ಕಳುವಾದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಿದ ದಾವಣಗೆರೆ ಪೊಲೀಸರು!

By Govindaraj S  |  First Published Jul 23, 2023, 5:35 PM IST

ವಿದ್ಯಾಕಾಶಿ ದಾವಣಗೆರೆ ಸೇರಿದಂತೆ, ನಾನಾ ಕಡೆ ಕಳ್ಳತನವಾಗಿದ್ದ ಬೈಕ್, ಆಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ನಗರ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ರಿಕವರಿ ಮಾಡಲಾಗಿದ್ದು, ಅವುಗಳನ್ನು ಕಳೆದುಕೊಂಡವರಿಗೆ ವಾಪಸ್ ನೀಡಲಾಯಿತು. 


ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಜು.23): ವಿದ್ಯಾಕಾಶಿ ದಾವಣಗೆರೆ ಸೇರಿದಂತೆ, ನಾನಾ ಕಡೆ ಕಳ್ಳತನವಾಗಿದ್ದ ಬೈಕ್, ಆಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ನಗರ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ರಿಕವರಿ ಮಾಡಲಾಗಿದ್ದು, ಅವುಗಳನ್ನು ಕಳೆದುಕೊಂಡವರಿಗೆ ವಾಪಸ್ ನೀಡಲಾಯಿತು. ಒಟ್ಟು 55 ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದುಘಿ, 42 ಬೈಕ್‌ಗಳು , 2 ಕಾರ್‌ಗಳು ಮತ್ತು 1 ಆಟೋ, 22 ಲಕ್ಷದ 54 ಸಾವಿರದ 230 ರೂಪಾಯಿ ಹಣ, 940 ಗ್ರಾಂ ಬಂಗಾರ ಮತ್ತು 600 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ಬಸರಗಿ ತಿಳಿಸಿದರು. 

Tap to resize

Latest Videos

ದಾವಣಗೆರೆ ಸಿಟಿ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದ ಪೊಲೀಸರು ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದ ಕಚೇರಿಯಲ್ಲಿ ಸಂತ್ರಸ್ತರಿಗೆ ವಾಪಸ್ ಕೊಡಿಸುವ ವೇಳೆ ಕಳೆದುಕೊಂಡವರು ಪೊಲೀಸರಿಗೆ ಶಹಬ್ಬಾಸ್‌ಗಿರಿ ಕೊಟ್ಟರು.  ದಾವಣಗೆರೆ ಜಿಲ್ಲಾ  ಪೊಲೀಸ್ ಇಲಾಖೆಯಿಂದ ನಗರದ ಡಿಎಆರ್ ಆವರಣದಲ್ಲಿ ಪ್ರಾಪರ್ಟಿ ಪರೇಡ್ ನಲ್ಲಿ ಎಎಸ್ಪಿ ಬಸರಗಿ ವಿವಿಧ ಠಾಣೆಗಳ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ಕಳೆದುಕೊಂಡವರಿಗೆ ನೀಡಿದರು. ಕಳವಾದ ವಸ್ತು ಪಡೆಯಲು ವಾರಸುದಾರರಲ್ಲಿ ಎಲ್ಲಿಲ್ಲದ ಉತ್ಸಾಹ ಕಂಡುಬಂದಿತು. 

Davanagere: ದರೋಡೆಗೆ ಹೊಂಚು ಹಾಕಿದ್ದ 6 ಆರೋಪಿಗಳ ಬಂಧನ

ತಮ್ಮ ವಸ್ತುಗಳನ್ನು ಪಡೆಯುವಾಗ ಮಂದಹಾಸವಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.  55 ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ನಗದು, ಚಿನ್ನ, ಬೆಳ್ಳಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಶೇ 100ರಷ್ಟನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧ ವಿಭಾಗದ ಸಿಬ್ಬಂದಿ ಹೆಚ್ಚಿನ ಶ್ರಮ ವಹಿಸಿದ್ದಾರೆ. ವಾಪಸ್ ಬರುವುದಿಲ್ಲ ಎಂದುಕೊಂಡವರು ಖುಷಿ ಪಟ್ಟಿದ್ದಾರೆ’ ಎಂದು  ಎಎಸ್ಪಿ ಬಸರಗಿ ಮಾಹಿತಿ ನೀಡಿದರು. ನಾನು ನನ್ನ ಗಂಡನಿಗೆ ವಯಸ್ಸಾಗಿದ್ದು, ಇಬ್ಬರೇ ಸರಸ್ವತಿ ನಗರದಲ್ಲಿ ವಾಸ ಮಾಡುತ್ತಿದ್ದೇವೆ. 

ಹೀಗಿರುವಾಗ ಮನೆ ಬಳಿ ಐಸ್‌ಕ್ರೀಂ ಮಾರುವ ಆಗಾಗ ಬರುತ್ತಿದ್ದ. ನಾವಿಬ್ಬರೇ ಇರುವುದನ್ನು ನೋಡಿ, ಒಂದು ದಿನ ಮನೆಯೊಳಗೆ ನುಗ್ಗಿಘಿ, ಬಾಯಿ ಬಿಗಿ ಹಿಡಿದು ಮೊಬೈಲ್ ಕಳ್ಳತನ ಮಾಡಿದ್ದ. ಪೊಲೀಸರು ಕಳ್ಳನನ್ನು ಹಿಡಿದು ಮೊಬೈಲ್ ವಾಪಸ್ ಕೊಟ್ಟಿದ್ದಾರೆ. ಇದು ಕೇವಲ ಚಿಕ್ಕ ಸಾಮಾಗ್ರಿಯಾದರೂ, ಪೊಲೀಸರು ಅದನ್ನು ತಲೆ ಕೆಡಿಸಿಕೊಂಡು ಹುಡುಕಿ ಕೊಟ್ಟಿದ್ದಾರೆ ಎಂದು ವೃದ್ಧ ದಂಪತಿ ಪೊಲೀಸರಿಗೆ ಧನ್ಯವಾದ ಸಮರ್ಪಿಸಿದರು. 

