
ಲಕ್ನೋ(ಜು.09): ಈ ಚಿತ್ರದಲ್ಲಿ ಕಾಣುತ್ತಿರುವ ಮಗಳು ತನ್ನ ಪ್ರಿಯಕರನ ಮೇಲಿನ ವ್ಯಾಮೋಹಕ್ಕೆ ಒಳಗಾಗಿ ತನ್ನ ತಂದೆಯನ್ನೇ ಹತ್ಯೆಗೈದಿದ್ದಾಳೆ. ಅಷ್ಟೇ ಅಲ್ಲ, ತನ್ನ ತಂದೆಯನ್ನು ಕೊಂದವರಿಗೆ ವಜ್ರದ ಉಂಗುರವನ್ನು ಉಡುಗೊರೆಯಾಗಿ ಕೊಟ್ಟಿದ್ದಾಳೆ. ವಾಸ್ತವವಾಗಿ, ಈ ಇಡೀ ಪ್ರಕರಣವು ಸೆರೈಕೆಲಾ ಜಿಲ್ಲೆಯ ಆದಿತ್ಯಪುರದಲ್ಲಿ ಜೂನ್ 29 ರಂದು ರಾತ್ರಿ ನಡೆದ ಮಾಜಿ ಶಾಸಕ ಅರವಿಂದ್ ಸಿಂಗ್ ಅವರ ಸೋದರ ಮಾವ ಕನ್ಹಯ್ಯಾ ಸಿಂಗ್ ಅವರ ಹತ್ಯೆಗೆ ಸಂಬಂಧಿಸಿದೆ. ಅಲ್ಲಿ ಕನ್ಹಯ್ಯಾ ಪುತ್ರಿ ಅಪರ್ಣಾ ಸಿಂಗ್ ತನ್ನ ಪ್ರೇಮಿ ರಾಜವೀರ್ ಸಿಂಗ್ ಜೊತೆಗೆ ಇಡೀ ಕೃತ್ಯ ನಡೆಸಿದ್ದಾಳೆ.
ಕೊಲೆ ಪ್ರಕರಣದ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಪೊಲೀಸರು
ವಾಸ್ತವವಾಗಿ, ಒಂದು ದಿನ ಮುಂಚಿತವಾಗಿ, ಮೃತನ ಮಗಳು, ಆಕೆಯ ಪ್ರಿಯಕರ ರಾಜವೀರ್ ಸಿಂಗ್ ಮತ್ತು ಕನ್ಹಯ್ಯಾ ಸಿಂಗ್‌ಗೆ ಗುಂಡು ಹಾರಿಸಿದ ನಿಖಿಲ್ ಗುಪ್ತಾ ಹಾಗೂ ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಅಪ್ರಾಪ್ತ ಪುತ್ರನನ್ನು ಪೊಲೀಸರು ಬಂಧಿಸಿದರು. ಅಪ್ರಾಪ್ತ ವಯಸ್ಕ ಅಪರಾಧಿಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದ. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ರವಿ ಸರ್ದಾರ್ ಮತ್ತು ರಾಜು ಡಿಗ್ಗಿ ಅಲಿಯಾಸ್ ಡಿಕ್ಕಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಮಗಳ ಪ್ರೀತಿಗೆ ಅಡ್ಡಿಪಡಿಸಿದ್ದಕ್ಕೆ ಕನ್ಹಯ್ಯಾ ಸಿಂಗ್ ಹತ್ಯೆ ನಡೆದಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಪಿ ಆನಂದ್ ಪ್ರಕಾಶ್ ಮತ್ತು ಎಸ್‌ಐಟಿ ತಂಡದ ಅಧ್ಯಕ್ಷ ಹರ್ವಿಂದರ್ ಸಿಂಗ್ ಹೇಳಿದ್ದಾರೆ.
