ಮನೆ ಮನೆಗೆ ತೆರಳಿ ಕ್ರೈಸ್ತ್ ಧರ್ಮದ ಕರಪತ್ರ ಹಂಚಿ ಬಲವಂತವಾಗಿ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪ ಹಿನ್ನೆಲೆ ಸ್ಥಳೀಯರು ಕ್ರಿಶ್ಚಿಯನ್ ಮಹಿಳೆಯನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಯಾದಗಿರಿ ನಗರದ ಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ.
ಯಾದಗಿರಿ (ಆ.21) ಮನೆ ಮನೆಗೆ ತೆರಳಿ ಕ್ರೈಸ್ತ್ ಧರ್ಮದ ಕರಪತ್ರ ಹಂಚಿ ಬಲವಂತವಾಗಿ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪ ಹಿನ್ನೆಲೆ ಸ್ಥಳೀಯರು ಕ್ರಿಶ್ಚಿಯನ್ ಮಹಿಳೆಯನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಯಾದಗಿರಿ ನಗರದ ಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ.
ರೇಚಲ್ ರಾಬರ್ಟ್, ಕರುಣಾ ಎಂಬ ಮಹಿಳೆಯರಿಂದ ಮತಾಂತರ ಯತ್ನ. ಇಬ್ಬರು ಬೆಂಗಳೂರು ಮೂಲದವರಾಗಿದ್ದರು ಯಾದಗಿರಿ ನಗರದಲ್ಲಿ ಹಿಂದೂಗಳ ಮನೆಮನೆಗೆ ತೆರಳಿ ಬೈಬಲ್ ಪುಸ್ತಕ ಹಂಚಿ ಮತಾಂತರಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದೆ.
undefined
ಬಾಂಗ್ಲಾ ಮಾದರಿ ದಾಳಿ ನಡೆಸುತ್ತೇವೆ ಅನ್ನೋದಕ್ಕೆ ಎಷ್ಟು ಧೈರ್ಯ ಅವನಿಗೆ ; ಐವನ್ ಡಿಸೋಜಾ ವಿರುದ್ಧ ಶಾಸಕ ಎ ಮಂಜು ಕೆಂಡ
ಹಿಂದೂ ದೇವರ ಬಗ್ಗೆ ಕೇವಲವಾಗಿ ಮಾತನಾಡಿರುವ ಮಹಿಳೆಯರು. ಭೂಮಿ ಮೇಲೆ ದೇವರು ಅಂತಾ ಇದ್ರೆ ಅದು ಏಸುಕ್ರಿಸ್ತ ಒಬ್ಬನೇ. ನಿಮ್ಮ ದೇವರುಗಳು ನಿಮಗೆ ರಕ್ಷಣೆ ನೀಡುವುದಿಲ್ಲ. ನಿಮ್ಮ ಹಿಂದೂ ಧರ್ಮ ತ್ಯಜಿಸಿ ಕ್ರೈಸ್ತ ಧರ್ಮಕ್ಕೆ ಬನ್ನಿ. ನಿಜವಾದ ದೇವರು ಏಸು ಕ್ರಿಸ್ತನನ್ನು ಅನುಸರಿಸಲು ಹಿಂದೂ ಧರ್ಮ ತ್ಯಜಿಸುವಂತೆ ಒತ್ತಾಯ. ಮನೆ ಮನೆಗೆ ತೆರಳಿ ಮುಗ್ಧ ಜನರ ತಲೆಕೆಡಿಸಿ ಮಾತಾಂತರ ಮಾಡುತ್ತಿರುವ ಮಿಷನರಿಗಳು.
ಬೆಂಗಳೂರಿನಿಂದ ಬಂದು ಇಬ್ಬರು ಮಹಿಳೆಯರು ಮತಾಂತರ ಮಾಡುತ್ತಿರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಸಿಕ್ಕ ಹಿನ್ನೆಲೆ ಇಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇಂತಹ ಕೃತ್ಯವೆಸಗಿದ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ಥಳೀಯ ಸುರೇಶ್ ಎಂಬಾತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.