ಚೆಂಡಿನಾಕಾರದ ವಸ್ತುವಿನಲ್ಲಿ ಮೊಬೈಲ್ ಸೆಟ್, ಗಾಂಜಾ ಪ್ಯಾಕೆಟ್, ನಿಷೇಧಿತ ಡ್ರಗ್ಸ್ ಹೋಲುವಂತಹ ಟ್ಯಾಬ್ಲೆಟ್, ತಂಬಾಕು ಪದಾರ್ಥಗಳು ಪತ್ತೆಯಾಗಿದ್ದವು. ಕೊಲೆ ಕೇಸ್‌ನಲ್ಲಿ ಜೈಲೊಳಗಿರುವ ಅಪರಾಧಿಗಳಿಗೆ ಇವುಗಳನ್ನು ತಲುಪಿಸಲು ತಾವು ಯತ್ನಿಸಿದ್ದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ ಕಲಬುರಗಿ ಪೊಲೀಸ್ ಕಮೀಷನರ್ ಡಾ.ಶರಣಪ್ಪ
ಕಲಬುರಗಿ(ಅ.27): ಇಲ್ಲಿನ ಕೇಂದ್ರ ಕಾರಾಗೃಹದೊಳಗೆ ನಿಷಿದ್ದ ಪದಾರ್ಥಗಳಿಂದ ತುಂಬಿದ್ದ ಚೆಂಡಿನ ಮಾದರಿಯ ವಸ್ತುಗಳನ್ನು ಎಸೆದ ಆರೋಪದ ಮೇಲೆ ವಿಚಾರಣೆ ನಡೆಸಿರುವ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖ ಲಿಸಿಕೊಂಡಿದ್ದಾರೆ.
ಈ ಸಂಬಂಧ ಇಂದಿರಾ ನಗರದ ನಿವಾಸಿ ಲೋಕೇಶ ಸುಭಾಷ (24), ಹೋಟೆಲ್ ಕಾರ್ಮಿಕ ಉದಯ ಕುಮಾರ್ ದೊಡ್ಡನಿ (29), ಜೆಸಿಬಿ ಆಪರೇಟರ್ ಮುಬಾರಕ್ ಅಬ್ಬಾಸ ಅಲಿ ಹಾಗೂ ಮೆಕ್ಯಾನಿಕ್ ಸಾಜೀದ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
undefined
ಕಲಬುರಗಿ ಜೈಲಲ್ಲೂ ರಾಜಾತಿಥ್ಯ: ಗಾಂಜಾ ಹೊಡೆಯುತ್ತ ಸೆಲ್ಫಿಗೆ ಪೋಸ್ ಕೊಟ್ಟ ಕೈದಿಗಳು!
ಚೆಂಡಿನಾಕಾರದ ವಸ್ತುವಿನಲ್ಲಿ ಮೊಬೈಲ್ ಸೆಟ್, ಗಾಂಜಾ ಪ್ಯಾಕೆಟ್, ನಿಷೇಧಿತ ಡ್ರಗ್ಸ್ ಹೋಲುವಂತಹ ಟ್ಯಾಬ್ಲೆಟ್, ತಂಬಾಕು ಪದಾರ್ಥಗಳು ಪತ್ತೆಯಾಗಿದ್ದವು. ಕೊಲೆ ಕೇಸ್‌ನಲ್ಲಿ ಜೈಲೊಳಗಿರುವ ಅಪರಾಧಿಗಳಿಗೆ ಇವುಗಳನ್ನು ತಲುಪಿಸಲು ತಾವು ಯತ್ನಿಸಿದ್ದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಕಲಬುರಗಿ ಪೊಲೀಸ್ ಕಮೀಷನರ್ ಡಾ.ಶರಣಪ್ಪಗೆ ತಿಳಿಸಿದ್ದಾರೆ.