ಅತ್ತೆ ಮಾವನನ್ನು ನೋಡಿಕೊಳ್ಳುವ ವಿಚಾರಕ್ಕೆ ಗಲಾಟೆ, ಸೊಸೆ ಕಾಟಕ್ಕೆ ತಾಯಿ ಮಗ ಆತ್ಮಹತ್ಯೆ!

Published : Nov 13, 2022, 05:35 PM ISTUpdated : Nov 13, 2022, 05:54 PM IST
ಅತ್ತೆ ಮಾವನನ್ನು ನೋಡಿಕೊಳ್ಳುವ ವಿಚಾರಕ್ಕೆ ಗಲಾಟೆ, ಸೊಸೆ ಕಾಟಕ್ಕೆ ತಾಯಿ ಮಗ ಆತ್ಮಹತ್ಯೆ!

ಸಾರಾಂಶ

ಅತ್ತೆ ಮಾವನನ್ನು ನೋಡಿಕೊಳ್ಳೋಕೆ ಸೊಸೆ  ಕಿರಿಕ್ ಮಾಡಿದ್ಲು. ಬೇಸತ್ತ ಮಗ ತಾಯಿ ಜೊತೆಗೆ ಹಾಸಿಗೆ ಹಿಡಿದ ಅಪ್ಪನ ಎದುರೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರು ಮಡಿಕೇರಿ ಮೂಲದವರಾಗಿದ್ದಾರೆ.

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ನ.13): ತಂದೆ ತಾಯಿಗಳಿಗೆ ವಯಸ್ಸಾದ ಮೇಲೆ ಮಕ್ಕಳೇ ನೋಡ್ಕೊಬೇಕು. ಆ ಜವಾಬ್ದಾರಿಯನ್ನು ಮಗ ಮಾಡೋಕೆ ಮುಂದಾಗಿದ್ದ. ಆದ್ರೆ ಸೊಸೆ ಇದಕ್ಕೆ ಕಿರಿಕ್ ಮಾಡಿದ್ಲು. ಪರಿಣಾಮ ಹಾಸಿಗೆ ಹಿಡಿದಿರುವ ತಂದೆ ಮುಂದೆಯೇ ತಾಯಿ ಮಗ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ವಯಸ್ಸಾದ ತಂದೆ ತಾಯಿಗಳು ದೇವರ ಸಮಾನ ಅಂತಾರೆ. ಕಷ್ಟ ಪಟ್ಟು ಹೆತ್ತು ಹೊತ್ತು ದೊಡ್ಡವರನ್ನಾಗಿ ಮಾಡಿದ ತಂದೆ ತಾಯಿಗಳನ್ನು ಚೆನ್ನಾಗಿ ನೋಡ್ಕೊಳ್ಳೋದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ ಕೂಡ. ಇದೇ ವಿಚಾರಕ್ಕೆ ಅತ್ತೆ-ಮಾವ, ಗಂಡ-ಹೆಂಡತಿ ನಡುವೆ ಗಲಾಟೆ ನಡೆದು ಎರಡು ಜೀವಗಳು ಬಾರದ ಲೋಕಕ್ಕೆ ಪಯಣ ಬೆಳೆಸಿವೆ. ಮೂಲತಃ ಮಡಕೇರಿಯ ಶ್ರೀನಿವಾಸ್ ಬೆಂಗಳೂರಿನ ರಾಜಗೋಪಾಲ ನಗರ ಬಳಿಯ ಶ್ರೀಗಂಧ ನಗರದಲ್ಲಿ  ಪತ್ನಿ ಸಂಧ್ಯಾ ಮಗನ ಜೊತೆ ಕಳೆದ ಕೆಲ ವರ್ಷಗಳಿಂದ ಇಲ್ಲಿ ವಾಸವಾಗಿದ್ರು. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡ್ತಿದ್ದ ಪತಿ ಶ್ರೀನಿವಾಸ್, ಕಷ್ಟ ಪಟ್ಟು ದುಡಿದು ಸೈಟ್ ತಗೊಂಡು ಮನೆ ಕೂಡ ಕಟ್ಟಿದ್ದ. ಗಂಡ ಹೆಂಡತಿ ,6 ವರ್ಷದ ಮಗನೊಂದಿಗೆ ಖುಷಿಯಾಗಿದ್ರು.

ಆದ್ರೆ ಅತ್ತ ಕಡೆ ಅಪ್ಪ - ಅಮ್ಮನಿಗೆ ವಯಸ್ಸಾಗಿತ್ತು. ಯಾರು ಕೂಡ ನೋಡಿಕೊಳ್ಳೋರು ಇರಲಿಲ್ಲ. ತಂದೆಗೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ರು. ಇದನ್ನು ನೋಡಿದ ಮಗ ಶ್ರೀನಿವಾಸ್, ಮಡಿಕೇರಿ ಯಿಂದ ಅಪ್ಪ - ಅಮ್ಮನನ್ನು ಬೆಂಗಳೂರಿನ ಮನೆಗೆ ಕರೆತಂದಿದ್ದ. ವಯಸ್ಸಾದ ಅತ್ತೆ, ಹಾಸಿಗೆ ಹಿಡಿದಿರುವ ಮಾವನನ್ನು ನೋಡಿಕೊಳ್ಳೋಕೆ ಸೊಸೆ ಸಂಧ್ಯಾಗೆ ಸುತಾರಾಂ ಇಷ್ಟ ಇರಲಿಲ್ಲ. ಹಾಗಾಗಿ ಅತ್ತೆ ಮಾವನನ್ನು ಯಾಕೆ ಕರೆದುಕೊಂಡು ಬಂದೆ ಅಂತಾ ಗಲಾಟೆ ಮಾಡ್ತಿದ್ಲು. 

