ಅಯ್ಯೋ ಪಾಪ! ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ: ಸತ್ತಿದ್ದಾದ್ರೂ ಹೇಗೆ?

Published : Jun 07, 2023, 01:38 PM ISTUpdated : Jun 07, 2023, 01:39 PM IST
ಅಯ್ಯೋ ಪಾಪ! ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ: ಸತ್ತಿದ್ದಾದ್ರೂ ಹೇಗೆ?

ಸಾರಾಂಶ

ದಿಲ್ಲಿಯ ಜೋಗಾ ಬಾಯಿ ಎಕ್ಸ್‌ಟೆನ್ಶನ್‌ನಲ್ಲಿರುವ ಅವರ ಮನೆಯಲ್ಲಿ ಹಳೆಯ ಮರದ ಪೆಟ್ಟಿಗೆಯೊಳಗೆ ನೀರಜ್ (8) ಮತ್ತು ಆರತಿ (6) ಎಂಬ ಇಬ್ಬರು ಚಿಕ್ಕ ಮಕ್ಕಳ ಮೃತ ದೇಹಗಳು ಮಂಗಳವಾರ ಪತ್ತೆಯಾಗಿವೆ ಎಂದು ವರದಿಯಾಗಿದೆ.  

ಹೊಸದಿಲ್ಲಿ (ಜೂನ್‌ 7, 2023):  ಮಕ್ಕಳು ಭವಿಷ್ಯದಲ್ಲಿ ದೇಶವನ್ನು ಹಾಗೂ ಕುಟುಂಬವ್ನು ಮುನ್ನಡೆಸುವವರು. ಆದರೆ, ಬದುಕಿ ಬಾಳಬಕಾದ ಮಕ್ಕಳು ಜೀವನದಲ್ಲಿ ಹೆಚ್ಚೆನೂ ಅರಿಯುವ ಮೊದಲೇ ಪ್ರಾಣ ಕಳೆದುಕೊಡರೆ ಎಷ್ಟು ಬೇಸರವಾಗುತ್ತದೆ ಅಲ್ವೇ.. ರಾಷ್ಟ್ರ ರಾಜಧಾನಿಯಲ್ಲೂ ಇಂತಹ ಆಘಾತಕಾರಿ ಘಟನೆ ನಡೆದಿದೆ. ಆಗ್ನೇಯ ದಿಲ್ಲಿಯ ಜೋಗಾ ಬಾಯಿ ಎಕ್ಸ್‌ಟೆನ್ಶನ್‌ನಲ್ಲಿರುವ ಅವರ ಮನೆಯಲ್ಲಿ ಹಳೆಯ ಮರದ ಪೆಟ್ಟಿಗೆಯೊಳಗೆ ನೀರಜ್ (8) ಮತ್ತು ಆರತಿ (6) ಎಂಬ ಇಬ್ಬರು ಚಿಕ್ಕ ಮಕ್ಕಳ ಮೃತ ದೇಹಗಳು ಮಂಗಳವಾರ ಪತ್ತೆಯಾಗಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 

ಈ ಬಾಲಕರು ಆಕಸ್ಮಿಕವಾಗಿ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. "ಜಾಮಿಯಾ ನಗರ ಪೊಲೀಸ್ ಠಾಣೆಗೆ ಮನೆ ಸಂಖ್ಯೆ ಎಫ್ 2, ಜೋಗಾ ಬಾಯಿ ವಿಸ್ತರಣೆಯಲ್ಲಿ ಎರಡು ಶವಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ನೀರಜ್ (8) ಮತ್ತು ಆರತಿ (6) ಎಂದು ಗುರುತಿಸಲಾದ ಇಬ್ಬರು ಒಡಹುಟ್ಟಿದವರ ಶವಗಳು ಹಳೆಯ ಮರದ ಪೆಟ್ಟಿಗೆಯಲ್ಲಿ ಪತ್ತೆಯಾಗಿವೆ’’ ಎಂದು ಸುದ್ದಿ ಏಜೆನ್ಸಿ ಪಿಟಿಐ ಉಪ ಪೊಲೀಸ್ ಕಮಿಷನರ್ (ಆಗ್ನೇಯ) ರಾಜೇಶ್ ಡಿಯೋ ಹೇಳಿದ್ದಾರೆ.

