ಕಳುವಾಗಿದ್ದ ಕಾರನ್ನು ಟ್ರೇಸ್ ಮಾಡಿದ ಪೊಲೀಸರು ಅದೇ ಕಾರನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡು ಕಾರ್ ಮಾಲೀಕನ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸಪ್ಪನ ಕೃತ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜೂ 9): ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದರೆ ಸಾರ್ವಜನಿಕವಾಗಿ ಮಾನ ಮರ್ಯಾದೆ ಕಳೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಕಳುವಾಗಿದ್ದ ಕಾರನ್ನು ಟ್ರೇಸ್ ಮಾಡಿದ ಪೊಲೀಸರು ಅದೇ ಕಾರನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡು ಕಾರ್ ಮಾಲೀಕನ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸಪ್ಪನ ಕೃತ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.
ದಾವಣಗೆರೆ ಜಿಲ್ಲಾ ಕೆ ಆರ್ ಪಕ್ಷದ ಮುಖಂಡರು ಇಂದು ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾವಣಗೆರೆ ಪೊಲೀಸ ಕಾನ್ಸ್ ಟೇಬಲ್ ಮಂಜುನಾಥ್ ಕೃತ್ಯ ಖಂಡಿಸಿ ಅನ್ಯಾಯಕ್ಕೊಳಗಾದ ಯುವಕನಿಗೆ ನ್ಯಾಯ ಕೇಳಿದ್ದಾರೆ.
ಹಿಜಾಬ್ ಬಟ್ಟೆಯ ಹೋರಾಟವಲ್ಲ ಇದು ದೇಶ ವಿಭಜನೆಯ ಹುನ್ನಾರ; Kalladka Prabhakar Bhat
ವಿದ್ಯಾನಗರ ನಿವಾಸಿ ಗಿರೀಶ್ ಎಂಬುವರು ತನ್ನ ಸ್ನೇಹಿತ ಪರಮೇಶ್ ಎಂಬುವರಿಗೆ ಒಂದು ವಾರದ ಮಟ್ಟಿಗೆ ತಮ್ಮ ಬ್ರೀಜ್ ಕಾರನ್ನು ಕೊಟ್ಟಿದ್ದರು. ಪರಮೇಶ್ ಮೂರು ದಿನ ಓಡಿಸಿದ ನಂತರ ಗಿರೀಶ್ ಗೆ ಕಾರನ್ನು ಹಿಂತಿರುಗಿಸಲಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ನಾನು ಇಎಂ ಐ ಕಟ್ಟುತ್ತೇನೆ ನಿನ್ನ ಕಾರನ್ನು ವಾಪಸ್ಸು ಕೊಡುತ್ತೇನೆ ಎಂದು ಸುಳ್ಳು ಹೇಳಿ 5 ತಿಂಗಳು ಕಾಲ ತಳ್ಳಿದ್ದಾನೆ. ಈ ಬಗ್ಗೆ ನನಗೆ ಕಾರು ಬೇಕೆಂದು ಗಿರೀಶ್ 18/05/22 ರಂದು ವಿದ್ಯಾನಗರ ಪೊಲೀಸ್ ಠಾಣೆಗೆ ಗಿರೀಶ್ ದೂರು ಕೊಟ್ಟಿರುತ್ತಾರೆ. ದೂರು ನೀಡಿದ ನಂತರ ಆ ಬಗ್ಗೆ ವಿದ್ಯಾನಗರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಡುವೆ ಗಿರೀಶ್ ದಾವಣಗೆರೆ ವಿದ್ಯಾನಗರ ಕಾಪಿ ಡೇ ಬಳಿ ತಮ್ಮ ಕಾರು ಇರುವುದನ್ನು ಕಂಡು ಯಾರು ಇದರಲ್ಲಿ ಸಂಚರಿಸುತ್ತಿದ್ದರು ಎಂಬುದನ್ನು ಗಮನಿಸಿದ್ದಾರೆ.
