ಬೀದಿ ಬದಿ ನೃತ್ಯಕಾರನ ಸೋಗಿನಲ್ಲಿ ಈತ ಮಾಡುತ್ತಿದ್ದಿದ್ದೇ ಬೇರೆ ಕೆಲಸ: ವೀಡಿಯೋ ವೈರಲ್, ಬಂಧನ

Published : Apr 07, 2025, 10:15 AM ISTUpdated : Apr 07, 2025, 10:50 AM IST
ಬೀದಿ ಬದಿ ನೃತ್ಯಕಾರನ ಸೋಗಿನಲ್ಲಿ ಈತ ಮಾಡುತ್ತಿದ್ದಿದ್ದೇ ಬೇರೆ ಕೆಲಸ: ವೀಡಿಯೋ ವೈರಲ್, ಬಂಧನ

ಸಾರಾಂಶ

ಇಲ್ಲೊಬ್ಬ ವ್ಯಕ್ತಿ ಬೀದಿ ಬದಿ ವಿಚಿತ್ರವಾಗಿ ಡಾನ್ಸ್‌ ಮಾಡುವ ಮೂಲಕ ಜನರನ್ನು ಸೆಳೆಯುತ್ತಿದ್ದಾನೆ. ಆದರೆ ಆತ ಬರೀ ನೃತ್ಯ ಮಾಡುತ್ತಿಲ್ಲ, ಜೊತೆಗೊಂದು ಅಪರಾಧ ಕೆಲಸವನ್ನು ಮಾಡುತ್ತಿದ್ದಾನೆ ಅದೇನೆಂದು ನೋಡೋಣ...

ಉದರಂನಿಮಿತಂ ಬಹುಕೃತ ವೇಷಂ ಎಂಬ ಸಂಸ್ಕೃತೋಕ್ತಿ ಇದೆ. ಅಂದರೆ ಹೊಟ್ಟೆಪಾಡಿಗಾಗಿ ವಿವಿಧ ವೇಷಗಳನ್ನು ಧರಿಸುವುದು ಅರ್ಥಾತ್ ವಿವಿಧ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಎಂಬ ಅರ್ಥ ನೀಡುತ್ತದೆ. ಅದೇ ರೀತಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ ಜನ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಬೀದಿ ಬದಿಯಲ್ಲಿ ನೃತ್ಯ ಮಾಡುವುದು, ವಸ್ತ್ರಗಳನ್ನು ಮಾರಾಟ ಮಾಡುವುದು ವಿವಿಧ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಮಾಡುವುದು ಸೇರಿದಂತೆ ಹಲವು ರೀತಿಯ ವೃತ್ತಿಯನ್ನು ನಿರ್ವಹಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಬೀದಿ ಬದಿ ವಿಚಿತ್ರವಾಗಿ ಡಾನ್ಸ್‌ ಮಾಡುವ ಮೂಲಕ ಜನರನ್ನು ಸೆಳೆಯುತ್ತಿದ್ದಾನೆ. ಆದರೆ ಆತ ಬರೀ ನೃತ್ಯ ಮಾಡುತ್ತಿಲ್ಲ, ಜೊತೆಗೊಂದು ಅಪರಾಧ ಕೆಲಸವನ್ನು ಮಾಡುತ್ತಿದ್ದಾನೆ ಅದೇನೆಂದು ನೋಡೋಣ...

