ಮಾತಿನಲ್ಲೇ ಉದ್ಯಮಿಗಳ ಮರಳು ಮಾಡೋ ಖತರ್ನಾಕ್ ವಂಚಕ. ಮಾರಾಟ, ಬಾಡಿಗೆ ನೆಪದಲ್ಲಿ ಕಾರ್ ಪಡೆದ ವಂಚಿಸಿ ಕಬ್ಬನ್ ಪಾರ್ಕ್ ಪೊಲೀಸರ ಬಲೆಗೆ ಬಿದ್ದ ಕದೀಮ.
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಡಿ.26): ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ ಅಂತಾರೆ. ಆದ್ರೆ ಈ ಮಾತನ್ನೇ ತನ್ನ ಬಂಡವಾಳವಾಗಿ ಮಾಡಿಕೊಂಡ 23ರ ಪೊರ ಖತರ್ನಾಕ್ ಕೆಲಸಕ್ಕೆ ಇಳಿದಿದ್ದ. ದೊಡ್ಡ ದೊಡ್ಡ ಉದ್ಯಮಿಗಳು ಮಾರಲಿಚ್ಚಿಸುವ ಐಷಾರಾಮಿ ಕಾರ್ ಗಳನ್ನೇ ಟಾರ್ಗೆಟ್ ಮಾಡುತಿದ್ದ ಈತ ಮಾತಿನಿಂದಲೇ ವಂಚನೆ ಶುರು ಮಾಡುತಿದ್ದ. ಈತನ ನಂಬಿ ಕಾರ್ ಕೊಟ್ಟ ಅದೆಷ್ಟೋ ಉದ್ಯಮಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆದ್ರೆ ಅದೊಂದು ಕೇಸ್ ಈಗ ಆತನ ಪೊಲೀಸರ ಅತಿಥಿ ಮಾಡಿದೆ.
ಐಷಾರಾಮಿ ಕಾರುಗಳನ್ನ ಟಾರ್ಗೇಟ್ ಮಾಡಿ ಅವುಗಳನ್ನು ಮಾರಾಟ ಮಾಡುವ ನೆಪದಲ್ಲಿ ಕಾರು ಪಡೆದು ವಂಚಿಸುತ್ತಿದ್ದ ಸೈಯದ್ ಜಿಬ್ರಾನ್ ಎಂಬಾತನನ್ನ ಕಬ್ಬನ್ ಪಾರ್ಕ್ ಪೊಲೀಸ್ರು ಬಂಧಿಸಿದ್ದಾರೆ. ಅಸಲಿಗೆ ಇಷ್ಟು ಪ್ರಮಾಣದ ಕಾರ್ ಈತ ವಂಚಿಸಿದ್ದಾದ್ದರೂ ಹೇಗೆ ಅಂತಿರಾ. ಅದು ಈಗಲೂ ಪ್ರಶ್ನೆಯಾಗಿದೆ. ಯಾಕಂದ್ರೆ ಈತನ ಮಾತುಗಳಿಗೆ ಅದೆಷ್ಟೋ ಉದ್ಯಮಿಗಳು ಮರುಳಾಗಿ ತಮ್ಮ ಕಾರ್ ಗಳನ್ನು ನೀಡಿ ವಂಚನೆಗೊಳಗಾಗಿದ್ದಾರಂತೆ.
ಸೈಯಾದ್ ಜಿಬ್ರಾನ್ ವಯಸ್ಸು ಇನ್ನೂ ಇಪ್ಪಾತ್ತಾ ಮೂರು ವರ್ಷ. ಈ ವಯಸ್ಸಲ್ಲಿ ಬಹುತೇಕ ಯುವಕರು ಇನ್ನೂ ವಿದ್ಯಾಭ್ಯಾಸ ಮುಗಿಸೋ ಹಂತದಲ್ಲಿ ಅಥವಾ ಕೆಲಸ ಹುಡುಕೋ ಆರಂಭದಲ್ಲಿ ಇರ್ತಾರೆ. ಆದ್ರೆ ಹೆಚ್ ಆರ್ ಬಿ ಆರ್ ನಿವಾಸಿ ಜಿಬ್ರಾನ್ ಆದಾಗಲೇ ಓದಿಗೆ ತೀಲಾಂಜಲಿ ಹಾಡಿ ದೇಶಾದ್ಯಂತ ವಂಚನೆ ಮಾಡಿ ಈಗ ಪೊಲೀಸ್ರ ಅತಿಥಿಯಾಗಿದ್ದಾನೆ.
Mangaluru Crime: ಮಂಗಳೂರಿನ ಕಾಟಿಪಳ್ಳದ ಜಲೀಲ್ ಹತ್ಯೆ: ಮೂವರು ಆರೋಪಿಗಳ ಬಂಧನ
ಮೂರ್ನಾಲ್ಕು ಜನರ ತಂಡ ಮಾಡಿಕೊಂಡಿದ್ದ ಜಿಬ್ರಾನ್ ಕೋಟ್ಯಧಿಪತಿ ಬ್ಯುಸಿನೆಸ್ ಮ್ಯಾನ್ ಗಳು ಮಾರಾಟ ಮಾಡಲು ಇಚ್ಚಿಸುವ ತಮ್ಮ ಐಷರಾಮಿ ಕಾರುಗಳ ಬಗ್ಗೆ ಮಾಹಿತಿ ಕಲೆ ಹಾಕ್ತಾ ಇದ್ದ. ಇವ್ರನ್ನ ಭೇಟಿ ಮಾಡಿ ತಾನೂ ಒಳ್ಳೆ ಬೆಲೆಗೆ ಕಾರು ಮಾರಾಟ ಮಾಡಿಸಿ ಕೊಡ್ತಿನಿ ಅಂತ ಹೇಳಿ ಅಷ್ಟೊ ಇಷ್ಟೋ ಹಣ ಕೊಟ್ಟು ಕಾರು ಪಡೆಯುತ್ತಿದ್ದ. ಹೀಗೆ ಕಾರು ಪಡೆದುಕೊಂಡವನು ಮರಳಿ ಮಾಲೀಕರಿಗೆ ಹಣ ನೀಡದೇ ಕಾರು ಮಾರಾಟ ಮಾಡಿ ಹಣ ಗುಳುಂ ಮಾಡ್ತಾ ಇದ್ದ. ಈ ಬಗ್ಗೆ ಉದ್ಯಮಿಯೊಬ್ಬರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ರು.
ಸ್ಪೋರ್ಟ್ಸ್ ಬೈಕ್ ವಿಚಾರವಾಗಿ ನಡೆದಿತ್ತು ಜಗಳ -ಸಿನಿಮಾ ಸ್ಟೈಲ್ ನಲ್ಲಿ ಹಲ್ಲೆ, 19 ಲಕ್ಷ ಮೌಲ್ಯದ ಬೈಕ್ ಡಕಾಯಿತಿ!
ಸದ್ಯ ಜಿಬ್ರಾನ್ ಬಂಧನವಾಗಿದ್ದು ಉಳಿದ ಆರೋಪಿಗಳಿಗಾಗಿ ಪೊಲೀಸ್ರು ಬಲೆ ಬೀಸಿದ್ದಾರೆ.ಸದ್ಯ ಆರೋಪಿಯಿಂದ 10 ಕೋಟಿ ಮೌಲ್ಯದ ಒಂಭತ್ತು ಐಷಾರಾಮಿ ಕಾರುಗಳನ್ನ ವಶಪಡಿಸಿಕೊಂಡು ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.