Yadgir crime: ಹಗರಣ ಬಯಲಿಗೆಳೆದಿದ್ದಕ್ಕೆ ಅರೆನಗ್ನಗೊಳಿಸಿ ಆರ್‌ಟಿಐ ಕಾರ್ಯಕರ್ತನಿಗೆ ಥಳಿತ!

By Ravi Janekal  |  First Published Dec 28, 2022, 9:27 PM IST

ಸಹಕಾರಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಹಗರಣ ಬಯಲಿಗೆಳೆದಿದ್ದಕ್ಕೆ ಯಾದಗಿರಿ ಆರ್‌ಟಿಐ ಕಾರ್ಯಕರ್ತ ಹಾಗೂ ಜೆಡಿಎಸ್ ಕಾರ್ಯಕರ್ತರಾದ ಬಸವರಾಜ ಅರುಣಿ ಎಂಬುವವರನ್ನು ಅರೆನಗ್ನಗೊಳಿಸಿ ಮನಸೋ ಇಚ್ಛೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.


ಯಾದಗಿರಿ (ಡಿ.28) : ಭ್ರಷ್ಟಾಚಾರ, ಹಗರಣಗಳನ್ನು ಬಯಲಿಗೆಳೆಯುವ ಆರ್‌ಟಿಐ ಕಾರ್ಯಕರ್ತರ ಮೇಲೆ ದೇಶಾದ್ಯಂತ ಹಲ್ಲೆಗಳು ನಡೆಯುತ್ತಿವೆ.  ರಾಜ್ಯದಲ್ಲೂ ಹಲವು ಕಾರ್ಯಕರ್ತರ ಮೇಲೆ ಮಾರಾಣಾಂತಿಕ ಹಲ್ಲೆಗಳು ನಡೆದಿವೆ. ನಡೆಯುತ್ತಲೇ ಇವೆ. ಅವುಗಳ ಸಾಲಿಗೆ ಇದೀಗ ಹಗರಣ ಬಯಲಿಗೆಳೆದನೆಂದು ಯಾದಗಿರಿ ಆರ್‌ಟಿಐ ಕಾರ್ಯಕರ್ತರೊಬ್ಬರನ್ನು ಅರೆನಗ್ನಗೊಳಿಸಿ ಥಳಿಸಿರುವ ಘಟನೆಯೂ ಸೇರ್ಪಡೆಯಾಗಿದೆ.

 ಸಹಕಾರಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಹಗರಣ ಬಯಲಿಗೆಳೆದಿದ್ದಕ್ಕೆ ಯಾದಗಿರಿ ಆರ್‌ಟಿಐ ಕಾರ್ಯಕರ್ತ ಹಾಗೂ ಜೆಡಿಎಸ್ ಕಾರ್ಯಕರ್ತರಾದ ಬಸವರಾಜ ಅರುಣಿ ಎಂಬುವವರನ್ನು ಅರೆನಗ್ನಗೊಳಿಸಿ ಮನಸೋ ಇಚ್ಛೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.

Tap to resize

Latest Videos

undefined

ಲಿಂಗರಾಜು ಹತ್ಯೆ: ಮಾಜಿ ಕಾರ್ಪೋರೇಟರ್‌ ಖುಲಾಸೆ

ಹಗರಣಕ್ಕೆ ಸಂಬಂಧಿಸಿದಂತೆ ರಾಜೀ ಸಂಧಾನಕ್ಕೆ ಬಂದಿದ್ದಾಗ ಪೇಡಾದಲ್ಲಿ ಕ್ರಿಮಿನಾಶಕ ಬೆರೆಸಿ ಕೊಲ್ಲಲು ಯತ್ನಿಸಿದ್ದಾನೆಂದು ಆರೋಪಿಸಿ ಶಹಾಪೂರ ಶಾಸಕ ಶರಣಬಸಪ್ಪಗೌಡ ದರ್ಶನಪುರ ಸಂಬಂಧಿ ವಿಶ್ವನಾಥ ರೆಡ್ಡಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಕಾರ್ಯಕರ್ತನ ಮೈಮೇಲಿನ ಬಟ್ಟೆ ಹರಿದು ಅರೆನಗ್ನಗೊಳಿಸಿ ಥಳಿಸಿದ್ದಾರೆ. ಬಸವರಾಜ ಅರುಣಿಯನ್ನು ತಳಿಸಿದ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನನ್ನ ಮೇಲಿನ ಆರೋಪ ಸುಳ್ಳು: ಆರ್‌ಟಿಐ ಕಾರ್ಯಕರ್ತ

 ವಿಶ್ವನಾಥ ರೆಡ್ಡಿ ಮಾಡಿರುವ ಆರೋಪ ಸುಳ್ಳು ಎಂದಿರುವ ಕಾರ್ಯಕರ್ತ,  ಪೇಡಾದಲ್ಲಿ ಕ್ರಿಮಿನಾಶಕ ಬೆರೆಸಿ ಕೊಲ್ಲಲು ಯತ್ನಿಸಿಲ್ಲ, ಸಹಕಾರ ಬ್ಯಾಂಕಿನಲ್ಲಾದ ಹಗರಣ ಬಯಲಿಗೆಳೆದಿದ್ದಕ್ಕೆ ದ್ವೇಷದಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ. 

ತಹಶೀಲ್ದಾರ್‌ಗೆ ಎಷ್ಟು ಮದ್ವೆ ಆಗಿದೆ, ಯಾರ ಜೊತೆ ಸಂಸಾರ ಮಾಡ್ತಿದ್ರು? ಅಂತ ಕೇಳಿದ ಆರ್‌ಟಿಐ ಕಾರ್ಯಕರ್ತ ಅಂದರ್

ಜಿಲ್ಲಾ ಸಹಕಾರಿ ಬ್ಯಾಂಕಿನ ಪ್ರವರ್ತಕ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ಸೋಲುಂಡಿದ್ದ ಬಸವರಾಜ ಅರುಣಿ, ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಬಯಲಿಗಳದಿದ್ದರು. ಇದರಿಂದ ಸಿಟ್ಟುಗೊಂಡಿದ್ದ ವಿಶ್ವನಾಥ ರೆಡ್ಡಿ ಸೇಡು ತೀರಿಸಿಕೊಳ್ಳಲು ಈ ರೀತಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಬೆತ್ತಲುಗೊಳಿಸಿ ಥಳಿಸಿದ್ದಾರೆ ಎಂದು ಕಾರ್ಯಕರ್ತ ಆರೋಪಿಸಿದ್ದಾನೆ. ಸದ್ಯ ಈ ಪ್ರಕರಂಣ ರಾಜಕೀಯ ತಿರುವು ಪಡೆದಿದ್ದು, ಆರ್ ಟಿ ಐ ಕಾರ್ಯಕರ್ತ ಬಸವರಾಜ ಅರುಣಿ ವಿರುದ್ಧ ವಿಶ್ವನಾಥ ರೆಡ್ಡಿ  ಶಹಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

click me!