ಡಾನ್ಸ್ ಮಾಡುತ್ತಲೇ ಜೇಬುಗಳ್ಳತನ
ಬೀದಿಗಳಲ್ಲಿ ಜನರಿಗೆ ಯಾವುದೇ ರೀತಿಯ ಸಣ್ಣ ಅನುಮಾನವೂ ಬರದಂತೆ ಜೇಬುಗಳ್ಳರು ಕೆಲಸ ಮಾಡುವುದನ್ನು ನೀವು ನೋಡಿರಬಹುದು. ನಿಮ್ಮಲ್ಲಿರುವ ವಸ್ತು ನಿಮ್ಮ ಕೈ ಜಾರಿ ಅವರ ಜೇಬು ಸೇರುವವರೆಗೂ ಈ ವಿಚಾರ ನಿಮಗೆ ತಿಳಿಯುವುದೇ ಇಲ್ಲ, ಅಷ್ಟೊಂದು ಚಾಣಾಕ್ಷತನದಿಂದ ಈ ಪಿಕ್‌ಪಾಕೆಟ್‌ ಅಥವಾ ಜೇಬುಗಳ್ಳರು ಕೆಲಸ ಮಾಡುತ್ತಾರೆ. ಅದೇ ರೀತಿ ಇಂಗ್ಲೆಂಡ್‌ನ ಬರ್ಮಿಂಗ್‌ ಹ್ಯಾಮ್‌ನಲ್ಲಿ ಬೀದಿ ಬದಿಯ ನೃತ್ಯಗಾರನ ವೇಷದಲ್ಲಿರುವ ಪಿಕ್ ಪಾಕೆಟರ್‌ ಒಬ್ಬ ಡಾನ್ಸ್ ಮಾಡುತ್ತಲ್ಲೇ ಜೇಬುಗಳ್ಳತನವನ್ನು ಮಾಡಲು ಯತ್ನಿಸುತ್ತಿರುವುದು. ಆತನ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

1987ರ ನಂತರ ಮಹಾಪತನವಾಗುತ್ತಾ ಷೇರು ಮಾರುಕಟ್ಟೆ: ಎಕ್ಸ್‌ನಲ್ಲಿ ಬ್ಲ್ಯಾಕ್‌ ಮಂಡೇ ಟ್ರೇಂಡಿಂಗ್ ಆಗ್ತಿರೋದ್ಯಾಕೆ?

ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಯೂಟ್ಯೂಬ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವೀಡಿಯೊದಲ್ಲಿ, ಕಳ್ಳನು ಜನರ ಜೇಬಿನಿಂದ ವಸ್ತುಗಳನ್ನು ಎಗರಿಸಲು ವಿಚಿತ್ರ ನೃತ್ಯ ಮಾಡಿ ಅವರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿರುವುದನ್ನು ಗಮನಿಸಬಹುದು. ವಿಚಿತ್ರವಾಗಿ ಮೈಗೆ ಬಿದ್ದಂತೆ ಡಾನ್ಸ್ ಮಾಡುವ ಪಿಕ್ ಪಾಕೆಟರ್ ಜನ ಈತನ ಡಾನ್ಸ್‌ ನೋಡುವುದರಲ್ಲಿ ಮಗ್ನರಾದಾಗ ಅವರಿಗೆ ತಿಳಿಯದಂತೆ ಅವರ ಬ್ಯಾಗ್ ಜೇಬಿಗೆ ಕೈ ತಾಕಿಸುವುದನ್ನು ಕಾಣಬಹುದಾಗಿದೆ.  ಜನರ ಜೊತೆ ಸ್ನೇಹಪರ ಸಂವಹನದ ನಂತರ ಆತ್ಮೀಯ ಗೆಳೆಯನಂತೆ ವರ್ತಿಸುತ್ತಲೇ ಡಾನ್ಸ್ ಮಾಡುವ ಕಳ್ಳ ತನ್ನ ಡಾನ್ಸ್ ನೋಡುವವರ ಫೋನ್, ಕ್ರೆಡಿಟ್ ಕಾರ್ಡ್‌ಗಳನ್ನು ಕದಿಯಲು ಮುಂದಾಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ ಪೊಲೀಸರು ಈ ಚಾಣಾಕ್ಷ ಕಳ್ಳನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಕಳ್ಳನನ್ನು ಬರ್ಡಿಚ್‌ ಎಂದು ಗುರುತಿಸಲಾಗಿದೆ. ಮಾರ್ಚ್‌ 27ರಂದು ಈತನಿಗೆ ಬರ್ಮಿಂಗ್‌ಹ್ಯಾಮ್‌ನ ಮ್ಯಾಜಿಸ್ಟ್ಟ್ರೇಟ್‌ ಕೋರ್ಟ್ 24 ವಾರಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಸಂತ್ರಸ್ತನಿಗೆ 2,240 ಪೌಂಡ್ ಪರಿಹಾರ ನೀಡುವಂತೆ ಆದೇಶಿಸಿದೆ. 

ಇಂದಿನ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ; ಸೆನ್ಸೆಕ್ಸ್‌ 4000 ಅಂಕ ಕುಸಿತ, ಹೂಡಿಕೆದಾರರು ಶಾಕ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!