ಮೃತ ದಂಪತಿಯನ್ನು ಅಶೋಕ (30) ಮತ್ತು ಅಂಕಿತಾ (20) ಎಂದು ಗುರುತಿಸಲಾಗಿದ್ದು, ಅವರು ತಮ್ಮ 3 ತಿಂಗಳ ಮಗಳನ್ನು ಮೊದಲು ಕೊಲೆ ಮಾಡಿ, ನಂತರ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೈದರಾಬಾದ್ (ಏಪ್ರಿಲ್ 5, 2023): ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಮಂಗಳವಾರ ದಂಪತಿ ಮೂರು ತಿಂಗಳ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಹೈದರಾಬಾದ್ ಸಮೀಪದ ಚೆವೆಲ್ಲಾ ಮಂಡಲದ ದೇವ್ರಪಲ್ಲಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಮೃತ ದಂಪತಿಯನ್ನು ಅಶೋಕ (30) ಮತ್ತು ಅಂಕಿತಾ (20) ಎಂದು ಗುರುತಿಸಲಾಗಿದ್ದು, ಅವರು ತಮ್ಮ 3 ತಿಂಗಳ ಮಗಳನ್ನು ಮೊದಲು ಕೊಲೆ ಮಾಡಿ, ನಂತರ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದಂಪತಿ ಮಗುವನ್ನು ಸಾಯಿಸುವ ಮೊದಲು ಸಿಕ್ಕಾಪಟ್ಟೆ ಸೌಂಡ್ ಕೊಟ್ಟು ಟೆಲಿವಿಷನ್ ಅನ್ನು ಆನ್ ಮಾಡಿದರು. ನಂತರ, ದಂಪತಿ ನೇಣು ಹಾಕಿಕೊಂಡರು ಎಂದೂ ಹೇಳಲಾಗಿದೆ.
ಇದನ್ನು ಓದಿ: ಮದ್ವೆಗೆ ಗಿಫ್ಟ್ ಕೊಟ್ಟ ಮ್ಯೂಸಿಕ್ ಸಿಸ್ಟಂನಲ್ಲಿ ಬಾಂಬ್..! ವಧುವಿನ ಎಕ್ಸ್ ಬಾಯ್‌ಫ್ರೆಂಡ್ ಅಂದರ್
ಟಿವಿಗೆ ಸಿಕ್ಕಾಪಟ್ಟೆ ಸೌಂಡ್ ಕೊಟ್ಟಿದ್ದ ಕಾರಣ ಶಬ್ದದಿಂದ ವಿಚಲಿತರಾಗಿ ನೆರೆಮನೆಯವರು ಬಾಗಿಲು ಬಡಿದರು. ಆದರೆ, ಮನೆಯವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಒಡೆದಿದ್ದಾರೆ. ಅವರು ಮಗು ಮತ್ತು ಅಂಕಿತಾ ಸತ್ತಿರುವುದನ್ನು ಕಂಡುಕೊಂಡರು. ಆ ವೇಳೆ, ಅಶೋಕ್ ಇನ್ನೂ ಉಸಿರಾಡುತ್ತಿದ್ದರು, ನೆರೆಹೊರೆಯವರು ಅಶೋಕ್‌ನನ್ನು ಕೆಳಕ್ಕೆ ಇಳಿಸಿದರು, ಆದರೆ ಅವರು ಕೆಲವು ನಿಮಿಷಗಳ ನಂತರ ಮೃತಪಟ್ಟರು ಎಂದು ನೆರೆಹೊರೆಯವರು ಹೇಳಿದ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು, ಈ ಸಂಬಂಧ ಚೇವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಆದರೆ ಇದು ಕೌಟುಂಬಿಕ ಕಲಹದ ಪರಿಣಾಮ ಇರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿ ಮೂವರನ್ನು ಬಲಿ ತೆಗೆದುಕೊಂಡ ಆರೋಪಿ ಶಾರುಖ್ ಸೈಫಿ ಬಂಧನ
ಅಶೋಕ್ ಅವರ ಕುಟುಂಬ ಸದಸ್ಯರ ಪ್ರಕಾರ, ಅವರು 2021 ರಲ್ಲಿ ಅಂಕಿತಾ ಅವರನ್ನು ವಿವಾಹವಾದರು. ಆಘಾತಕಾರಿ ಘಟನೆಯ ಹಿಂದಿನ ರಾತ್ರಿ ಅಶೋಕ್ ತನ್ನ ಕಿರಿಯ ಸಹೋದರ ರಾಘವೇಂದ್ರನೊಂದಿಗೆ ಆಟೋರಿಕ್ಷಾದಲ್ಲಿ ತರಕಾರಿಗಳನ್ನು ಸಾಗಿಸಲು ಹೋಗಿದ್ದರು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಿಂದಿರುಗುವಾಗ ಬಿರಿಯಾನಿ ಖರೀದಿಸಿ, ಮನೆಗೆ ಬಂದ ನಂತರ ತಿಂದರು. ನಂತರ ಅವರು ಅಶೋಕ್ ಅವರ ಮನೆಯಿಂದ ಹೊರಟರು ಎಂದು ತಿಳಿದುಬಂದಿದೆ.
ಬಳಿಕ, ದಂಪತಿ ನಡುವೆ ಏನಾಯಿತು ಎಂಬುದು ಖಚಿತವಾಗಿಲ್ಲ. ಟಿವಿ ಸೆಟ್ ಅನ್ನು ಪೂರ್ಣ ಪ್ರಮಾಣದಲ್ಲಿ ಸ್ವಿಚ್ ಮಾಡಲಾಗಿದೆ. ಮುಂಜಾನೆ ವೇಳೆಯಲ್ಲಿ ಭಾರಿ ಸದ್ದು ಕೇಳಿದ ಪರಿಣಾಮ ಅಕ್ಕಪಕ್ಕದ ಮನೆಯವರು ಬಾಗಿಲು ಬಡಿದರು. ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಬಲವಂತವಾಗಿ ಬಾಗಿಲು ತೆರೆದು ನೋಡಿದಾಗ ದಂಪತಿ ಹಾಗೂ ಮಗು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಈ ವೇಳೆ ಮಗುವನ್ನು ಸಾಯಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ: ಮದುವೆ ಉಡುಗೊರೆಯಾಗಿ ನೀಡಿದ್ದ ಮ್ಯೂಸಿಕ್ ಸಿಸ್ಟಮ್‌ನಲ್ಲಿ ಬಾಂಬ್..! ಸ್ಫೋಟಕ್ಕೆ ನವ ವಿವಾಹಿತ ಸೇರಿ ಇಬ್ಬರು ಬಲಿ