ದಾವಣಗೆರೆ ದರೋಡೆ ಪ್ರಕರಣ: ಐವರ ಬಂಧನ ₹10ಲಕ್ಷ ಸ್ವತ್ತು ಜಪ್ತಿ

By Kannadaprabha News  |  First Published May 6, 2023, 10:56 AM IST

ಪ್ರಸಿದ್ಧ ಕಂಪನಿಗಳ ಚಪ್ಪಲಿಗಳ ಕಂಪನಿಯಿಂದ ನೇರ ಕೊಡಿಸುವುದಾಗಿ ನಂಬಿಸಿ, ಕೇರಳದ ಮೂವರನ್ನು ದಾವಣಗೆರೆಗೆ ಕರೆಸಿ,ಹಲ್ಲೆ ಮಾಡಿ, ಹಣ, ವಸ್ತುಗಳನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 10 ಲಕ್ಷ ರು. ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.


ದಾವಣಗೆರೆ (ಮೇ.6) : ಪ್ರಸಿದ್ಧ ಕಂಪನಿಗಳ ಚಪ್ಪಲಿಗಳ ಕಂಪನಿಯಿಂದ ನೇರ ಕೊಡಿಸುವುದಾಗಿ ನಂಬಿಸಿ, ಕೇರಳದ ಮೂವರನ್ನು ದಾವಣಗೆರೆಗೆ ಕರೆಸಿ,ಹಲ್ಲೆ ಮಾಡಿ, ಹಣ, ವಸ್ತುಗಳನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 10 ಲಕ್ಷ ರು. ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಯಲ್ಲಾಪುರದ ಪ್ರವೀಣ್‌ ಅಲಿಯಾಸ್‌ ಪಿಕೆ ಅಲಿಯಾಸ್‌ ರಫೀಕ್‌(23 ವರ್ಷ), ದೇವಣ್ಣ ಅಲಿಯಾಸ್‌ ಡುಮ್ಮ(39 ವರ್ಷ), ಸುಭಾಷ್‌ ಅಲಿಯಾಸ್‌ ಸುಬ್ಬು(24), ಹರಪನಹಳ್ಳಿ ವೀರೇಶ(23), ದಾವಣಗೆರೆ ಕೆಟಿಜೆ ನಗರದ ಎಲ್‌.ಸಂಜಯ್‌ ಬಂಧಿತ ಆರೋಪಿಗಳು. ಬಂಧಿತರು ದರೋಡೆ ಮಾಡಿದ್ದ 10 ಸಾವಿರ ರು. ನಗದು, 40 ಸಾವಿರ ಮೌಲ್ಯದ 2 ಮೊಬೈಲ್‌, ಕೃತ್ಯಕ್ಕೆ ಬಳಸಿದ್ದ 8 ಲಕ್ಷ ಮೌಲ್ಯದ ಕಾರು, 1.5 ಲಕ್ಷ ಮೌಲ್ಯದ ಬುಲೆಟ್‌ ವಾಹನ ಸೇರಿ 10 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದು, ತಲೆ ಮರೆಸಿಕೊಂಡ ಇತರೆ ಆರೋಪಿಗಳಿಗೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

Tap to resize

Latest Videos

ಜಮಖಂಡಿ: ಮಗಳ ಮದುವೆಗೆ ಬೈಕ್‌ನಲ್ಲಿ ಇಟ್ಟಿದ್ದ 1.50 ಲಕ್ಷ ಹಣ ದೋಚಿದ ಖದೀಮರು..!

ಕೇರಳದ ವಯನಾಡು ಜಿಲ್ಲೆಯ ಸಿ.ಆರ್‌.ರಾಶೀಕ್‌, ಆತನ ಸ್ನೇಹಿತರಾದ ಅಭಿನೋಶನ್‌, ನಿಜಾಮುದ್ದೀನ್‌ಗೆ ರಫೀಕ್‌ ಎಂಬ ಪರಿಚಯಸ್ಥನು ದಾವಣಗೆರೆಯ ಬಾಡಾ ಕ್ರಾಸ್‌ ಬಳಿ ಕಡಿಮೆ ಬೆಲೆಗೆ ಕಂಪನಿಯಿಂದ ನೇರವಾಗಿ ಚಪ್ಪಲಿಗಳನ್ನು ಕಡಿಮೆ ದರಕ್ಕೆ ಕೊಡಿಸುವುದಾಗಿ ಕಳೆದ ಏ.30ರಂದು ಇಲ್ಲಿನ ಬಾಡಾ ಕ್ರಾಸ್‌ನ ಆವರಗೆರೆ ಕೆರೆಯ ರಸ್ತೆಗೆ ಕರೆಸಿದ್ದರು. ನಂತರ ರಫೀಕ್‌ ಹಾಗೂ ಆತನ ಐವರು ಸಹಚರರು ಸೇರಿ, ಕೇರಳದಿಂದ ಬಂದಿದ್ದ ಮೂವರ ಮೇಲೂ ಹಲ್ಲೆ ಮಾಡಿ, ಕೇರಳಿಗರ ಬಳಿ ಇದ್ದ 57 ಸಾವಿರ ರು. ನಗದು, 3 ಮೊಬೈಲ್‌, ಪರ್ಸ್‌, ದಾಖಲಾತಿಗಳು ಇದ್ದ ಬ್ಯಾಗ್‌ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಕೇರಳದ ಮೂವರೂ ಇಲ್ಲಿನ ವಿದ್ಯಾನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಎಎಸ್ಪಿ ರಾಮಗೊಂಡ ಬಿ.ಬಸರಗಿ ನಿರ್ದೇಶನದಲ್ಲಿ ನಗರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ವಿದ್ಯಾನಗರ ಠಾಣೆ ಇನ್ಸಪೆಕ್ಟರ್‌ ಪ್ರಭಾವತಿ ಸಿ.ಶೇತಸನದಿತ ಸಂಚಾರಿ ವೃತ್ತದ ಇನ್ಸಪೆಕ್ಟರ್‌ ಆರ್‌.ಪಿ.ಅನಿಲ್‌ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸಿದೆ

