'ಏನು ಆಗಲ್ಲ,  ಮನೆಗೆ ಹೋಗಿ' ಚಿಕತ್ಸೆ ಸಿಗದೆ ಕೊರೋನಾ ಶಂಕಿತ ಉದ್ಯಮಿ ಫ್ಲಾಟ್‌ನಲ್ಲೇ ಸಾವು

By Suvarna NewsFirst Published Jul 10, 2020, 8:29 PM IST
Highlights

ತನ್ನ ಫ್ಲಾಟ್ ನಲ್ಲೆ ನರಳಿ ನರಳಿ ಸಾವನಪ್ಪಿದ ಕೋರೋನಾ ಶಂಕಿತ ವ್ಯಕ್ತಿ/ ಯಶವಂತಪುರ ಬಳಿಯ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ನಲ್ಲಿ ಘಟನೆ/ ಕೊರೋನಾ ಲಕ್ಷಣಗಳಿಂದ ಬಳಲಿದ್ದ ಶಂಕಿತ/ 

ಬೆಂಗಳೂರು(ಜು.  10)  ಕೊರೋನಾ ಶಂಕಿತ ವ್ಯಕ್ತಿ ತನ್ನ ಫ್ಲಾಟ್ ನಲ್ಲಿಯೇ ನರಳಿ ನರಳಿ ಸಾವನ್ನಪ್ಪಿದ್ದಾನೆ. ಯಶವಂತಪುರ ಬಳಿಯ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ನಲ್ಲಿ ಘಟನೆ  ನಡೆದಿದೆ.

ಕೊರೋನ ಲಕ್ಷಣಗಳಿಂದ ಬಳಲುತ್ತಿದ್ದ ಉದ್ಯಮಿಗೆ ಚಿಕಿತ್ಸೆ ಸಿಕ್ಕಿಲ್ಲ. ಕಳೆದ ಒಂದು ವಾರದಿಂದ ಫ್ಲಾಟ್ ನಲ್ಲಿ ಒಬ್ಬನೆ ವಾಸವಾಗಿದ್ದ. ತಡರಾತ್ರಿ ಉಸಿರಾಟದ ಸಮಸ್ಯೆ ಆಗಿ ರಾತ್ರಿ ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ತೆರಳಿದ್ದ. ಈಗ ಅಡ್ಮಿಟ್ ಮಾಡಿಕೊಳ್ಳಲು ಬೆಡ್ ಇಲ್ಲ. ಏನು ಆಗುವುದಿಲ್ಲ ಎಂದು ತಿಳಿಸಿ ಆತನನ್ನು ಹಿಂದಕ್ಕೆ ಕಳಿಸಲಾಗಿತ್ತು.

ಶುಕ್ರವಾರ ಕರ್ನಾಟಕ ಕೊರೋನಾ ಲೆಕ್ಕ; ಬೆಂಗಳೂರ ಕತೆ ಏನು?

ತಡರಾತ್ರಿ ಮನೆಯಲ್ಲಿ ಉಸಿರಾಟದ ಸಮಸ್ಯೆ ಕಾಡಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ರಾತ್ರಿ ತನ್ನ ಸಹೋದರನಿಂದ ಊಟ ಪಡೆದಿದ್ದ ಮಾಹಿತಿ ಇದೆ.

ಮಲಗಿದ್ದ ಕಾಟ್ ನಿಂದ  ಕೆಳಗೆ ಬಿದ್ದು ತಲೆಗೆ ಏಟು ಮಾಡಿಕೊಂಡು  35 ವರ್ಷ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದಾನೆ.  ಕೋಲಂಬಿಯಾ ಏಷಿಯಾ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು ಕೊರೋನಾ ಟೆಸ್ಟ್ ಗೆ ಸ್ಯಾಂಪಲ್ ಕಳುಹಿಸಿಕೊಡಲಾಗಿದೆ.

click me!