ದಾವಣಗೆರೆಯಲ್ಲಿ ಅಸಭ್ಯ ವರ್ತನೆ ಮತ್ತು ಕಳವು ಆರೋಪದ ಮೇಲೆ ಅಪ್ರಾಪ್ತ ಬಾಲಕನಿಗೆ ಕಿಡಿಗೇಡಿ ಯುವಕರು ಅಡಕೆ ಮರಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಾವಣಗೆರೆ (ಏ.6): ಅಸಭ್ಯ ವರ್ತನೆ ಮಾಡುತ್ತಿದ್ದ, ಕಳವು ಮಾಡಿದ್ದಾನೆಂಬ ವಿಚಾರಕ್ಕೆ ಅಪ್ರಾಪ್ತ ಬಾಲಕನೊಬ್ಬನಿಗೆ ಕಿಡಿಗೇಡಿ ಯುವಕರು ಅಡಕೆ ಮರಕ್ಕೆ ಕಟ್ಟಿ ಹಾಕಿ, ಚಿತ್ರಹಿಂಸೆ ನೀಡಿದ ಘಟನೆ ಚನ್ನಗಿರಿ ತಾ. ನಲ್ಲೂರು ಗ್ರಾಮದಲ್ಲಿ ವರದಿಯಾಗಿದೆ.
ಚನ್ನಗಿರಿ ತಾ. ನಲ್ಲೂರು ಸಮೀಪದ ಅಸ್ತಾಫನಹಳ್ಳಿಯಲ್ಲಿ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕನು ಕಿಡಿಗೇಡಿಗಳಿಂದ ಇನ್ನಿಲ್ಲದ ಚಿತ್ರಹಿಂಸೆ ಅನುಭವಿಸಿದ ವೀಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಅಪ್ರಾಪ್ತನನ್ನು ಅರೆಬೆತ್ತಲೆ ಮಾಡಿ, ಚಡ್ಡಿಯಲ್ಲಿ ಅಡಿಕೆ ಮರಕ್ಕೆ ಕಟ್ಟಿ ಹಾಕಿದ್ದ ಕಿಡಿಗೇಡಿಗಳು ಗರಿಗಳಲ್ಲಿ ಇದ್ದಂತಹ ಕೆಂಪು ಇರುವೆ, ಗೊದ್ದಗಳನ್ನು ಮರಕ್ಕೆ ಹಿಮ್ಮುಖವಾಗಿ ಕೈಕಟ್ಟಿದ್ದ ಅಪ್ರಾಪ್ತನ ತಲೆ, ಮೈಮೇಲೆ, ಗುಪ್ತಾಂಗಗಳಿಗೆ ಬಿಟ್ಟು, ಆತ ಚೀರುವುದು, ಅಳುವುದನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಾ, ವಿಕೃತವಾಗಿ ನಗುವ ದೃಶ್ಯಗಳು ಎಂತಹವರ ಆಕ್ರೋಶಕ್ಕೆ ಗುರಿಯಾಗುವಂತಿವೆ.
