ವರಂಗಲ್ ಬಾವಿಯಲ್ಲಿ 9 ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್| 4 ಜನ ಅರೆಸ್ಟ್| ಬಂಗಾಳ ಮೂಲದ ಮಕ್ಸೂದ್ ಕುಟುಂಬ ವರಂಗಲ್‌ನಲ್ಲಿ ನೆಲೆಸಿತ್ತು
ವರಂಗಲ್(ಮೇ.26): ಇತ್ತೀಚೆಗಷ್ಟೇ ಇಲ್ಲಿನ ಬಾವಿಯೊಂದರಲ್ಲಿ ಪತ್ತೆಯಾಗಿದ್ದ 9 ಶವ ಪತ್ತೆ ಪ್ರಕರಣವನ್ನು ತೆಲಂಗಾಣ ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧವೇ ಹತ್ಯೆಗೆ ಕಾರಣ ಎಂಬುದು ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಬಂಗಾಳ ಮೂಲದ ಮಕ್ಸೂದ್ ಕುಟುಂಬ ವರಂಗಲ್‌ನಲ್ಲಿ ನೆಲೆಸಿತ್ತು. ಕುಟುಂಬದ 6 ಜನರ ಪೈಕಿ, ಪತಿ ಬಿಟ್ಟು ಬಂದಿದ್ದ ಮಹಿಳೆಯೊಬ್ಬಳಿದ್ದಳು. ಆಕೆ ಜೊತೆಗೆ ಆರೋಪಿ ಸಂಜಯ್ ನಂಟು ಬೆಳೆಸಿದ್ದ. ಆದರೆ ಇತ್ತೀಚೆಗೆ ಬಿಹಾರ ಮೂಲದ ಮೂವರು ವ್ಯಕ್ತಿಗಳು ಮಕ್ಸೂದ್ ಕುಟುಂಬಕ್ಕೆ ಆಪ್ತರಾದ ಬಳಿಕ, ಅವರು ಆರೋಪಿ ಸಂಜಯ್‌ಕುಮಾರ್‌ನನ್ನು ದೂರ ಮಾಡಿದ್ದ.
2 ದಿನದಲ್ಲಿ ವಾರಂಗಲ್ ಕೊಳವೆ ಬಾವಿಯಲ್ಲಿ 9 ಮೃತದೇಹಗಳ ಪತ್ತೆ!
9 dead bodies of including women and child found from a well in Warangal. They belong to and and working at a cold storage. Police awaiting PM report before making any conclusion.
Investigation on. pic.twitter.com/NctgJEgXFv
ಇದರಿಂದ ಆಕ್ರೋಶಗೊಂಡ ಸಂಜಯ್, ಇತ್ತೀಚೆಗೆ ಮಕ್ಸೂದ್ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ತಂಪು ಪಾನೀಯದಲ್ಲಿ ಮಾದಕ ವಸ್ತು ಬೆರೆಸಿದ್ದ. ಜೊತೆಗೆ ತನ್ನ ಮೂವರು ಸಹಚರರ ಜೊತೆಗೂಡಿ ಮಕ್ಸೂದ್ ಕುಟುಂಬದ 6 ಜನ ಮತ್ತು ಮೂವರು ವಲಸಿಗ ಕಾರ್ಮಿಕರನ್ನು ಹತ್ಯೆ ಮಾಡಿದ್ದ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.