ಸೋಶಿಯಲ್ ಮೀಡಿಯಾ ಗುದ್ದಾಟ; ಕ್ಷುಲ್ಲಕ ಕಾರಣಕ್ಕೆ ಬಾಲಕ ಕೊಲೆಯಾದ

By Suvarna NewsFirst Published Nov 30, 2020, 10:15 PM IST
Highlights

ಕ್ಷುಲ್ಲಕ ಕಾರಣಕ್ಕೆ ಬಾಲಕನ ಮೇಲೆ ಹಲ್ಲೆ/ ಫೇಸ್ ಬುಕ್ ನಲ್ಲಿ ಸಹೋದರಿಯ ಪೋಟೋ ಹಾಕಿದ್ದಕ್ಕೆ ಕೊಲೆ/ ಗೆಳೆಯರೊಂದಿಗೆ ದಾಳಿ ಮಾಡಿದ ಬಾಲಕ/ ಚಿಕಿತ್ಸೆ ಫಲಕಾರಿಯಾಗದೆ ಸಾವು

ಇಂದೋರ್(ನ. 30)  ಈ ಸೋಶಿಯಲ್ ಮೀಡಿಯಾ ಎಷ್ಟೊಂದು ಆತಂಕಕಾರಿಯಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.  ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ 16 ವರ್ಷದ ಬಾಲಕ ಮತ್ತು ಆತನ ಸ್ನೇಹಿತ 17 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ್ದು ದಾಳಿಗೊಳಗಾದವ ಸಾವನ್ನಪ್ಪಿದ್ದಾನೆ.

ಬಾಪು ನಗರದ ಕೃಷ್ಣ (17) ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿಹೋಗಿದ್ದಾನೆ. 16 ವರ್ಷದ ಬಾಲಕನ ಸಹೋದರಿಯ ಪೋಟೋವನ್ನು ಕೃಷ್ಣ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.

ಚುಡಾಯಿಸಿದ ಎಂಬ ಕಾರಣಕ್ಕೆ ಹಿಗ್ಗಾ ಮುಗ್ಗಾ ಥಳಿಸಿ, ಮಾನವನ ಮಲ ತಿನ್ನಲು ಹೇಳಿದ್ರು!
 
ಸಾಮಾನ್ಯ  ಪೋಟೋ ಅಪ್ ಲೋಡ್  ಮಾಡಿದ್ದ ಕೃಷ್ಣನನ್ನು ಕರೊಂಡಿ ರೈಲ್ವೆ ನಿಲ್ದಾಣದ ಬಳಿ ಬರಲು ಹೇಳಲಾಗಿದೆ. ಕೃಷ್ಣ ಅಲ್ಲಿಗೆ ಹೋದಾಗ ಆರೋಪಿ ಬಾಲಕ  ಇತರ ಮೂವರು ಸ್ನೇಹಿತರೊಂದಿಗೆ ನಿಂತಿದ್ದ. 

ಈ ವೇಳೆ  ಮೂವರು ಹಡುಗರಲ್ಲಿ ಒಬ್ಬಾತ ದಾಳಿ ಮಾಡಿದ್ದಾನೆ. ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲಾಗಿದೆ.   ಗಂಭೀರ ಗಾಯಗೊಂಡ ಬಾಲಕನನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ.

ಕೃಷ್ಣನ ಸೋದರಸಂಬಂಧಿ ದಾರಿಹೋಕರ ಸಹಾಯದಿಂದ ರಕ್ಷಣೆ ಮಾಡಿ ಆಂಬುಲೆನ್ಸ್ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆ.   ತೀವ್ರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.

click me!