ಅತಿಯಾಗಿ ಮೊಬೈಲ್ ಬಳಸುತ್ತಿದ್ದದಕ್ಕೆ ಪಾಸ್‌ವರ್ಡ್ ಹಾಕಿದ ತಮ್ಮ, ಮನನೊಂದ ಅಕ್ಕ ನೇಣಿಗೆ ಶರಣು!

ಸೊಸೆಯ ವರ್ತನೆಯಿಂದ ಬೇಸತ್ತ ಅಮ್ಮ - ಮಗ ತಂದೆಯ ಮುಂದೆಯೇ ಸಾವಿಗೆ ಶರಣು:
 ಕಳೆದ ಒಂದು ತಿಂಗಳಿನಿಂದ ಇದೇ ವಿಚಾರಕ್ಕೆ ಆಗಾಗ ಮನೆಯಲ್ಲಿ ಗಲಾಟೆ ನಡೀತಿತ್ತು. ಗಂಡ ಶ್ರೀನಿವಾಸ್, ಕೆಲಸಕ್ಕೆ ಹೋದ ವೇಳೆ ಮನೆಯಲ್ಲಿ ಅತ್ತೆ- ಮಾವನ ಜೊತೆಗೆ ಗಲಾಟೆ ಮಾಡ್ತಿದ್ಲಂತೆ ಸೊಸೆ ಸಂಧ್ಯಾ. ಮಗ ಮನೆಗೆ ಬಂದ ವೇಳೆ ಅಮ್ಮ - ಅಮ್ಮನ ಪರಿಸ್ಥಿತಿ ನೋಡಿ, ಪತ್ನಿಯನ್ನು ಪ್ರಶ್ನೆ ಮಾಡಿದ್ರೆ, ನಿಮ್ ಅಪ್ಪ ಅಮ್ಮನನ್ನು ನಾನ್ಯಾಕೆ ನೋಡಿಕೊಳ್ಳಲಿ. ಅವರನ್ನು ವಾಪಸು ಕಳುಹಿಸುವಂತೆ ಗಲಾಟೆ ಮಾಡ್ತಿದ್ಲಂತೆ. ನಿನ್ನೆ‌ ರಾತ್ರಿ ಕೂಡ ಇದೇ ವಿಚಾರಕ್ಕೆ, ಮನೆಯಲ್ಲಿ ಗಲಾಟೆ ಆಗಿದೆ. ಆ ಗಲಾಟೆ ಮುಂದುವರೆದು ತಡರಾತ್ರಿ ಮೂರು ಗಂಟೆ ವೇಳೆಗೆ  ಶ್ರೀನಿವಾಸ್ ತಾಯಿ, 57 ವರ್ಷದ ಭಾಗ್ಯಮ್ಮ ಮೊದಲಿಗೆ ನೇಣಿಗೆ ಶರಣಾಗಿದ್ದಾರೆ. ಅಮ್ಮ ನೇಣಿಗೆ ಶರಣಾಗಿದ್ದನ್ನು ನೋಡಿದ ಮಗ ಶ್ರೀನಿವಾಸ್ ಕೂಡ ಅದೇ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾನೆ. ದುರಂತ ಅಂದರೆ ಹಾಸಿಗೆ ಹಿಡಿದಿದ್ದ ಮಾವ ಕೂಡ ಅದೇ ಜಾಗದಲ್ಲಿದ್ರು ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಎಲ್ಲವನ್ನೂ ನೋಡಿ ಅಸಹಾಯಕರಾಗಿದ್ದಾರೆ.

Belagavi ಪೊಲೀಸ್ ವಶದಲ್ಲಿದ್ದ ಆರೋಪಿ ಸಾವು, ಮಗಳಿಂದ ಲಾಕಪ್ ಡೆತ್ ಆರೋಪ, 

ತಾಯಿ ಮಗ ಆತ್ಮಹತ್ಯೆ ವಿಷಯ ತಿಳಿದ ಸ್ಥಳಕ್ಕೆ ಬಂದ ರಾಜಗೋಪಾಲ ನಗರ ಪೊಲೀಸರು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ತನಿಖೆ ಆರಂಭಿಸಿದ್ದಾರೆ. ಆದ್ರೆ ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳೋಕೆ ಮಗ ಮುಂದಾದ್ರು, ಸೊಸೆ ಅಡ್ಡಿ ಮಾಡಿ ಕಿರುಕುಳ ನೀಡಿದ್ದು ,ಮಾತ್ರ ದುರಂತವೇ ಸರಿ. ಸದ್ಯ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?