Bakrid: ತುಮಕೂರಿನಲ್ಲಿ ಗೋ ಹತ್ಯೆ ಮಾಡುತ್ತಿದ್ದ ಮೂವರ ಬಂಧನ

By Suvarna News  |  First Published Jul 9, 2022, 5:03 PM IST

Three arrested for slaughtering cow: ಬ್ರಕೀದ್‌ ಹಬ್ಬ ಹಿನ್ನೆಲೆಯಲ್ಲಿ ಮಾಂಸಕ್ಕಾಗಿ ಗೋವುಗಳನ್ನು ಕಡಿಯಲು ಯತ್ನಿಸಿದ ಮೂವರನ್ನು ಕುಣಿಗಲ್‌ ಪೊಲೀಸರು ಬಂಧಿಸಿದ್ದಾರೆ


ತುಮಕೂರು (ಜು. 09): ನಾಳೆ ಬ್ರಕೀದ್‌ ಹಬ್ಬ (Bakrid Festival)ಹಿನ್ನೆಲೆಯಲ್ಲಿ ಮಾಂಸಕ್ಕಾಗಿ ಗೋವುಗಳನ್ನು ಕಡಿಯಲು (Cow Slaughter) ಯತ್ನಿಸಿದ ಮೂವರನ್ನು ಕುಣಿಗಲ್‌ (Kunigal) ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಅಮೃತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಮೃತೂರು ಸಮೀಪದ ಬಿಸಿನೆಲೆ ಅರಣ್ಯ ಪ್ರದೇಶದಲ್ಲಿ 16 ಹಸುಗಳು ಹಾಗೂ 13 ಕೋಣಗಳನ್ನು ತೆಗೆದುಕೊಂಡು ಹೋಗಿ ಹತ್ಯ ಮಾಡಲು ಆರೋಪಿಗಳು ಯತ್ನಿಸಿದ್ದರು. 

ಈ ವಿಚಾರ ತಿಳಿಯುತ್ತಿದ್ದಂತೆ ಡಿವೈಎಸ್‌ ಪಿ ನೇತೃತ್ವದಲ್ಲಿ ರಮೇಶ್‌ ಹಾಗೂ ಸರ್ಕಲ್‌ ಇನ್ಸೆಪೆಕ್ಟರ್‌ ಗುರುಪ್ರಸಾದ್‌ ತಂಡ ನೇತೃತ್ವದಲ್ಲಿ ದಾಳಿ ನಡೆಸಿ, 15 ಹಸುಗಳು ಹಾಗೂ 13 ಕೋಣಗಳನ್ನು ರಕ್ಷಿಸಲಾಗಿದೆ.  ಪೊಲೀಸರು ಸ್ಥಳಕ್ಕೆ ಧಾವಿಸುವ ವೇಳೆಗಾಗ್ಲೇ  ಆರೋಪಿಗಳು ಒಂದು ಹಸುವನ್ನು ಹತ್ಯೆಮಾಡಿ ಮಾಂಸವನ್ನು ತುಂಡುತುಂಡಾಗಿಸಿದ್ದರು. 

Tap to resize

Latest Videos

ಗೋವುಗಳನ್ನು ಕಡಿಯುತ್ತಿದ್ದ ಜಗದೀಶ್‌, ಮಂಜುನಾಥ್‌ ಹಾಗೂ ಶಿವು ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಜಾನುವಾರುಗಳನ್ನು ಸಾಗಿಸಲು ಬಳಸಿದ್ದ ಇಂದು ಟಾಟಾ ಏಸ್‌ ಹಾಗೂ ಎರಡು ಬೈಕ್‌ಗಳು ಜೊತೆಗೆ ಹಸುವಿನ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಅಮೃತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಗೋಹತ್ಯೆ ಕಾನೂನು ಉಲ್ಲಂಘಿಸದೆ ಬಕ್ರೀದ್‌ ಬಲಿಗೆ ಸರ್ಕಾರ ಸೂಚನೆ

click me!