ಇದು ಹದಡಿ ಪೊಲೀಸ್ ಕಾನ್ಸಟೇಬಲ್ ಮಂಜುನಾಥ್ ಬಳಸುತ್ತಿದ್ದನ್ನು ಕಂಡು ಈ ಕಾರು ನನ್ನದು ಈ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ವಾಗ್ವಾದ ನಡೆದಿದೆ. ಆ ಸಂದರ್ಭದಲ್ಲಿ ಕಾನ್ಸಟೇಬಲ್ ಮಂಜುನಾಥ್ ಗಿರೀಶ್ ಮೇಲೆ ಹಲ್ಲೆ ನಡೆಸಿ ಮೊಬೈಲ್ ಒಡೆದು ಹಾಕಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆ ಆರ್ ಎಸ್ ಪಕ್ಷ ಪೊಲೀಸರ ಕ್ರಮವನ್ನು ಖಂಡಿಸಿದೆ. ದಾವಣಗೆರೆ ಎಸ್ಪಿ ಸಿ ಬಿ ರಿಷ್ಯಂತ್ ಹಲ್ಲೆ ಮಾಡಿದ ಪೊಲೀಸ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದ್ದಾರೆ.
Udupi; ಕಾರ್ಮಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡುವ ಕಥೆ ಕೇಳಿದ್ದೀರಾ?
ಕಾರ್ ಮಾಲೀಕನ ಮೇಲೆ ಹಲ್ಲೆ ಮಾಡಿದ ಕಾನ್ಸ್ಟೇಬಲ್ ಸಸ್ಪೆಂಡ್: ಕಾರ್ ಮಾಲೀಕನ ಮೇಲೆ ಹಲ್ಲೆ ಮಾಡಿದ ಮಂಜುನಾಥ್ ರನ್ನು ಸಸ್ಪೆಂಡ್ ಮಾಡಿರುವುದಾಗಿ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ತಿಳಿಸಿದ್ದಾರೆ. ಹಾಗೇಯೇ ಕಾರು ಕಳುವು ಆಗಿಲ್ಲ ಅದು ಗಿರೀಶ್ ಎಂಬುವರು ಪರಮೇಶ್ ಎಂಬಾತನ ಟ್ರಾವಲ್ ಏಜೆನ್ಸಿ ಸ್ನೇಹಿತನಿಗೆ ಬಾಡಿಗೆ ಕೊಟ್ಟಿದ್ದರು. ಆ ಕಾರನ್ನು ಪರಮೇಶ್ ಎಂಬುವರು ವಿಶಾಖ್ ಎನ್ನುವವನಿಗೆ ಕೊಟ್ಟಿದ್ದರು.
ಪರಮೇಶ್ ವಿಶಾಖ್ ಎನ್ನುವರಿಗೆ 5 ಲಕ್ಷ ಸಾಲ ಕೊಡಬೇಕಿತ್ತು. ಆ 5 ಲಕ್ಷ ವಾಪಸ್ಸು ಕೊಡದಿದ್ದಕ್ಕೆ ವಿಶಾಖ್ ಎನ್ನುವವರು 5 ಲಕ್ಷಕ್ಕೆ ಬ್ರೀಜಾ ಕಾರನ್ನು ತೆಗೆದುಕೊಂಡು ಹೋಗಿರುತ್ತಾರೆ. ವಿಶಾಖ್ ಎನ್ನುವವರು ಕಾನ್ಸಟೇಬಲ್ ಮಂಜುನಾಥ್ ಗೆ ಉಪಯೋಗಿಸುವುದಕ್ಕೆ ಕೊಟ್ಟಿದ್ದಾರೆ. ಈ ಕಾರನ್ನು ಮಂಜುನಾಥ್ ಉಪಯೋಗಿಸುತ್ತಿದ್ದಾಗ ವಿಧ್ಯಾನಗರ ಕಾಫಿ ಡೇ ಬಳಿ ಇದು ನನ್ನ ಕಾರು ನಿವೇಕೆ ಉಪಯೋಗಿಸುತ್ತಿದ್ದೀರಿ ಎಂದು ಗಿರೀಶ್ ಕೇಳುತ್ತಾರೆ. ಆ ಸಂದರ್ಭದಲ್ಲಿ ಮಂಜುನಾಥ್ ರಿಂದ ಗಿರೀಶ್ ಮೇಲೆ ಹಲ್ಲೆಯಾಗುತ್ತದೆ. ಈ ಕಾರಣಕ್ಕೆ ಮಂಜುನಾಥ್ ರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ.