ಸೌಂಡ್‌ ಕಡಿಮೆ ಮಾಡಿ ಎಂದ ಮನೆ ಮಾಲೀಕನನ್ನೇ ಹೊಡೆದು ಕೊಂದ ಟೆಕ್ಕಿಗಳು: ದುರಂತ ಸಾವು

By Sathish Kumar KH  |  First Published Apr 5, 2023, 1:27 PM IST

ತಡರಾತ್ರಿ ವೇಳೆಯೂ ಜೋರಾಗಿ ಹಾಡಿನ ಸೌಂಡ್‌ ಹಾಕಿಕೊಂಡು ಪಾರ್ಟಿ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ ಪಕ್ಕದ ಮನೆ ಮಾಲೀಕನನ್ನು ಟೆಕ್ಕಿಗಳು ಥಳಿಸಿ ಕೊಲೆ ಮಾಡಿದ್ದಾರೆ.


ಬೆಂಗಳೂರು (ಏ.05): ಮನೆಯಲ್ಲಿ ಸೌಂಡ್‌ ಸಿಸ್ಟಂ ಮೂಲಕ ತಡರಾತ್ರಿವರೆಗೂ ಜೋರಾಗಿ ಹಾಡು ಹಾಕಿಕೊಂಡು ಪಾರ್ಟಿ ಮಾಡುವ ಟೆಕ್ಕಿಗಳಿಗೆ ಸೌಂಡ್‌ ಕಡಿಮೆ ಮಾಡಿ ಎಂದು ಹೇಳಿದ ಪಕ್ಕದ ಮನೆಯ ಮಾಲೀಕನನ್ನು ಹೊಡೆದು ಕೊಂದಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುವ ಇಂಜಿನಿಯರ್‌ಗಳು (ಟೆಕ್ಕಿ) ತಮ್ಮ ಕೆಲಸ ಮುಗಿದ ನಂತರ ಮಾಡುವ ಅವಾಂತರಗಳು ಅಷ್ಟಿಸ್ಟಲ್ಲ. ಇನ್ನು ಹೆಚ್‌ಎಎಲ್‌ ಬಳಿಯ ವಿಜ್ಞಾನ ನಗರದಲ್ಲಿ ವಾಸವಿದ್ದ ಒಡಿಶಾ ಮೂಲದ ಟೆಕ್ಕಿಗಳು, ಕುಡಿದು ಪಾರ್ಟಿ ಮಾಡುವಾಗ ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಕೊಲೆ ಮಾಡಿ ಅವಾಂತರ ಸೃಷ್ಟಿಸಿದ್ದಾರೆ. ಈಗ ಟೆಕ್ಕಿಗಳ ಅವಾಂತರದಿಂದ ಒಂದು ಕುಟುಂಬಕ್ಕೆ ಆಸರೆಯಾಗಿದ್ದ ವ್ಯಕ್ತಿಯನ್ನೇ ಕಳೆದುಕೊಂಡ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

Tap to resize

Latest Videos

Mangaluru: ವಿಶೇಷ ಚೇತನ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ 65ರ ಮುದುಕಪ್ಪ!

