಟಿ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
  
ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ (Muthappa Rai) ಅಪ್ತ ಬಳಗದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು,  ಜಯಕರ್ನಾಟಕ ಸಂಘಟನೆಯ (Jaya Karnataka) ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಆರೋಪ ಕೇಳಿ ಬಂದಿತ್ತು. ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈ ನಿಂದ ಕೊಲೆಗೆ ಸ್ಕೆಚ್ ಎಂಬ ವದಂತಿ ಹಬ್ಬಿತ್ತು.  ಹೀಗಿದ್ದರೂ ಮನ್ಮಿತ್ ರೈ ತಾನು ಬ್ಯುಸಿನೆಸ್ ವಿಚಾರವಾಗಿ ವಿದೇಶದಲ್ಲಿರುವುದಾಗಿ ಹೇಳಿಕೊಂಡಿದ್ದರು.

ಕುಂದಾನಗರಿಯಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳಿಗೆ ಶಾಕ್: 26 ಮನೆಗಳ ಮೇಲೆ ಪೊಲೀಸ್ ದಾಳಿ

Tap to resize

Latest Videos

ಇನ್ನೊಂದೆಡೆ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಗುಣರಂಜನ್ ಶೆಟ್ಟಿಗೆ ಮನ್ಮಿತ್ ರೈನಿಂದ ಜೀವ ಬೆದರಿಕೆಯಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಭದ್ರತೆ ನೀಡುವಂತೆ ಮನವಿ ಮಾಡಿದ್ದರು. ಒಂದು ಕಾಲದಲ್ಲಿ ಗುಣರಂಜನ್ ಶೆಟ್ಟಿ ಹಾಗೂ ಮುನ್ಮಿತ್ ರೈ ಇಬ್ಬರೂ ಮುತ್ತಪ್ಪ ರೈ ಆಪ್ತವಲಯದಲ್ಲಿಯೇ ಗುರುತಿಸಿಕೊಂಡಿದ್ದರು. ಇದೀಗ ಇಬ್ಬರ ನಡುವೆ ವೈಷನ್ಯವಿದೆ ಎನ್ನಲಾಗುತ್ತಿದೆ.

ಮನ್ಮಿತ್ ರೈ ಹೇಳಿದ್ದೇನು?
ತಮ್ಮ ವಿರುದ್ಧ ಕೇಳಿ ಬವಂದಿರುವ ಆರೋಪದ ಬಗ್ಗೆ ಮಾತನಾಡಿದ್ದ ಮನ್ಮಿತ್ ರೈ, ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ಎಂಬ ವದಂತಿಗಳು ಬರ್ತಾ ಇವೆ. ಇದು ಎಷ್ಟು ಸತ್ಯ ಎಂಬುದನ್ನು ಪೊಲೀಸರು ತನಿಖೆ ಮಾಡ್ತಾರೆ. ಆದರೆ ಈ ವಿಚಾರದಲ್ಲಿ ನನ್ನ ಹೆಸರು ಯಾಕೆ ಬರ್ತಾ ಇದೆ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ತನಿಖೆ ಆಗ್ತಾ ಇದ್ರೆ ಯಾರ ಹೆಸರು ಇದೆಯೋ ಅದು ಹೊರಗೆ ಬರುತ್ತೆ. ಆದರೆ ಅದಕ್ಕೂ ಮೊದಲೇ ನನ್ನ ಹೆಸರು ಯಾಕ್ ಬಳಸ್ತಾ ಇದ್ದಾರೊ ಗೊತ್ತಿಲ್ಲ. ನನ್ನ ಮೇಲೆ ಇದುವೆರಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಯಾವ್ ಸ್ಟೇಷನ್ ನಲ್ಲೂ ಎಫ್ ಐ ಆರ್ ದಾಖಲಾಗಿಲ್ಲ. ಯಾವುದೇ ಅಪರಾಧ ಪ್ರಕರಣಗಳಲ್ಲಿ ಇಲ್ಲದೆ ಇರುವಾಗಲೂ ಯಾಕೆ ನನ್ನ ವಿರುದ್ದ ಆರೋಪ ಬರುತ್ತಿದೆ. ಏನು ಇಲ್ಲದೆ ಮನ್ಮಿತ್ ರೈರಿಂದ ಸಂಚು ನಡೆಯುತ್ತಿದೆ ಹೇಗ್ ಹೇಳ್ತಾ ಇದ್ದಾರೆಂದು ಗೊತ್ತಾಗ್ತಾ ಇಲ್ಲ ಎಂದಿದ್ದರು.

Bengaluru: ಸಾಲ ಕಟ್ಟದ್ದಕ್ಕೆ ಮಹಿಳೆಯ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ

ಈ ಹಿಂದೆಯೂ ಹಲವು ಬಾರಿ ಮುತ್ತಪ್ಪ ರೈ ಅಪ್ತ ಬಳಗದ ಗಲಾಟೆ ನಡೆದಿದ್ದು ಸುದ್ದಿಯಾಗಿತ್ತು. ಗುಣರಂಜನ್ ಶೆಟ್ಟಿ ಹಾಗೂ ಮನ್ಮಿತ್ ರೈ ಇಬ್ಬರು ಮುತ್ತಪ್ಪ ರೈ ಜೊತೆ ಇದ್ದವರು. ಮನ್ಮಿತ್ ರೈ ಮುತ್ತಪ್ಪ ರೈ ಹತ್ತಿರದ ಸಂಬಂಧಿಯಾಗಿದ್ದರೆ, ಇತ್ತ ಗುಣರಂಜನ್ ಶೆಟ್ಟಿ ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. 

ಇನ್ನು ಕೆಲ ಸಮಯದ ಹಿಂದೆ ಮನ್ಮಿತ್ ರೈ, ಮುತ್ತಪ್ಪ ರೈ ಜೊತೆಯಿಂದ ಹೊರಬಂದಿದ್ದರು. ಆದರೀಗ ಕೇಳಿ ಬಂದಿರುವ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ವಿಚಾರ ಮತ್ತೆ ಭಾರೀ ಸದ್ದು ಮಾಡುತ್ತಿದೆ. 
 

click me!