ಚಿನ್ನಾಭರಣ ವಶ: ನಗರದ ಹೊರವಲಯದ ಮನೆಗಳನ್ನು ಟಾರ್ಗೇಟ್ ಮಾಡಿ ದರೋಡೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 25.75 ಲಕ್ಷ ವೌಲ್ಯದ ನಗದು ಸಹಿತ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.  ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಗೋವಿಂದ ಬಡಾವಣೆ ನಿವಾಸಿಗಳಾದ ಮಾರುತಿ, ಶಿವರಾಜ್ ಲಮಾಣಿ, ಸುನೀಲ್ ಲಮಾಣಿ, ಮನೋಜ್ ಲಮಾಣಿ, ಅಭಿಷೇಕ ಹಾಗೂ ಮಹಾಂತೇಶ ಬಂಧಿಸಿದ್ದರು. ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಡಾಲರ್ಸ್ ಕಾಲೋನಿಯ ಡಾ.ತಿಪ್ಪೇಸ್ವಾಮಿ ಎಂಬ ವೈದ್ಯರ ಜೂನ್ 4 ರಂದು ಮನೆ ಬೀಗ ಹಾಕಿಕೊಂಡು ಸಂಬಂಧಿಕರ ಮದುವೆಗೆ ತೆರಳಿದ್ದರು. ಮನೆಯ ಬೀಗ ಮುರಿದಿರುವ ಕಳ್ಳರು ಸುಮಾರು 31 ಲಕ್ಷ ರೂಪಾಯಿ ವೌಲ್ಯದ ಚಿನ್ನ, ಬೆಳ್ಳಿ ಕಳ್ಳತನ ಮಾಡಿದ್ದರು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೆ ಡಾ. ತಿಪ್ಪೇಸ್ವಾಮಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಹೆದ್ದಾರಿ ಬಡಾವಣೆಗಳಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೇಟ್ ಮಾಡುತ್ತಿದ್ದ ಆರು ಜನರ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ. ಇವರಿಂದ 25.75 ಲಕ್ಷ ವೌಲ್ಯದ ನಗದು ಸಹಿತ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಗ್ಯಾಂಗ್ ಹೆಸರು ಯಂಗ್ ಸ್ಟಾರ್ ಗ್ಯಾಂಗ್ ಎಂದು ಇಟ್ಟುಕೊಂಡಿದ್ದಾರೆ. ಈ ಗ್ಯಾಂಗ್ ಮೂರು ನಾಲ್ಕು ದಿನ ಹೆದ್ದಾರಿ ಪಕ್ಕದ ಜನ ವಸತಿ ಪ್ರದೇಶದಲ್ಲಿ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಬೈಕ್‌ನ ಹಿಂದೆ ಮಹಿಳೆಯರನ್ನು ಕುರಿಸಿಕೊಂಡು ಸುತ್ತಾಡಿ ಯಾರು ಎಲ್ಲಿಗೆ ಹೋಗುತ್ತಾರೆ. 

ಶೀಘ್ರದಲ್ಲಿ ಚಿತ್ರದುರ್ಗ ಮೆಡಿಕಲ್‌ ಕಾಲೇಜು ಶುರು: ಸಚಿವ ಡಿ.ಸುಧಾಕರ್‌

ಯಾರ ಮನೆ ಬೀಗ ಹಾಕಿದೆ ಎಂಬ ಮಾಹಿತಿ ಪಡೆದು ಗ್ಯಾಂಗ್‌ಗೆ ಮಾಹಿತಿ ನೀಡುತ್ತಿದ್ದರು.  ಬಳಿಕ ಗ್ಯಾಂಗ್ ತಡ ರಾತ್ರಿ ಬಂದು ದಾಳಿ ಮಾಡಿ, ಜೊತೆಗೆ ಒಂಟಿ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಹೋಗುವ ಪ್ರಕರಣಗಳಲ್ಲಿ ಇವರ ಕೈಚಳಕ ಇದೆ ಎಂಬುದು ತನಿಖೆ ಯಿಂದ ಗೊತ್ತಾಗಿದೆ. ಬೆಂಗಳೂರಿನಿಂದ ಬೆಳಗಾವಿ ತನಕ ಹೆದ್ದಾರಿ ಪಕ್ಕದ ಮನೆಗಳ ಮೇಲೆ ಇವರು ಪೊಲೀಸರಿಗಿಂತ ಹೆಚ್ಚಾಗಿ ನಿಗಾ ವಹಿಸಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳತನ ಮಾಡುತ್ತಾರೆ. ಕಳ್ಳತನದ ಜೊತೆಗೆ ಸಿಸಿ ಕ್ಯಾಮರಾ ಡಿವಿಆರ್ ತೆಗೆದುಕೊಂಡು ಹೋಗುತ್ತಿದ್ದರು. ಈ ದರೋಡೆಕೋರರ ತಂಡವನ್ನು ಬಂಧಿಸಿದ್ದಾರೆ ಎಂದು ಎಎಸ್ಪಿ ಬಸರಗಿ ತಿಳಿಸಿದರು.

click me!