ಜಾತಿ ಪ್ರಮಾಣಪತ್ರ ವಿವಾದ: ಎಂ.ಪಿ ರೇಣುಕಾಚಾರ್ಯ ಸಹೋದರ ಸೇರಿ 11 ಮಂದಿ ವಿರುದ್ಧ FIR

By Suvarna News  |  First Published Apr 3, 2022, 6:22 PM IST

* ತೀವ್ರ ಸ್ವರೂಪ ಪಡೆದುಕೊಂಡ ಜಾತಿ ಪ್ರಮಾಣಪತ್ರ ವಿವಾದ
* ಎಂ.ಪಿ ರೇಣುಕಾಚಾರ್ಯ ಸಹೋದರ ಸೇರಿ 11 ಮಂದಿ ವಿರುದ್ಧ FIR ದಾಖಲು
* ಪ್ರಕರಣ ಸಂಬಂಧ ದಲಿತ ಸಂಘಟನೆ ಮುಖಂಡ ಹೆಗ್ಗರೆ ರಂಗಪ್ಪ ದೂರು ನೀಡಿದ್ದರು. 


ದಾವಣಗೆರೆ, (ಏ.03): ಬೇಡ ಜಂಗಮ ಜಾತಿ ಪ್ರಮಾಣ ಪತ್ರ (Caste Certificate) ವಿವಾದಕ್ಕೆ ಸಂಬಂಧಿಸಿ ಸಿಎಂ ರಾಜಕೀಯ ಕಾರ್ಯದರ್ಶಿ, ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರ ಸೇರಿ 11 ಜನರ ವಿರುದ್ಧ FIR ದಾಖಲು ಮಾಡಲಾಗಿದೆ. ದಾವಣಗೆರೆ (ಧಾವಾನಾಗೆರೆ) ಕೆಟಿಜೆ ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಪ್ರಕರಣ ಸಂಬಂಧ ದಲಿತ ಸಂಘಟನೆ ಮುಖಂಡ ಹೆಗ್ಗರೆ ರಂಗಪ್ಪ ದೂರು ನೀಡಿದ್ದರು. ದಲಿತ ಮುಖಂಡರು, ದ್ವಾರಕೇಶ್ವರಯ್ಯ ಮಧ್ಯೆ ವಾಗ್ವಾದ ನಡೆದಿತ್ತು. ಮಾರ್ಚ್​ 28 ರಂದು ಕೆ.ಬಿ. ಬಡಾವಣೆಯಲ್ಲಿ ಘಟನೆ ನಡೆದಿತ್ತು. ದ್ವಾರಕೇಶ್ವರಯ್ಯನಿಗೆ ದಲಿತ ಮುಖಂಡರು ಘೇರಾವ್ ಹಾಕಿದ್ದರು. ಇದೀಗ ರೇಣುಕಾಚಾರ್ಯ ಸೋದರರ ದ್ವಾರಕೇಶ್ವರಯ್ಯ ವಿರುದ್ಧ FIR ದಾಖಲಿಸಲಾಗಿದೆ. ದ್ವಾರಕೇಶ್ವರಯ್ಯ ಸೇರಿದಂತೆ 11 ಜನರ ವಿರುದ್ಧ FIR ದಾಖಲು ಮಾಡಲಾಗಿದೆ. 143, 147, 323, 504, 506, 149 ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ.

Tap to resize

Latest Videos

ರೇಣುಕಾಚಾರ್ಯ ಸಹೋದರನಿಗೆ ಘೇರಾವ್.. ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡ್ರಾ?

ಈ ಮೊದಲು ದ್ವಾರಕೇಶ್ವರಯ್ಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ 13 ಜನ ದಲಿತ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ದ್ವಾರಕೇಶ್ವರಯ್ಯ ಸೇರಿದಂತೆ 11 ಜನರ ಮೇಲೆ ದಲಿತ ಸಂಘಟನೆ ಮುಖಂಡರಿಂದ ಪ್ರಕರಣ ದಾಖಲು ಮಾಡಲಾಗಿದೆ.