ಇದನ್ನು ಓದಿ: ಸ್ಲೀಪರ್ ಕೋಚ್ ಬಸ್‌ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು: ಬಲಿಯಾದ ಯುವತಿ, ಯುವಕ ಡಿಸ್ಚಾರ್ಜ್‌

“ಮೃತ ಮಕ್ಕಳು ಇಂದು ಮಧ್ಯಾಹ್ನ 3 ಗಂಟೆಗೆ ಪೋಷಕರೊಂದಿಗೆ ಊಟ ಮಾಡಿ 3.30 ರ ಸುಮಾರಿಗೆ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ವಿಚಾರಣೆಯಿಂದ ತಿಳಿದುಬಂದಿದೆ, ಪೋಷಕರು ಮತ್ತು ಇತರರು ಅವರನ್ನು ಹುಡುಕಲು ಪ್ರಾರಂಭಿಸಿದರು ಮತ್ತು ನಂತರ ಪೆಟ್ಟಿಗೆಯಲ್ಲಿ ಅವರನ್ನು ಪತ್ತೆ ಮಾಡಿದರು. ಮರಣೋತ್ತರ ಪರೀಕ್ಷೆಯು ಇವರ ಸಾವಿಗೆ ಕಾರಣವನ್ನು ದೃಢೀಕರಿಸುತ್ತದೆ’’ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ಮಂಗಳವಾರ ವರದಿ ಮಾಡಿದೆ.

ಮೃತದೇಹದ ಮೇಲೆ ಯಾವುದೇ ಗಾಯವಾಗಿಲ್ಲ ಮತ್ತು ಇದು ಆಕಸ್ಮಿಕವಾಗಿ ಉಸಿರುಗಟ್ಟಿದ ಪ್ರಕರಣ ಎಂದು ತೋರುತ್ತದೆ ಎಂದು ಡಿಸಿಪಿ ಹೇಳಿದ್ದು, ಶವಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುವುದು ಎಂದು ಮಾಹಿತಿ ನೀಡಿದರು. ಮೆಹಮೂದ್ ಅಹಮದ್ ಎಂಬ ಸಾಮಾಜಿಕ ಕಾರ್ಯಕರ್ತ ಘಟನಾ ಸ್ಥಳಕ್ಕೆ ಮೊದಲು ತಲುಪಿದ್ದು "ಮಕ್ಕಳ ತಂದೆ ಬಲ್ಬೀರ್ ಕಾವಲುಗಾರನಾಗಿದ್ದು, ಕುಟುಂಬವು ನೇಪಾಳದಿಂದ ಬಂದಿದೆ. ಅವರಿಗೆ ಐದು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಅವರ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ, ಆದರೆ ಅವರಲ್ಲಿ ಒಬ್ಬರ ಬಾಯಿಯಿಂದ ನೊರೆ ಹೊರಬಂದಿದೆ’’ ಎಂದು ಹೇಳಿಕೆ ನೀಡಿದ್ದನ್ನು ಪಿಟಿಐ ಉಲ್ಲೇಖಿಸಿದೆ. 

ಇದನ್ನೂ ಓದಿ: ಕ್ರಿಕೆಟ್‌ ಪಂದ್ಯದ ವೇಳೆ ಬಾಲ್‌ ಮುಟ್ಟಿದ ದಲಿತ ಬಾಲಕನಿಗೆ ಜಾತಿ ನಿಂದನೆ: ಸಂಬಂಧಿಯ ಹೆಬ್ಬೆರಳನ್ನೇ ಕತ್ತರಿಸಿದ ಗ್ರಾಮಸ್ಥರು!

ಈ ಬಾಕ್ಸ್ ತುಂಬಾ ಹಳೆಯದಾಗಿದ್ದು, ಮಕ್ಕಳು ಆಟವಾಡುತ್ತಾ ಅದರೊಳಗೆ ಪ್ರವೇಶಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ನೌಶಾದ್ ಚೌಧರಿ ಹೇಳಿದರು. ಬಾಕ್ಸ್ ಮುಚ್ಚಳ ಮುಚ್ಚಿದ್ದು ತೆರೆಯಲು ಸಾಧ್ಯವಾಗದೆ ಸಿಕ್ಕಿಬಿದ್ದು ಮೃತಪಟ್ಟಿದ್ದಾರೆ. ತಾನು ಇಲ್ಲಿಯವರೆಗೆ ಕೇಳಿದ್ದು ಅದನ್ನೇ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯನ್ನು ಉಸಿರುಗಟ್ಟಿಸಿ ಕೊಲೆ: ಬಾಯ್‌ಫ್ರೆಂಡ್‌ಗಾಗಿ ಪೊಲೀಸರ ಹುಡುಕಾಟ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