5 ವರ್ಷದಿಂದ ನಡೆಯುತ್ತಿತ್ತು ಮಗಳ ಸಂಬಂಧ, ಪ್ರೇಮಿಗೆ ಸೇಡು ತೀರಿಸಿಕೊಳ್ಳಬೇಕಿತ್ತು
ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ ಎಸ್ಪಿ ಆನಂದ್ ಪ್ರಕಾಶ್, ವಿಚಾರಣೆಯಿಂದ ತಿಳಿದು ಬಂದಿರುವ ಪ್ರಕಾರ ಮೃತನ ಮಗಳು ಅಪರ್ಣಾ ಹಾಗೂ ಗೆಳೆಯ ರಾಜವೀರ್ ಸಿಂಗ್ ನಡುವೆ ಸುಮಾರು 5 ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಇಬ್ಬರೂ ಒಟ್ಟಿಗೆ ಬದುಕುತ್ತೇವೆ ಮತ್ತು ಸಾಯುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದರು. ಆದರೆ ಇಬ್ಬರ ಪ್ರೀತಿಯ ವಿಷಯ ತಿಳಿದ ತಕ್ಷಣ ತಂದೆ ಕನ್ಹಯ್ಯಾ ಸಿಂಗ್ ರಾಜ್ ವೀರ್ ಗೆ ಥಳಿಸಿದ್ದಾರೆ. ಅಷ್ಟೇ ಅಲ್ಲ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಬೇರೆ ಕಡೆ ಹೋಗುವಂತೆ ಹೇಳಿದ್ದರು. ಇದರಿಂದಾಗಿ ರಾಜ್‌ವೀರ್ ಕುಟುಂಬವು ತಮ್ಮ ಮನೆಯನ್ನು ಮಾರಿ ಬೇರೆ ಸ್ಥಳದಲ್ಲಿ ಬಾಡಿಗೆಗೆ ವಾಸಿಸಲು ಪ್ರಾರಂಭಿಸಿತು. ಅದೇ ವಿಷಯ ಪ್ರೇಮಿಯ ಮನದಲ್ಲಿ ಮನೆ ಮಾಡಿತ್ತು. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಅದನ್ನು ಪೂರೈಸಲು ಕನ್ಹಯ್ಯಾ ಸಿಂಗ್ ಮಗಳ ಬೆಂಬಲವನ್ನೂ ಪಡೆದ. ಪ್ರಿಯಕರನಿಗಾಗಿ ತಂದೆಯನ್ನು ಕೊಲ್ಲಲು ಮಗಳೂ ಸಂಚು ರೂಪಿಸಿದ್ದಳು ಎಂದಿದ್ದಾರೆ.
ತಂದೆಯ ಹತ್ಯೆಗಾಗಿ ಕ್ಷಣ ಕ್ಷಣಕ್ಕೂ ಮಾಹಿತಿ ನೀಡುತ್ತಿದ್ದ ಮಗಳು
ಮಗಳು ಮತ್ತು ಆಕೆಯ ಪ್ರೇಮಿ ಕೊಲೆ ಮಾಡಲು ಶೂಟರ್ ನಿಖಿಲ್ ಗುಪ್ತಾನನ್ನು ನೇಮಿಸಿಕೊಂಡರು. ಈತನಿಗೇ ಕನ್ಹಯ್ಯರನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು. ಇದಕ್ಕಾಗಿ ಮಗಳು ವಜ್ರದ ಉಂಗುರವನ್ನು ಗಿಫ್ಟ್ ನೀಡಿದ್ದಳು. ಹೀಗಿದ್ದರೂ ಆಕೆಯ ಪ್ರಿಯಕರ ರಾಜವೀರ್ 4 ಸಾವಿರ ರೂ. ನೀಡಿದ್ದ. ಇದಾದ ಬಳಿಕ ಇಬ್ಬರೂ ಸೇರಿ ಕೊಲೆಗೆ ಸಂಪೂರ್ಣ ಯೋಜನೆ ರೂಪಿಸಿದ್ದರು. ಜೂನ್ 29 ರ ತಡರಾತ್ರಿ ಅಪರ್ಣಾ ತನ್ನ ತಂದೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿದ್ದಳು. ಆಕೆ ಕೊಟ್ಟ ಮಾಹಿತಿ ಮೇರೆಗೆ, ರಾಜವೀರ್, ನಿಖಿಲ್ ಗುಪ್ತಾ, ರವಿ ಸರ್ದಾರ್ ಮತ್ತು ರಾಜು ಡಿಗ್ಗಿ ಅಕಾ ಡಿಕ್ಕಿ ಆಗಲೇ ಕನ್ಹಯ್ಯಾ ಸಿಂಗ್ ಅವರ ಫ್ಲಾಟ್‌ಗೆ ತಲುಪಿದ್ದರು. ಕನ್ಹಯ್ಯಾ ಸಿಂಗ್ ತನ್ನ ಫ್ಲಾಟ್ ತಲುಪಿದ ತಕ್ಷಣ, ನಿಖಿಲ್ ಗುಪ್ತಾ ತನ್ನ ಇಬ್ಬರು ಸಹಚರರೊಂದಿಗೆ ಕನ್ಹಯ್ಯಾ ಸಿಂಗ್ ಮೇಲೆ ದಾಳಿ ಮಾಡಿ ಗುಂಡು ಹಾರಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