ತೀವ್ರ ಹಲ್ಲೆ, ಹಿಂಸೆಯಿಂದ ತತ್ತರಿಸಿದ್ದ ಬಾಲಕ ತಪ್ಪಾಯಿತು ಬಿಡಿ ಎಂಬುದಾಗಿ ಅಳುತ್ತಾ, ಚೀರಾಡುತ್ತಿದ್ದರೂ ಕಲ್ಲು ಮನಸ್ಸಿನ ಕಿಡಿಗೇಡಿಗಳು ಅಪ್ರಾಪ್ತನ ನೋವಿನಂತೆ ನರಳುವುದನ್ನು
ಅಣಕಿಸುವಂತೆ ವರ್ತಿಸುತ್ತಿರುವುದು ಕಂಡು ಬಂದಿದೆ. ನಲ್ಲೂರು ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ ಜನಾಂಗದ ಬಾಲಕನಿಗೆ ಅದೇ ಯುವಕನ ಸಂಬಂಧಿಗಳು ಎನ್ನಲಾದ ಕಿಡಿಗೇಡಿಗಳು ಹೀಗೆಲ್ಲಾ ನಡೆಸಿಕೊಂಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೆಂಗಳೂರು: ತಿರುಚಿದ ವಿಡಿಯೋ ತೋರಿಸಿ ನಿವೃತ್ತ ಎಂಜಿನಿಯರ್‌ಗೆ ₹2 ಕೋಟಿ ಸುಲಿಗೆ ಯತ್ನಿಸಿದ ಆರೋಪಿಗಳು ಅರೆಸ್ಟ್
ಬಾಲಕ ಅಸಭ್ಯವಾಗಿ ವರ್ತಿಸುತ್ತಿದ್ದುದಲ್ಲದೇ, ಕಳ್ಳತನ ಮಾಡುತ್ತಿದ್ದ ಎಂಬ ಕಾರಣಕ್ಕೆ ಆತನ ಸಂಬಂಧಿಗಳೇ ಹೀಗೆ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿವೆ. ಹಲ್ಲೆಗೆ ಮುಂಚೆ ಗ್ರಾಮದಲ್ಲಿ ಚಿಕ್ಕಪುಟ್ಟ ಕಳ್ಳತನ ಮಾಡುತ್ತಿದ್ದ ಬಾಲಕ ಹೀಗೆ ಇನ್ನಿಲ್ಲದ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಮಹಿಳೆಯರು, ಮಕ್ಕಳ ಮುಂದೆ ಉದ್ದೇಶಪೂರ್ವಕವಾಗಿ ತನ್ನ ಜನನಾಂಗ ಪ್ರದರ್ಶಿಸುವ ಮೂಲಕ ಅಸಭ್ಯ ವರ್ತನೆ ತೋರುತ್ತಿದ್ದುದರಿಂದಲೂ ಜನ ರೋಸಿದ್ದ ಎನ್ನಲಾಗಿದೆ.
ಸೆಕ್ಸ್ ವೀಡಿಯೋಗಳನ್ನು ನೋಡುತ್ತಾ, ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿ, ಜನರಿಗೆ ಮುಜುಗರ ಉಂಟು ಮಾಡುತ್ತಿದ್ದ. ಇದೆಲ್ಲದರಿಂದ ರೋಸಿ ಹೋಗಿದ್ದ ಗ್ರಾಮದ ಕೆಲವು ಯುವಕರು ಹೀಗೆ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ಸತ್ಯಾಸತ್ಯತೆಯ ಬಗ್ಗೆಯೂ ಈಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.
ಇದನ್ನೂ ಓದಿ: ನ್ಯಾಮತಿ ಎಸ್‌ಬಿಐ ಲೂಟಿ ಪ್ರಕರಣ; ರಾಜ್ಯದ ಅತಿದೊಡ್ಡ ಚಿನ್ನ ದರೋಡೆ ಕೇಸ್ ಭೇದಿಸಿದ ಪೊಲೀಸರು!
ದೇಶ, ವಿದೇಶಗಳಲ್ಲಿ ಗಿಡ ಮೂಲಿಕೆ ಔಷಧಿ ಮಾರಾಟ ಮಾಡಿ, ಮಸಾಜ್ ಮಾಡಿ ಜೀವನ ನಡೆಸುವ ಸಮುದಾಯವಾದ ಹಕ್ಕಿಪಿಕ್ಕಿ ಜನರು ಸುಡಾನ್ ಸೇರಿದಂತೆ ಆಫ್ರಿಕಾದ ಅನೇಕ ದೇಶ
ಗಳಲ್ಲಿ ಹಿಂದೆ ಸಿಲುಕಿದ್ದು, ಅಂತಹವರ ಬಗ್ಗೆ ಆಗಾಗ್ಗೆ ಪತ್ರಿಕೆಗಳಲ್ಲೂ ವರದಿಯಾಗಿ, ಸುರಕ್ಷಿತವಾಗಿ ಮರಳುತ್ತಿರುವ ಸಮುದಾಯ ಇದು.