ತುಮಕೂರಿನಲ್ಲಿ ಕಮಿಷನ್ ಆರೋಪಕ್ಕೆ ಮತ್ತೊಂದು ಬಲಿ: ಗುತ್ತಿಗೆದಾರ ನೇಣಿಗೆ ಶರಣು

By Govindaraj SFirst Published Dec 31, 2022, 1:30 AM IST
Highlights

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬೆನ್ನಲ್ಲೇ 40% ಕಮಿಷನ್ ಆರೋಪ ಬಿಜೆಪಿ ವಿರುದ್ಧ ಕೇಳಿಬಂದಿತ್ತು.. ಇದರಿಂದ ಇಡೀ ರಾಜ್ಯಾದ್ಯಂತ ಬಿಜೆಪಿಗೆ ಮುಜುಗರ ಉಂಟಾಗಿ ಈಶ್ವರಪ್ಪ ಅವರನ್ನ ಸಚಿವ ಸ್ಥಾನದಿಂದ ಕೆಳಗೆ ಇಳಿಸಲಾಯ್ತು.

ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಡಿ.31): ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬೆನ್ನಲ್ಲೇ 40% ಕಮಿಷನ್ ಆರೋಪ ಬಿಜೆಪಿ ವಿರುದ್ಧ ಕೇಳಿಬಂದಿತ್ತು.. ಇದರಿಂದ ಇಡೀ ರಾಜ್ಯಾದ್ಯಂತ ಬಿಜೆಪಿಗೆ ಮುಜುಗರ ಉಂಟಾಗಿ ಈಶ್ವರಪ್ಪ ಅವರನ್ನ ಸಚಿವ ಸ್ಥಾನದಿಂದ ಕೆಳಗೆ ಇಳಿಸಲಾಯ್ತು. ಇದೆಲ್ಲಾ ಬೆಳವಣಿಗೆಗಳ ನಡುವೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಚಿವ ಮುನಿರತ್ನ ವಿರುದ್ದ ಮತ್ತೆ ಕಮಿಷನ್ ಆರೋಪ ಮಾಡಿದ್ರು. ಇದಾದ ಕೆಲವೇ ದಿನಗಳಲ್ಲಿ ಕೆಂಪಣ್ಣನನ್ನ ಅರೆಸ್ಟ್ ಮಾಡಲಾಯ್ತು. ಈಗ ಮತ್ತೊಬ್ಬ ಗುತ್ತಿಗೆದಾರ ಕಮಿಷನ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಇಡೀ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ದ40% ಸರ್ಕಾರ ಎಂಬ ಮಾತು ಕೇಳಿ ಬಂದಿತ್ತು. ಅದರ ಬೆನ್ನಲ್ಲೆ 40% ಕಮಿಷನ್ ನೀಡಲಾಗದೆ ಗುತ್ತಿದಾರ ಸಂತೋಷ್ ಸಾವನ್ನೊಪ್ಪಿದ್ದ. ಈ ವಿಚಾರವಾಗಿ ಸರ್ಕಾರಕ್ಕೆ ಸಾಕಷ್ಟು ಮುಜುಗರವಾಗಿತ್ತು. ಇನ್ನೂ ಈ ವಿಚಾರ ತೀವ್ರ ರೂಪ ಪಡೆದು ಕೊಂಡ ಬೆನ್ನಲ್ಲೆ ಸಚಿವ ಈಶ್ವರಪ್ಪನ ರಾಜೀನಾಮೆ ಸಹ ಕೊಟ್ಟಿದ್ರು. ಇನ್ನೂ ಈ 40% ಕಮಿಷನ್ ದಂಧೆ ಜೀವಂತವಾಗಿ ಇದೆ ಅನ್ನೊದಕ್ಕೆ ಇಂದು ತುಮಕೂರಿನ ದೇವರಾಯನದುರ್ಗದ ಪ್ರವಾಸಿ ಮಂದಿರದಲ್ಲಿ ಲೋಕೊಪಯೋಗಿ ಗುತ್ತಿಗೆದಾರ ಪ್ರಸಾದ್ ಸಾಲಬಾದೆ ತಾಳಲಾರದೆ  ಆತ್ಮಹತ್ಯೆ ಮಾಡಿಕೊಂಡ ಘಟನೆ‌ ಸಾಕ್ಷಿಯಾಗಿದೆ. 

