ಬೆಳಗಾವಿಯಿಂದ ಪಂಡರಾಪುರಕ್ಕೆ ತೆರಳಿದ್ದ ವಿಠ್ಠಲ ಭಕ್ತರ ಮೇಲೆ ಪಾನಮತ್ತ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಮಿರಜ್ ತಾಲೂಕಿನ ಮಾಲಗಾಂವ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ (ಜು.20): ಬೆಳಗಾವಿಯಿಂದ ಪಂಡರಾಪುರಕ್ಕೆ ತೆರಳಿದ್ದ ವಿಠ್ಠಲ ಭಕ್ತರ ಮೇಲೆ ಪಾನಮತ್ತ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಮಿರಜ್ ತಾಲೂಕಿನ ಮಾಲಗಾಂವ ಗ್ರಾಮದಲ್ಲಿ ನಡೆದಿದೆ.
ಸುರೇಶ್ ರಾಜುಕರ್, ಪರಶುರಾಮ ಜಾಧವ್, ಲಾರಿ ಚಾಲಕ ಹಲ್ಲೆಗೊಳಗಾದ ಭಕ್ತರು. ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೆಳಗಾವಿ ತಾಲೂಕಿನ ತುರಮುರಿ ಗ್ರಾಮದ ಭಕ್ತರು. ಆಷಾಢ ಏಕಾದಶಿ ನಿಮಿತ್ತ ತುರಮುರಿ ಗ್ರಾಮದಿಂದ ಬಾಡಿಗೆ ಲಾರಿ ಮಾಡಿಕೊಂಡು ಪಂಡರಾಪುರಕ್ಕೆ ತೆರಳಿದ್ದರು.
undefined
ಸ್ವಂತ ಜ್ಯುವೆಲರಿ ಅಂಗಡಿ ತೆರೆಯಲು ಕೆಲಸಕ್ಕಿದ್ದಮಳಿಗೆಯಲ್ಲಿ ಚಿನ್ನ ಕದ್ದ ಭೂಪ!
ಪಂಡರಾಪುರ ವಿಠ್ಠಲನ ದರ್ಶನ ಪಡೆದು ಬೆಳಗಾವಿಗೆ ವಾಪಸ್ ಬರುತ್ತಿದ್ದ ವೇಳೆ ದಾರಿ ತಪ್ಪಿದ್ದಾರೆ. ಬೆಳಗಾವಿಗೆ ಬದಲು ಮಾಲಗಾಂವ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಲಾರಿಗೆ ಅಡ್ಡ ಬಂದ ಕಾರು. ಪಾನಮತ್ತನಾಗಿದ್ದ ಕಾರಿನ ಚಾಲಕ ಭಕ್ತರೊಂದಿಗೆ ಕಿರಿಕ್ ಮಾಡಿದ್ದಾನೆ. ಬಳಿಕ ಮೊಬೈಲ್ ಕರೆ ಮಾಡಿ ಸ್ಥಳಕ್ಕೆ ಪುಂಡರನ್ನು ಕರೆಸಿಕೊಂಡು ಭಕ್ತರ ಮೇಲೆ ಹಲ್ಲೆ ನಡೆಸಿರುವ ಗೂಂಡಾಗಳು.
20 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ: ಮತ್ತೊಬ್ಬ ನಟ ಪರಪ್ಪನ ಅಗ್ರಹಾರದ ಜೈಲುಪಾಲು!
ಭಕ್ತರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿರುವ ಮಹಾರಾಷ್ಟ್ರ ಪುಂಡರು. ದಾಳಿಯಿಂದ ಮೂವರು ವಿಠ್ಠಲ ಭಕ್ತರು ಗಾಯಗೊಂಡಿದ್ದು ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಭಕ್ತರಿಗೆ ರಕ್ಷಣೆ ನೀಡುವಂತೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಬೆಳಗಾವಿ ಭಕ್ತರು ಮನವಿ ಮಾಡಿ ಮಾಡಿದ್ದಾರೆ.