
ಬೆಂಗಳೂರು (ಸೆ.15): ‘ಡ್ರಗ್ಸ್ ದಂಧೆ ವಿಚಾರದಲ್ಲಿ ನನ್ನ ಹೆಸರು ತಳಕು ಹಾಕಿ ರಾಜಕೀಯವಾಗಿ ಮುಗಿಸುವ ಷಡ್ಯಂತ್ರನಡೆಸಲಾಗುತ್ತಿದೆ. ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಫಾಝಿಲ್ ತಪ್ಪು ಮಾಡಿದ್ದರೆ ಗಲ್ಲು ಶಿಕ್ಷೆ ವಿಧಿಸಿ. ನಾನು ತಪ್ಪು ಮಾಡಿದರೆ ನನಗೂ ಗಲ್ಲು ಶಿಕ್ಷೆ ನೀಡಿ. ಆದರೆ ಆಧಾರರಹಿತ ಆರೋಪ ಮಾಡಬೇಡಿ.’
- ಹೀಗಂತ ಮಾಜಿ ಸಚಿವ ಜಮೀರ್ ಅಹಮದ್‌ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲಾ ವಿವಾದಗಳನ್ನೂ ನನ್ನ ಹೆಸರು ಪ್ರಸ್ತಾಪ ಮಾಡಲು ಪ್ರಯತ್ನಿಸಲಾಗುತ್ತಿದೆ. ಮಾಧ್ಯಮಗಳು ತಮ್ಮ ಟಿಆರ್‌ಪಿಗಾಗಿ ನನ್ನ ಹೆಸರು ಬಳಸಿಕೊಳ್ಳುತ್ತವೆ. ಇದು ಸರಿಯಲ್ಲ’ ಎಂದರು.
ಜಮೀರಣ್ಣ ಕುಮಾರಣ್ಣ ಹಳೆ ದೊಸ್ತಿ, ಹೊಸ ಕುಸ್ತಿ; ರಾಜ್ಯದ ಜನರಿಗೆ ಫುಲ್ ಮಸ್ತಿ! ...
‘ ನಾನು ಅಪರಾಧಿಯಾದರೆ ಪೊಲೀಸರು ವಿಚಾರಣೆ ಮಾಡಿ, ನ್ಯಾಯಾಲಯ ತೀರ್ಪು ನೀಡುತ್ತದೆ. ನಾನು ಅಪರಾಧಿ ಎಂದು ಮಾಧ್ಯಮಗಳು ಹೇಳುವುದು ಸರಿಯಲ್ಲ. ನಾನು ನಿರಪರಾಧಿ ಎಂದು ಸಾಬೀತಾದರೆ ಮಾಧ್ಯಮಗಳು ಕ್ಷಮೆ ಕೇಳುವವೆ?’ ಎಂದು ಕಿಡಿ ಕಾರಿದರು.
‘ನನ್ನ ವಿರುದ್ಧ ಆರೋಪ ಮಾಡಿರುವ ಪ್ರಶಾಂತ್ ಸಂಬರಗಿ ವಿರುದ್ಧ ನಾನೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಮಾನನಷ್ಟಮೊಕದ್ದಮೆಯನ್ನೂ ಸಹ ದಾಖಲಿಸಿದ್ದೇನೆ. ಇಷ್ಟಕ್ಕೂ ಸಂಬರಗಿ ಕೂಡ ನಾನು ಡ್ರಗ್ಸ್ ದಂಧೆಯಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಲ್ಲ. ಸಂಜನಾ ಜತೆ ಶ್ರೀಲಂಕಾಗೆ ಹೋಗಿದ್ದೇನೆ ಎಂದು ಹೇಳಿದ್ದಾರೆ. ಒಂದು ವೇಳೆ ಅದನ್ನಾದರೂ ಸಾಬೀತುಪಡಿಸಿದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