ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಎಎಸ್ಎಂ ಮಹಿಳಾ ಕಾಲೇಜಿನ ಉಪನ್ಯಾಸಕಿ ಮೇಲೆ ಪ್ರಾಂಶುಪಾಲರೇ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದೆ.
ಬಳ್ಳಾರಿ (ಜೂ.7): ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಎಎಸ್ಎಂ ಮಹಿಳಾ ಕಾಲೇಜಿನ ಉಪನ್ಯಾಸಕಿ ಮೇಲೆ ಪ್ರಾಂಶುಪಾಲರೇ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದೆ.
ವಿದ್ಯಾರ್ಥಿನಿಯರಿಗೆ ಅಷ್ಟೇ ಅಲ್ಲ ಪ್ರಾಧ್ಯಾಪಕರಿಗೂ ಮುಖ್ಯಸ್ಥರಾಗಿರೋ ಪ್ರಾಂಶುಪಾಲರು. ಮಗಳ ವಯಸ್ಸಿನ ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
undefined
ಪ್ರಾಂಶುಪಾಲ ಶರಣಪ್ಪ ಅವರೇ ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು. . ಈ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಲಿರೋ ಶರಣಪ್ಪ. ಉಪನ್ಯಾಸಕಿ ಈ ಬಗ್ಗೆ ವೀರಶೈವ ಸಂಘದ ಮುಖ್ಯಸ್ಥರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗದ ಹಿನ್ನಲೆ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಬಗ್ಗೆ ಲಿಖಿತ ದೂರು ನೀಡಿದರೂ ಕ್ರಮ ತೆಗೆದುಕೊಳ್ಳದ ವೀರಶೈವ ಸಂಘದ ಕಾಲೇಜು ವಿರುದ್ಧ ಸಿಡಿದೆದ್ದ ಉಪನ್ಯಾಸಕಿ.. ''ಉಪನ್ಯಾಸಕಿಯಾದ ನಮಗೆ ಹೀಗಾದ್ರೇ ವಿದ್ಯಾರ್ಥಿನಿಯರ ಪರಿಸ್ಥಿತಿ ಏನು ಅನ್ನೋದು ಸಂತ್ರಸ್ತೆ ಪ್ರಶ್ನಿಸಿದ್ದಾರೆ.
ಛೀ ಪಾಪಿ: ಅಪ್ರಾಪ್ತ ಮಲಮಗಳ ಮೇಲೆ ಹಲವು ಬಾರಿ ಅತ್ಯಾಚಾರ; ಕೊನೆಗೂ ಜೈಲು ಪಾಲಾದ!
ತಪ್ಪಿಸ್ಥರ ವಿರುದ್ಧ ಕ್ರಮ: ವಿವಿ ಸಂಘದ ಅಧ್ಯಕ್ಷ
ಲೈಂಗಿಕ ದೌರ್ಜನ್ಯ ಘಟನೆ ಸಂಬಂಧಿಸಿದಂತೆ ಇದೀಗ ಅಧಿಕೃತ ದೂರು ಬಂದಿದೆ. ಸಂತ್ರಸ್ತೆ ಪರವಾಗಿ ನಾವಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ಮಾಡುತ್ತೇವೆ..ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ
ತನಿಖೆ ಪೂರ್ಣವಾಗೋ ವರೆಗೂ ಪ್ರಾಂಶುಪಾಲ ಶರಣಪ್ಪ ಕಾಲೇಜಿಗೆ ಬರದಂತೆ ಸೂಚಿಸಲಾಗಿದೆ. ಶರಣ್ಣಪ್ಪ ಅನುದಾನಿತ ಪ್ರಾಂಶುಪಾಲ ಹುದ್ದೆಯಲ್ಲಿರೋ ಕಾರಣ ಧಿಡೀರ್ ಎಂದು ಕ್ರಮ ತೆಗೆದುಕೊಳ್ಳಲಾಗಲ್ಲ.ಬೋರ್ಡ್ ಮೀಟಿಂಗ್ ಮಾಡಿ, ತನಿಖಾ ತಂಡ ರಚಿಸಿದ ಬಳಿಕ ಅದರ ವರದಿ ಆಧಾರದ ಮೇಲೆ ಕ್ರಮವಾಗಿಲಿದೆ ಎಂದು ಲೈಂಗಿಕ ದೌರ್ಜನ್ಯ ಘಟನೆ ಸಂಬಂಧ ವಿವಿ ಸಂಘದ ಅಧ್ಯಕ್ಷ ರಾಮನಗೌಡ ತಿಳಿಸಿದ್ದಾರೆ.