ಪ್ರತಿನಿತ್ಯ ಪಾರ್ಟಿ ಮಾಡುತ್ತಿದ್ದ ಟೆಕ್ಕಿಗಳು: ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ಕೆಲಸಕ್ಕೆ ಹೋಗುತ್ತಿದ್ದ ಇಂಜಿನಿಯರ್‌ಗಳು ರಾತ್ರಿ ವೇಳೆ ಪಾರ್ಟಿ ಮಾಡುತ್ತಿದ್ದರು. ಇನ್ನು ತಮ್ಮ ಪಾಡಿಗೆ ಮನೆಯಲ್ಲಿ ಪಾರ್ಟಿ ಮಾಡಿಕೊಂಡರೆ ಸಮಸ್ಯೆಯಿಲ್ಲ. ಆದರೆ, ವಿಜ್ಞಾನನಗರದಲ್ಲಿ ವಾಸವಿದ್ದ ಟೆಕ್ಕಿಗಳು ತಮ್ಮ ಮನೆಯನ್ನು ಮಿನಿ ಥಿಯೇಟರ್‌ ಹಾಗೂ ಪಬ್‌ನಂತೆ ಮಾರ್ಪಾಡು ಮಾಡಿಕೊಂಡಿದ್ದಾರೆ. ಮನೆಯಲ್ಲಿ ದೊಡ್ಡ ಸೌಂಡ್‌ ಸಿಸ್ಟಂಗಳನನು ಇಟ್ಟುಕೊಂಡು ಪ್ರತಿನಿತ್ಯ ರಾತ್ರಿ ಹಲವು ಜನರು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದರು. ಇದರಿಂದ ತೀವ್ರ ಕಿರಿಕಿರಿ ಉಂಟಾಗಿದ್ದರಿಂದ ಸೌಂಡ್‌ ಕಡಿಮೆ ಮಾಡಿ ಎಂದು ಪಕ್ಕದ ಮನೆಯ ಮಾಲೀಕರು ಹೇಳಿದ್ದಾರೆ. ಇಷ್ಟು ಹೇಳಿದ್ದಕ್ಕೆ ಕೋಪಗೊಂಡ ಟೆಕ್ಕಿಗಳು ಕುಡಿದ ಅಮಲಿನಲ್ಲಿ ಗುಂಪಾಗಿ ಸೇರಿಕೊಂಡು ಪ್ರಶ್ನೆ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆತ ತಿಂದು ತೀವ್ರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ನಶೆ ಏರಿಸಿಕೊಂಡು ಬಂದು ಹಲ್ಲೆ: ಮೃತ ವ್ಯಕ್ತಿ ಲಾಯಿಡ್  ನೇಮಯ್ಯ ಎಂದು ಗುರುತಿಸಲಾಗಿದೆ. ಟೆಕ್ಕಿಳು ಮನೆಯಲ್ಲಿ ಪಾರ್ಟಿ ಮಾಡುತ್ತಾ ಜೋರು ಸೌಂಡ್ ನಲ್ಲಿ ಹಾಡು ಹಾಕಿದ್ದರು. ಈ ವೇಳೆ ಸೌಂಡ್ ಕಡಿಮೆ ಮಾಡಿ ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದು ಮನವಿ ಮಾಡಿದ್ದಾರೆ. ಇದಾದ ಸ್ವಲ್ಪ ಸಮಯದ ಎಲ್ಲರೂ ಎಣ್ಣೆ ಹಾಕಿಕೊಂಡು ನಶೆ ಏರಿಸಿಕೊಂಡು ನಂತರ ನೇಮಯ್ಯ ಅವರ ಮನೆಗೆ ಬಂದು ಮನಸೋ ಇಚ್ಛೆ ಥಳಿಸಿದ್ದಾರೆ. ಗಲಾಟೆ ಬಳಿಕ ನೇಮಯ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮದ್ವೆಗೆ ಗಿಫ್ಟ್‌ ಕೊಟ್ಟ ಮ್ಯೂಸಿಕ್‌ ಸಿಸ್ಟಂನಲ್ಲಿ ಬಾಂಬ್‌..! ವಧುವಿನ ಎಕ್ಸ್ ಬಾಯ್‌ಫ್ರೆಂಡ್‌ ಅಂದರ್‌

ಹಲ್ಲೆ ಕೇಸ್‌ ಬಳಿಕ ಕೊಲೆ ಕೇಸ್‌ ದಾಖಲು: ಇನ್ನು ಈ ದುರ್ಘಟನೆ ಏಪ್ರಿಲ್‌ 2ರ ರಾತ್ರಿ ನಡೆದಿದೆ. ಗಲಾಟೆ ಬಳಿಕ ನೇಮಯ್ಯ ಅವರ ಕುಟುಂಬ ಸದಸ್ಯರು ಹೆಚ್‌ಎಎಲ್‌ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ  ಹಲ್ಲೆ ಕೇಸ್ ದಾಖಲು ಮಾಡಿಕೊಂಡಿದ್ದರು. ನಂತರ ನೇಮಯ್ಯ ಅವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೊಲೆ ಕೇಸ್‌ ದಾಖಲು ಮಾಡಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇನ್ನುನೇಮಯ್ಯ ಅವರ ಮೇಲೆ ಹಲ್ಲೆ ಮಾಡಿದ ಟೆಕ್ಕಿಗಳನ್ನು  ಒಡಿಶಾ ಮೂಲದವರು ಎಂದು ಶಂಕಿಸಲಾಗಿದೆ.

click me!