ಅಕ್ಕನ ಅಕ್ರಮ ಸಂಬಂಧಕ್ಕೆ ಬೇಸತ್ತು ಆಕೆಯ ಮಗುವನ್ನು ಅಪಹರಿಸಿದ್ದ ತಮ್ಮ ಪೊಲೀಸರ ವಶಕ್ಕೆ

By Ravi Janekal  |  First Published Oct 27, 2024, 2:50 PM IST

ಅಕ್ಕನ ಅಕ್ರಮ ಸಂಬಂಧಕ್ಕೆ ಬೇಸತ್ತು ಆಕೆಯ ಮೂರು ವರ್ಷದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ತಮ್ಮನನ್ನು ದಾವಣಗೆರೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.


ದಾವಣಗೆರೆ (ಅ.27): ಅಕ್ಕನ ಅಕ್ರಮ ಸಂಬಂಧಕ್ಕೆ ಬೇಸತ್ತು ಆಕೆಯ ಮೂರು ವರ್ಷದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ತಮ್ಮನನ್ನು ದಾವಣಗೆರೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ತರುಣ್(17) ಬಂಧಿತ ಬಾಲಕ ಗೋಯಲ್(3) ಅಪಹರಣಕ್ಕೊಳಗಾದ ಮಗು. ಬೆಂಗಳೂರಿನಲ್ಲಿ ಅಕ್ಕ ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಅವನೊಂದಿಗೆ ವಾಸಿಸುತ್ತಿದ್ದಳು. ಈ ವಿಚಾರ ತಮ್ಮನಿಗೆ ಗೊತ್ತಾಗಿದೆ. ಅಕ್ರಮ ಸಂಬಂಧ ಬಿಡುವಂತೆ ಹೇಳಿದ್ದ. ಆದರೆ ತಮ್ಮನ ಮಾತಿಗೆ ಕಿವಿಗೊಡದೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ  ಇದರಿಂದ ಅಕ್ಕನ ನಡೆ ಬಗ್ಗೆ ಬೇಸತ್ತು ಆಕೆಯ ಮೂರು ವರ್ಷದ ಮಗುವನ್ನು ಅಪಹರಿಸಿಕೊಂಡು ಪರಾರಿಯಾಗಿದ್ದ ಬಾಲಕ. ಆತಂಕಗೊಂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದ ಮಗುವಿನ ತಾಯಿ.

Tap to resize

Latest Videos

ವಿಡಿಯೋ ಮುಂದಿಟ್ಟು ಮಾಲೀಕಯ್ಯ ಗುತ್ತೇದಾ‌ರ್‌ಗೆ ಮಹಿಳೆಯಿಂದ ಬ್ಲ್ಯಾಕ್‌ಮೇಲ್: 20 ಲಕ್ಷಕ್ಕೆ ಬೇಡಿಕೆ

ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು. ಮಗುವಿನೊಂದಿಗೆ ಬಾಲಕ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿರುವ ವಿಚಾರ ಗೊತ್ತಾಗಿದೆ. ತಕ್ಷಣ ಅಲ್ಲಿಂದ ದಾವಣಗೆರೆ ರೈಲ್ವೆ ಆರ್‌ಪಿಎಫ್ ಪೊಲೀಸರಿಗೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸರು. ಇತ್ತ ದಾವಣಗೆರೆಯಲ್ಲಿ ಇನ್ಸ್‌ಪೆಕ್ಟರ್ ಎಕೆ ರೆಡ್ಡಿ ಹಾಗೂ ಸಿಬ್ಬಂದಿ ಶಿವಾನಂದ, ಅಮಿತ್, ಬಿಂದು ಮಾಧುರಿ ಚುರುಕಾಗಿದ್ದಾರೆ. ದಾವಣಗೆರೆಗೆ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ಟ್ರೈನ್ ಬರುತ್ತಿದ್ದಂತೆ ಪ್ರಯಾಣಿಕರ ತಪಾಸಣೆ ನಡೆಸಿದ ಪೊಲೀಸರು.  ಟ್ರೈನ್‌ನಿಂದ ಮಗುವಿನೊಂದಿಗೆ ಕೆಳಗಿಳಿಯುತ್ತಿದ್ದಂತೆ ಬಾಲಕ ಮತ್ತು ಮಗುವಿನ ರಕ್ಷಣೆ ಮಾಡಿದ ಪೊಲೀಸರು.

click me!