Murugha Seer Case: ಲೇಡಿ ವಾರ್ಡನ್ ರಶ್ಮಿಯನ್ನು ವಿಚಾರಣೆ ನಡೆಸಲಿರುವ ಬಾಲಚಂದ್ರ ನಾಯ್ಕ್

By Gowthami K  |  First Published Nov 8, 2022, 8:21 PM IST

 ಮುರುಘಾ ಶ್ರೀ ವಿರುದ್ದ ಪೋಕ್ಸೋ ಪ್ರಕರಣದ ಎ2 ಆರೋಪಿ ಪೊಲೀಸ್ ಕಸ್ಟಡಿಗೆ.  ಆರೋಪಿ ಲೇಡಿ ವಾರ್ಡನ್ ರಶ್ಮಿಯನ್ನು ವಿಚಾರಣೆ ನಡೆಸಲಿರುವ ಸಿಪಿಐ ಬಾಲಚಂದ್ರ ನಾಯ್ಕ್.  ನಾಳೆ ಮುರುಘಾ ಮಠಕ್ಕೆ ಕರೆದೊಯ್ದ ಸ್ಥಳ ಮಹಜರು ನಡೆಸುವ ಸಾಧ್ಯತೆ. 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ನ.8): ಮುರುಘಾ ಶ್ರೀ ವಿರುದ್ದದ ಎರಡನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಪ್ರಕರಣದ ಎ2 ಆರೋಪಿ ಲೇಡಿ ವಾರ್ಡನ್ ರಶ್ಮಿ ಅವರನ್ನು ಪೊಲೀಸರು ಕಸ್ಟಡಿಗೆ ಪಡೆಯುವ ಮೂಲಕ ವಿಚಾರಣೆ ತನಿಖೆ ಚುಕುರುಗೊಳಿಸಿದರು. ಈಗಾಗಲೇ ಎರಡನೇ ಪೋಕ್ಸೋ ಕೇಸ್ ಗೆ ಸಂಬಂಧಪಟ್ಟಂತೆ ಎ1 ಆರೋಪಿ ಮುರುಘಾ ಶ್ರೀಯನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದ ಪೊಲೀಸರು ಸೂಕ್ತ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಮೂರು ದಿನಗಳ ಕಾಲ ಡಿವೈಎಸ್ಪಿ ಕಚೇರಿಯಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆ ಮುರುಘಾ ಶ್ರೀಗಳನ್ನು ಮುರುಘ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿ ಬಳಿಕ ಮೆಡಿಕಲ್‌ ಟೆಸ್ಟ್ ಕೂಡ ಮಾಡಿಸಲಾಗಿತ್ತು. 

Latest Videos

undefined

ಅದೇ ರೀತಿ ಇಂದು ಎ2 ಆರೋಪಿ ಆಗಿರುವ ಲೇಡಿ ವಾರ್ಡನ್ ರಶ್ಮಿ ಅವರನ್ನು ಪೊಲೀಸರು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಎ2 ಆರೋಪಿಯನ್ನು ಡಿವೈಎಸ್ಪಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಸಾಂತ್ವಾನ ಕೇಂದ್ರಕ್ಕೆ ಪೊಲೀಸರು ಇಟ್ಟಿದ್ದಾರೆ. ನಾಳೆ ಮುರುಘಾ ಮಠಕ್ಕೆ ಕರೆದೊಯ್ದ ಸ್ಥಳ ಮಹಜರು ನಡೆಸುವ ಸಾಧ್ಯತೆಗಳು ಹೆಚ್ಚಿದೆ. 

ಈಗಾಗಲೇ‌ ಮುರುಘಾ ಶ್ರೀ ವಿರುದ್ದ ಕೇಳಿ‌ ಬಂದಿರುವ ಗಂಭೀರ ಆರೋಪದಲ್ಲಿ ಎ2 ಆರೋಪಿ ಲೇಡಿ ವಾರ್ಡನ್ ಕೈವಾಡವೂ ಪ್ರಮುಖವಾಗಿದೆ ಎಂದು ಕೆಲ ಅಂಶಗಳು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಮೂರು ದಿನಗಳ ಕಸ್ಟಡಿಯಲ್ಲಿ ಇರಲಿರುವ ಎ2 ಆರೋಪಿಗೆ ಸಿಪಿಐ ಬಾಲಚಂದ್ರ ನಾಯ್ಕ್ ಅಂಡ್ ಟೀಂ ವಿಚಾರಣೆ ವೇಳೆ ಪುಲ್ ಗ್ರಿಲ್ ಮಾಡುವ ಸಾಧ್ಯತೆಯಿದೆ. ವಿಚಾರಣೆಯಲ್ಲಿ ಎರಡನೇ ಕೇಸ್ ಗೆ ಸಂಬಂಧಿಸಿದಂತೆ ಏನೆಲ್ಲಾ ಮುಖ್ಯ ಅಂಶಗಳು ಬೆಳಕಿಗೆ ಬರಲಿವೆ ಎಂಬುದೇ ಪ್ರಶ್ನೆಯಾಗಿದೆ.