ಬೇಡ ಜಂಗಮ ಎಂದು ನಕಲಿ ಎಸ್ಸಿ ಜಾತಿ ಪ್ರಮಾಣ ಪತ್ರ (Caste Certificate) ಪಡೆದಿದ್ದಾರೆ ಎಂದು ಆರೋಪಿಸಿ ದ್ವಾರಕೇಶ್ವರಯ್ಯ ಅವರನ್ನು ದಲಿತ ಮುಖಂಡರು ಈ ಮೊದಲು ಮುತ್ತಿಗೆ ಹಾಕಿದ್ದರು. ಈ ಹಿನ್ನೆಲೆ ಮತ್ತೆ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ. ದ್ವಾರಕೇಶ್ವರಯ್ಯ ಹೋರಾಟಕ್ಕೆ ಮುಂದಾಗಿದ್ದಾರೆ. ಹೂವಿನಮಡು ಅಂಜನಪ್ಪ, ಹೆಗ್ಗೆರೆ ರಂಗಪ್ಪ ಸೇರಿ 13 ಜನ ದಲಿತ ಮುಖಂಡರ ವಿರುದ್ಧ ದ್ವಾರಕೇಶ್ವರಯ್ಯ ಎಫ್.ಐ.ಆರ್ ದಾಖಲಿಸಿದ್ದರು.

ಮಾರ್ಚ್ 28 ರಂದು ದಾವಣಗೆರೆ ಪ್ರೆಸ್ ಕ್ಲಬ್ ಎದುರು ನಡೆದ ಘಟನೆ ಹಿನ್ನೆಲೆ ಎಫ್ ಐ ಆರ್ ದಾಖಲು ಮಾಡಲಾಗಿತ್ತು.  ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದ್ವಾರಕೇಶ್ವರಯ್ಯ ದೂರು ದಾಖಲಿಸಿದ್ದರು. ರೇಣುಕಾಚಾರ್ಯ ವಿರುದ್ಧ ಹೋರಾಟಕ್ಕೆ ಸಜ್ಜಾದ ದಲಿತ ಸಂಘಟನೆಗಳು ರೇಣುಕಾಚಾರ್ಯ ಕುಟುಂಬ ಈಗಾಗಲೇ ಹಿಂದು ಲಿಂಗಾಯತ ಇದ್ದವರು ಬೇಡಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ವಿಚಾರ ಪ್ರಶ್ನೆ ಮಾಡಿದಕ್ಕೆ ರೇಣುಕಾಚಾರ್ಯ ಸಹೋದರನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ರೇಣುಕಾಚಾರ್ಯ ಅವರನ್ನ ತಕ್ಷಣ ಗಡಿಪಾರು ಮಾಡಬೇಕು. ವಿಳಂಬವಾದ್ರೆ ದಲಿತ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ಆರಂಭಿಸುವುದಾಗಿ ದಲಿತರ ಸಂಘಟನೆಗಳ ಒಕ್ಕೂಟದಿಂದ ಎಚ್ಚರಿಕೆ ನೀಡಿದ್ದರು.

ಶಾಸಕ ರೇಣುಕಾಚಾರ್ಯ ವಿರುದ್ಧ ದಲಿತ ಸಂಘಟನೆಗಳು ವಿಭಿನ್ನ ಹೋರಾಟ ನಡೆಸಿದ್ದರು. ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ ಶಾಸಕ ರೇಣುಕಾಚಾರ್ಯ ವಿರುದ್ದ ಹೋರಾಟ ಮಾಡಿದ್ದರು. . ಲಕ್ಷಣಕ್ಕೆ ರೇಣುಕಾಚಾರ್ಯ ಕುಟುಂಬ ಬೇಡ ಜಂಗಮ ಹೆಸರಿನಲ್ಲಿ ಪಡೆದ ಎಸ್ಸಿ ಪ್ರಮಾಣ ಪತ್ರ ವಾಪಸ್ಸು ಪಡೆಯಬೇಕು. ಅವರನ್ನ ಗಡಿ ಪಾರು ಮಾಡಬೇಕು. ಹಾಗೆ ಬಿಟ್ಟರೇ ಅಧಿಕಾರ ಬಳಿಸಿ ಮತ್ತೆ ದಬ್ಬಾಳಿಕೆ ಮಾಡುವ ಸಾದ್ಯತೆ ಇದೆ ಎಂದು ದಲಿತ ಮುಖಂಡರು‌ ಆರೋಪಿಸಿದ್ದರು.