ಜೆಡಿಎಸ್‌ನಿಂದ ರೈತರ ಸಮಸ್ಯೆಗೆ ಪರಿಹಾರ: ಎಚ್‌.ಡಿ.ಕುಮಾರಸ್ವಾಮಿ

ಶುಕ್ರವಾರ ಬೆಳಿಗ್ಗೆ ಪ್ರವಾಸಿ ಮಂದಿರ ಸಿಬ್ಬಂದ್ದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಘಟನಾ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಗುತ್ತಿದರಾರ ಪ್ರಸಾದ್ ಮಧುಗಿರಿ ಮೂಲದವನಾಗಿದ್ದು, ತುಮಕೂರಿನ ಸಪ್ತಗಿರಿ ಬಡವಾಣೆಯಲ್ಲಿ ವಾಸವಾಗಿದ್ದ. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರನಾಗಿದ್ದ ಪ್ರಸಾದ್ ಸಾಕಷ್ಟು ಲೋಕೊಪಯೋಗಿ ಕೆಲಸಗಳನ್ನು ಮಾಡಿಸಿದ್ದ. ಲೋಕೋಪಯೋಗಿ ಇಲಾಖೆಯಲ್ಲಿ ಸರಿಯಾದ ಸಮಯಕ್ಕೆ ಬಿಲ್ ಪಾವತಿಯಾಗದ ಹಿನ್ನಲೆ ಸುಮಾರು ಒಂದೂವರೆ ಕೋಟಿ ಸಾಲ ಮಾಡಿಕೊಂಡಿದ್ದ. 

ಪ್ರತಿನಿತ್ಯ ಸಾಲ ಕೊಟ್ಟವರು ಮನೆ ಹತ್ತಿರ ಬಂದು ಜಗಳ ಮಾಡುತ್ತಿದ್ದರು. ಇದರಿಂದ ಮನನೊಂದು ದೇವರಾಯ ದುರ್ಗದ ಪ್ರವಾಸಿ ಮಂದಿರ ಆತ್ಮಹತ್ಯೆಮಾಡಿಕೊಂಡಿದ್ದಾನೆ. ಇನ್ನೂ ಸಾಲಗಾರರ ಕಾಟ ತಾಳಲಾರದೆ ಎಷ್ಟೊ ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. 40% ಕಮಿಷನ್ ಹಾಗೂ ಸಾಲಗಾರರ ಕಾಟಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಸಾದ್ ಕುಟುಂಬ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಎಂದು ಗುತ್ತಿಗೆದಾರರು ನೋವನ್ನು ಹೊರಹಾಕಿದ್ದಾರೆ. 

Yadgir: ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು!

ಬಿಜೆಪಿ ಸರ್ಕಾರದಲ್ಲಿ ಸಂತೋಷ್ ಆತ್ಮಹತ್ಯೆಯ ನಂತರ ಗುತ್ತಿಗೆದಾರ ಪ್ರಸಾದ್ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಯೇ ಕಾರಣ ಹಾಗೂ 40% ಕಮಿಷನ್ ಪಡೆಯುವ ಬಿಜೆಪಿ ಸರ್ಕಾರ ಹಾಗೂ ಕೆಲ ಶಾಸಕರು ಮತ್ತು ಅಧಿಕಾರಿಗಳಿಂದಲೇ ಈ ರೀತಿ ಗುತ್ತಿಗೆದಾರರು ಜೀವನ ಆತಂತ್ರಕ್ಕೆ ಸಿಲುಕು ಸಾಲ ತೀರಿಸಲಾರದೆ, ಕಮಿಷನ್ ಕೊಟ್ರು ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಬಿಲ್ ಮಾಡಿ ಕೊಡುತ್ತಿಲ್ಲ ಎಂದು ಗುತ್ತಿದಾರರು  ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ 40% ಕಮಿಷನ್ ದಂಧೆಗೆ ಗುತ್ತಿಗೆದಾರರು ತತ್ತರಿಸಿ ಹೋಗಿದ್ದು, ಗುತ್ತಿಗೆದಾರರು ಪರಿಸ್ಥಿತಿ ಬೀದಿಗೆ ಬೀಳುವಂತಾಗಿದೆ. ಇನ್ನಾದರೂ ಈ  ಸರ್ಕಾರ ಮಧ್ಯಪ್ರವೇಶಿ ತಾರ್ಕಿಕ ಅಂತ್ಯ ಆಡುತ್ತಾ ಅನ್ನೊದನ್ನಾ ಕಾದು ನೋಡಬೇಕಿದೆ.

click me!