ನೋಯ್ಡಾದಲ್ಲಿ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕೊಚ್ಚಿ ಚರಂಡಿಗೆಸೆದ ಪಾತಕಿಗಳು!

By Gowthami K  |  First Published Mar 17, 2023, 10:02 PM IST

ನೋಯ್ಡಾದ ಚರಂಡಿಯಲ್ಲಿ ಅಪರಿಚಿತ ಮಹಿಳೆಯ ಕೊಚ್ಚಿ ತುಂಡರಿಸಿದ ಶವ ಪತ್ತೆಯಾಗಿದೆ. ನೋಯ್ಡಾ ಪ್ರಾಧಿಕಾರದ ಗುತ್ತಿಗೆದಾರರು ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ.  ಈ ಭೀಕರ ಹತ್ಯೆ ನೋಯ್ಡಾದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.


ಉತ್ತರ ಪ್ರದೇಶ (ಮಾ.17): ಗುರುವಾರ ನೋಯ್ಡಾದ ಸೆಕ್ಟರ್ 8 ರಲ್ಲಿನ ಚರಂಡಿಯಲ್ಲಿ ಅಪರಿಚಿತ ಮಹಿಳೆಯ ಕೊಚ್ಚಿ ತುಂಡರಿಸಿದ ಶವ ಪತ್ತೆಯಾಗಿದೆ. ನೋಯ್ಡಾ ಪ್ರಾಧಿಕಾರದ ಗುತ್ತಿಗೆದಾರರು ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ.  ಈ ಭೀಕರ ಹತ್ಯೆ ನೋಯ್ಡಾದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಮಹಿಳೆಯನ್ನು ಹತ್ಯೆ ಮಾಡಿ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚರಂಡಿಗೆ ಎಸೆಯಲಾಗಿದೆ. ದೇಹದ ಕೈಗಳಲ್ಲಿ ಕೆಲವು ಹೋಳಿ ಬಣ್ಣಗಳಿವೆ. ಪ್ರಾಥಮಿಕ ದೃಷ್ಟಿಯಲ್ಲಿ ದೇಹದ ಭಾಗಗಳು ಸುಮಾರು ಐದು ದಿನಗಳ ಹಳೆಯದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ನೋಯ್ಡಾದಲ್ಲಿ ಭೀತಿ ಆವರಿಸಿದೆ. ಈ ನಡುವೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಹಾಯಕ ಪೊಲೀಸ್ ಆಯುಕ್ತರು, ಹೆಚ್ಚುವರಿ ಉಪ ಪೊಲೀಸ್ ಆಯುಕ್ತರು ಮತ್ತು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸ್ಥಳಕ್ಕೆ ಫೋರೆನ್ಸಿಕ್ ತಂಡವನ್ನು ಕರೆಸಲಾಗಿದ್ದು, ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯರು, ಶ್ವಾನದಳ ಆಗಮಿಸುತ್ತಿದ್ದಂತೆ ಮಹಿಳೆಯ ಕೈ, ಕಾಲು ಮತ್ತು ಬೆರಳುಗಳನ್ನು ಚರಂಡಿಯಿಂದ ಹೊರ ತೆಗೆಯಲಾಯಿತು ಎಂದಿದ್ದಾರೆ. ತನಿಖೆ ನಡೆಯುತ್ತಿದ್ದು, ಸಮೀಪದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಶಕ್ತಿ ಅವಸ್ತಿ ತಿಳಿಸಿದ್ದಾರೆ. 

Tap to resize

Latest Videos

ಮೃತದೇಹಕ್ಕೆ ನಾಲ್ಕೈದು ದಿನ  ಹಳೆಯದಾಗಿರಬಹುದೆಂದು ಶಂಕಿಸಲಾಗಿದೆ. ಇದನ್ನು ಖಚಿತಪಡಿಸಲು ಶವಪರೀಕ್ಷೆ ನಡೆಸಲಾಗಿದೆ. ಮೃತದೇಹವನ್ನು ಗುರುತಿಸಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ಸುಳಿವುಗಳಿಗಾಗಿ ಸಮೀಪದ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಇದಲ್ಲದೆ, ಮೃತದೇಹವನ್ನು ಗುರುತಿಸುವ ಸಲುವಾಗಿ ಕಾಣೆಯಾದ ವ್ಯಕ್ತಿಗಳ ದೂರುಗಳಿಗಾಗಿ ಹತ್ತಿರದ ಪೊಲೀಸ್ ಠಾಣೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಡಿಸಿಪಿ ಹೇಳಿದರು. 

ತುಂಗಾ ನದಿ ತೀರದಲ್ಲಿ ಬ್ಲಾಸ್ಟ್ ಪ್ರಕರಣ, ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಇಬ್ಬರ

ಸುಮಾರು ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಸಲಾಯಿತು. ಆದರೆ ಎರಡು ಕಾಲುಗಳು, ಕೈ ಮತ್ತು ಕೆಲವು ಗಡ್ಡೆಗಳನ್ನು ಹೊರತುಪಡಿಸಿ, ಪೊಲೀಸರಿಗೆ ಚರಂಡಿಯಿಂದ ದೇಹದ ಯಾವುದೇ ಭಾಗಗಳು ಕಂಡುಬಂದಿಲ್ಲ ಎಂದು ಮೂಲಗಳು ಬಹಿರಂಗಪಡಿಸಿವೆ.

4 ಕೆಜಿ ಚಿನ್ನ ಮಾರಾಟಕ್ಕೆ ಯತ್ನ, ಗದಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಮುಂಬೈ ಮೂಲದ ವ್ಯಾಪಾರಿಗಳು!

ಕೊಲೆಯ ನಂತರ, ದುಷ್ಕರ್ಮಿಗಳು ಶವವನ್ನು ತುಂಡುಗಳಾಗಿ ಕತ್ತರಿಸಿ ನಂತರ ನಗರದ ವಿವಿಧ ಸ್ಥಳಗಳಲ್ಲಿನ ಚರಂಡಿಗೆ ಎಸೆದಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ವರದಿಗಳ ಆಧಾರದ ಮೇಲೆ ದೇಹದ ಇತರ ಭಾಗಗಳನ್ನು ಪತ್ತೆ ಹಚ್ಚಲು ನಾವು ಪ್ರಯತ್ನ ನಡೆಸುತ್ತಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

click me!