ನಾಲ್ವರು ಅಂತಾರಾಜ್ಯ ಮನೆಗಳ್ಳರ ಬಂಧನ

ದಾವಣಗೆರೆ: ಮನೆ ಬಾಗಿಲ ಬೀಗ ಮುರಿದು 1.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ಬೇಧಿಸಿ, ನಾಲ್ವರು ಅಂತಾರಾಜ್ಯ ಮನೆಗಳ್ಳತನದ ಆರೋಪಿಗಳನ್ನು ಬಂಧಿಸಿ, 39.62 ಲಕ್ಷ ರು. ಮೌಲ್ಯದ 762 ಗ್ರಾಂ ಚಿನ್ನದ ಆಭರಣಗಳ ಇಲ್ಲಿನ ಕೆಟಿಜೆ ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾ. ಕುಪ್ಪಿನಕೆರೆ ಗ್ರಾಮದ ಆಟೋ ಚಾಲಕ ರಾಜ ಅಲಿಯಾಸ್‌ ಪೋತರಾಜ ಅಲಿಯಾಸ್‌ ಸದ್ದಾಂ(31 ವರ್ಷ), ಮೂಲತಃ ಚಿಕ್ಕಮಗಳೂರು ಜಿಲ್ಲೆ ಗಡಬನಹಳ್ಳಿ ಗ್ರಾಮದವನಾದ, ಹಾಲಿ ದಾವಣಗೆರೆ ನಿಟುವಳ್ಳಿ ಕೊರಚರಹಟ್ಟಿಶ್ರೀ ಚೌಡಮ್ಮ ದೇವಸ್ಥಾನ ಎದುರಿನ ವಾಸಿ ಗಾರೆ ಕೆಲಸಗಾರ ಮನು ಅಲಿಯಾಸ್‌ ಮನ್ಸೂರ್‌(35), ಗಾರೆ ಕೆಲಸಗಾರರಾದ ಗಡಬನಹಳ್ಳಿಯ ಎಚ್‌.ಎಲ್‌.ಜಗದೀಶ(22), ಎಚ್‌.ಎಸ್‌.ಗಿರೀಶ(22)) ಬಂಧಿತ ಆರೋಪಿಗಳು.

ಮನೆಯ ಕೀ ಬಳಸಿ ಲಕ್ಷಾಂತರ ರೂ. ಚಿನ್ನಾಭರಣ ದೋಚಿದಾತ ಅರೆಸ್ಟ್!

ದಾವಣಗೆರೆ ನಗರದಲ್ಲಿ ಏ.15ರಂದು ಬೀಗ ಹಾಕಿದ್ದ ಮನೆಯ ಬಾಗಿಲನ್ನು ತೆಗೆದು, ಬೀರುವಿನಲ್ಲಿಟ್ಟಿದ್ದ 285 ಗ್ರಾಂ ಚಿನ್ನಾಭರಣ, 1.5 ಲಕ್ಷ ರು. ನಗದು ಕಳವು ಮಾಡಿರುವ ಬಗ್ಗೆ ನಗರದ ವಾಸಿಯೊಬ್ಬರು ಕೆಟಿಜೆ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಪ್ರಕರಣ ಬೇಧಿಸಲು ಎಎಸ್ಪಿ ಆರ್‌.ಬಿ.ಬಸರಗಿ ನಿರ್ದೇಶನದಲ್ಲಿ ನಗರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಎ.ಕೆ.ರುದ್ರೇಶ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆ ನಿರೀಕ್ಷಕ ಯು.ಜೆ.ಶಶಿಧರ್‌ ನೇತೃತ್ವದ ಪೊಲೀಸ್‌ ಸಿಬ್ಬಂದಿ ಮನೆಗಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿ, ಕಳುವಾಗಿದ್ದ 850 ಗ್ರಾಂ ಚಿನ್ನದದ ಪೈಕಿ 762 ಗ್ರಾಂ ಚಿನ್ನಾಭರಣ ಜಪ್ತು ಮಾಡಿದ್ದು, ಉಳಿದ ಆಭರಣ ಜಪ್ತು ಮಾಡಲು ತನಿಖೆ ಕೈಗೊಂಡಿದೆ.

click me!