ಮುರುಘಾಶ್ರೀ ಮೇಲಿನ ಪೋಕ್ಸೋ ಆರೋಪ ದೃಢ: ಎಸ್ಪಿ 
ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮುರುಘಾಶ್ರೀ ಮೇಲಿನ ಪೋಕ್ಸೋ ಪ್ರಕರಣ ದೃಢಪಟ್ಟಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಂ ಹೇಳಿದ್ದಾರೆ.

ಸೋಮವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಕ್ಸೋ ಮೊದಲ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಮುರುಘಾಶ್ರೀ ಸೇರಿದಂತೆ ಐವರ ಮೇಲೆ ದೂರು ನೀಡಿದ್ದರು. ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ತನಿಖಾಧಿಕಾರಿ ಡಿವೈಎಸ್ಪಿ ಅನಿಲ್‌ ಅಕ್ಟೋಬರ್‌ 27ರಂದು ಎರಡನೇ ಅಪರ ಜಿಲ್ಲಾ ನ್ಯಾಯಾಲಯಕ್ಕೆ ಚಾಜ್‌ರ್‍ಶೀಟ್‌ ಸಲ್ಲಿಸಿದ್ದಾರೆ. ಸಿಸಿ ನಂಬರ್‌ ಬರುವುದು ಬಾಕಿ ಇದೆ ಎಂದರು.

Murugha Shree Case: ಇಷ್ಟು ಕೀಳುಮಟ್ಟಕ್ಕೆ ಇಳೀತಾರೆ ಎಂದು ನಿರೀಕ್ಷಿಸಿರಲಿಲ್ಲ: ಮೌನ ಮುರಿದ ಬಿಎಸ್‌ವೈ

ಪ್ರಕರಣದ ಎ1 ಆರೋಪಿ ಮುರುಘಾಶ್ರೀ, ಎರಡನೇ ಆರೋಪಿ ಲೇಡಿ ವಾರ್ಡನ್‌ ರಶ್ಮಿ ಹಾಗೂ ಎ4 ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಅವರ ಮೇಲಿನ ಆರೋಪ ದೃಢಪಟ್ಟಿದೆ. ಎ3 ಆರೋಪಿ ಮಠದ ಉತ್ತರಾಧಿಕಾರಿ (ಬಸವಾದಿತ್ಯ-17), ಎ5 ವಕೀಲ ಗಂಗಾಧರಯ್ಯ ವಿರುದ್ಧ ಈವರೆಗೆ ಸಾಕ್ಷ್ಯ ಅಲಭ್ಯವಾಗಿವೆ. ತನಿಖೆ ಇನ್ನೂ ಜಾರಿಯಲ್ಲಿದ್ದು, ಕೆಲ ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದೇವೆ. ಸಿಕ್ಕ ಮೇಲೆ ಅಂತಿಮ ದೋಷಾರೋಪಣೆ ಪತ್ರ ಸಲ್ಲಿಸಲಾಗುವುದು ಎಂದರು.

10ಕ್ಕೂ ಹೆಚ್ಚು ಮಕ್ಕಳ ಅತ್ಯಾಚಾರ, ಒಬ್ಬಳ ಕೊಲೆ: ಮುರುಘಾ ಶ್ರೀ ಚಾರ್ಜ್‌ಶೀಟ್‌ನಲ್ಲಿದೆ ಎದೆ ಝಲ್ಲೆನಿಸುವ ಅಂಶಗಳು

ಈ ಹಿಂದೆ ನಡೆದಿದ್ದ ಪ್ರಕರಣದ ಸಂತ್ರಸ್ತೆಯು ರೇಪ್‌ ಆ್ಯಂಡ್‌ ಮರ್ಡರ್‌ ಆಗಿದೆ ಎನ್ನಲಾಗಿತ್ತು. ಆದರೆ ಆಂಧ್ರ ವ್ಯಾಪ್ತಿಯಲ್ಲಿ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ವರದಿ ಆಗಿದೆ. ಇದು ಆಕಸ್ಮಿಕ ಘಟನೆ ಎಂದು ದೃಢಪಟ್ಟಿದೆ ಎಂದು ಎಸ್ಪಿ ತಿಳಿಸಿದರು.

click me!