Cyber Crime: ದ‌.ಕ‌ ಡಿಸಿ ಮೊಬೈಲ್ ನಂಬರ್ ಹ್ಯಾಕ್: ಜನತೆ ಮೋಸ ಹೋಗದಂತೆ ಡಿಸಿ ಮನವಿ

By Ravi Nayak  |  First Published Sep 14, 2022, 10:24 PM IST

ದಿನೇದಿನೆ ಸೈಬರ್ ಅಪರಾಧಗಳ ಪ್ರಮಾಣ ಹೆಚ್ಚುತ್ತಿದ್ದು, ಅಧಿಕಾರಿಗಳಿಂದ ಹಿಡಿದು, ಮುಗ್ಧರ ಮೊಬೈಲ್ ನಂಬರ್, ಫೇಸ್‌ಬುಕ್, ವಾಟ್ಸಪ್ ಹ್ಯಾಕ್ ಮಾಡುವ ಮೂಲಕ ವಂಚಿಸುತ್ತಿರುವ ದೊಡ್ಡ ಜಾಲವೊಂದು ಸಕ್ರಿಯವಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಹೆಸರಲ್ಲೂ ಹಣ ಕೇಳುತ್ತಿದ್ದಾರೆ!


ಮಂಗಳೂರು (ಸೆ.14) : ದಿನೇದಿನೆ ಸೈಬರ್ ಅಪರಾಧಗಳ ಪ್ರಮಾಣ ಹೆಚ್ಚುತ್ತಿದ್ದು, ಅಧಿಕಾರಿಗಳಿಂದ ಹಿಡಿದು, ಮುಗ್ಧರ ಮೊಬೈಲ್ ನಂಬರ್, ಫೇಸ್‌ಬುಕ್, ವಾಟ್ಸಪ್ ಹ್ಯಾಕ್ ಮಾಡುವ ಮೂಲಕ ವಂಚಿಸುತ್ತಿರುವ ದೊಡ್ಡ ಜಾಲವೊಂದು ಸಕ್ರಿಯವಾಗಿದೆ. ಸಾಮಾನ್ಯರಷ್ಟೇ ಅಲ್ಲ, ದೊಡ್ಡ ದೊಡ್ಡ ಆಫೀಸರ್‌ಗಳ ಹೆಸರಲ್ಲೂ ಫೇಕ್ ಐಡಿ ಕ್ರಿಯೆಟ್ ಮಾಡಿ ಹಣ ಕೇಳುತ್ತಿದ್ದಾರೆ.

Cyber Crime: ನಿಮ್ಹಾನ್ಸ್‌ ಸಂಸ್ಥೆಯ ಕಂಪ್ಯೂಟರ್‌ ಹ್ಯಾಕ್‌: ಬಿಟ್ಕಾಯಿನ್‌ಗೆ ಬೇಡಿಕೆ

Tap to resize

Latest Videos

ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ‌.ವಿ. ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದ್ದು, ಸಾರ್ವಜನಿಕರು ಈ ಬಗ್ಗೆ ‌ಎಚ್ಚರವಾಗಿರಲು ದ.ಕ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. 8590710748 ಮೊಬೈಲ್ ನಂಬರ್ ನಿಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ(Dr.Rajendra K.V) ಅವರ ಹೆಸರು ಹಾಗೂ ಫೋಟೋ ಬಳಸಿ ವಾಟ್ಸ್ ಅಪ್ ಮೂಲಕ ಸಂದೇಶ  ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು. ಆ ನಂಬರ್ ಜಿಲ್ಲಾಧಿಕಾರಿಯವರದ್ದಾಗಿರುವುದಿಲ್ಲ. ಆದ ಕಾರಣ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್ ಗೆ  ವರ್ಗಾಯಿಸದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮನವಿ ಮಾಡಿದ್ದಾರೆ. 8590710748 ಈ ನಂಬರ್ ನಿಂದ ಯಾವುದೇ ರೀತಿಯ ಮನವಿ ಬಂದಲ್ಲಿ ಅದನ್ನು ಬ್ಲಾಕ್ ಮಾಡಿ ವರದಿ ಮಾಡುವಂತೆಯೂ ಜಿಲ್ಲಾಧಿಕಾರಿಯವರು ಕೋರಿದ್ದಾರೆ.

ಜೀ-ಮೇಲ್ ಹ್ಯಾಕ್ ಸಾಧ್ಯತೆ! 

ದ.ಕ ಜಿಲ್ಲಾಧಿಕಾರಿಯವರ Gmail ಖಾತೆಯನ್ನು ಯಾರೋ ಹ್ಯಾಕ್(Hack) ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ಮೂಲಕ Gmail ಗೆ ಲಿಂಕ್ ಆಗಿರೋ ಜಿಲ್ಲಾಧಿಕಾರಿ ಗಳ ಎಲ್ಲಾ ಕಾಂಟ್ಯಾಕ್ಟ್ ‌ನಂಬರ್ ಗಳನ್ನು ಹ್ಯಾಕರ್ ಗಳು ಪಡೆದು ನಕಲಿ ನಂಬರ್ ಬಳಕೆ ಮಾಡಿರುವ ಸಾಧ್ಯತೆ ಇದೆ. ಆ ನಂಬರ್ ಗೆ ಡಿಸಿಯವರ ಫೋಟೋ ಬಳಸಿ ಅವರ ಕಾಂಟ್ಯಾಕ್ಟ್ ನ ಹಲವರಿಗೆ ಮೆಸೇಜ್ ಮಾಡಿ ಹಣ ಸಹಾಯ ಕೇಳುವ ಮೂಲಕ ವಂಚನೆಗೆ ಯತ್ನಿಸಿದ್ದಾರೆ.  ಗ್ರಾಮೀಣ ಪ್ರದೇಶದಲ್ಲೂ ಸೈಬರ್ ಅಪರಾಧ ಹೆಚ್ಚಳ; ಎಸ್‌ಪಿ ಆರ್‌. ಚೇತನ್‌

click me!