ಬಿಜೆಪಿ ಶಾಸಕ ಎಂ. ಪಿ.ರೇಣುಕಾಚಾರ್ಯ ಹುಟ್ಟೂರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು. ತಂದೆ ಪಚಾಂಕ್ಷರಯ್ಯ ಅಂತಾ ಶಾಲಾ ಶಿಕ್ಷಕ. ಕುಂದೂರು ಸರ್ಕಾರಿ ಶಾಲೆಯಲ್ಲಿ ಶಾಸಕ ರೇಣುಕಾಚಾರ್ಯ ಓದಿದ್ದು. ಅವರ ಜಾತಿ ಕಾಲಂ ನಲ್ಲಿ ಹಿಂದು ಲಿಂಗಾಯತ ಅಂತಿದೆ. ಆದ್ರೆ ಶಾಸಕ ರೇಣುಕಾಚಾರ್ಯ ಪುತ್ರಿ ಎಂ.ಆರ್ ಚೇತನಾಗೆ ಸೇರಿದ ಜಾತಿ ಪ್ರಮಾಣ ಪತ್ರದಲ್ಲಿ ಬೇಡ ಜಂಗಮಾ ಅಂತಿದೆ. ಇದನ್ನ ಬೆಂಗಳೂರು ಉತ್ತರಹಳ್ಳಿ ತಹಶೀಲ್ದಾರ ನೀಡಿದ್ದು. ಬೇಡ ಜಂಗಮ ಅಂದ್ರೆ ಪರಿಶಿಷ್ಟ ಬೇಡ ಜಂಗಮ ಅಂದ್ರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ. ಇದೇ ಈಗ ರಾಜ್ಯದಲ್ಲಿ ಚರ್ಚೆ ಆಗತ್ತಿರುವುದು. ತಂದೆ ಲಿಂಗಾಯತ ಆದ್ರೆ ಪುತ್ರಿ ಎಸ್ಸಿ ಹೇಗೆ ಆದಳು ಎಂಬ ಪ್ರಶ್ನೆ ಪ್ರತಿಯೊಬ್ಬರನ್ನ ಕಾಡುತ್ತಿದೆ.

ಆರೋಪ ತಳ್ಳಿಹಾಕಿದ ರೇಣುಕಾಚಾರ್ಯ
ನಾನು ಯಾವುದೇ ರೀತಿಯ ಜಾತಿ ಪ್ರಮಾಣ ಪತ್ರ ಪಡೆದಿಲ್ಲ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನನ್ನ ಪುತ್ರಿ ಹೈಸ್ಕೂಲ್​ಗೆ ಹೋಗುವಾಗ ಜಾತಿ ಪ್ರಮಾಣ ಪತ್ರ ಕೊಟ್ಟು  40 ಲಕ್ಷ ಪಡೆದಿದ್ದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಈ ಆರೋಪ ಮಾಡಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಈ ರೀತಿಯ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು. ಆರೋಪದ ಬಗ್ಗೆ ಮುಖ್ಯಮಂತ್ರಿ, ಕಾನೂನು ಮತ್ತು ಗೃಹ ಸಚಿವರು ಪರಿಶೀಲನೆ ಮಾಡಲಿ. ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟು ನಾನು ಯಾವುದೇ ರೀತಿಯ ಸರ್ಕಾರದ ಸೌಲಭ್ಯ ಪಡೆದಿಲ್ಲ ಎಂದು ಹೇಳಿದರು. ರಾಜಕಾರಣಕ್ಕಾಗಿ ನನ್ನ ವಿರುದ್ಧ ಏನು ಬೇಕಾದರೂ ಆರೋಪಗಳನ್ನು ಮಾಡಲಿ, ನನ್ನ ಮಗಳ ಮೇಲೆ ಆರೋಪ ಮಾಡಿದರೆ ಸುಮ್ಮನಿರುವುದಿಲ್ಲ. ಇಂಥವರಿಗೆ ಸರಿಯಾದ ಉತ್ತರ ಕೊಡುತ್ತೇನೆ. ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಬುಟ್ಟಿಯಲ್ಲಿ ಹಾವು ಇದೆ ಅಂತ ಬುರುಡೆ ಬಿಡಬೇಡಿ ಎಂದು ಒತ್ತಾಯಿಸಿದ್ದಾರೆ.

click me!