* ಬಿ.ಕಾಂ ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ ಆರೋಪ
* ಮೂರು ತಿಂಗಳ ಗರ್ಭಿಣಿ ಆದ ಯುವತಿ
* ಸವಣೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 376(2)(N) ಮತ್ತು 506 ಅಡಿ ದೂರು ದಾಖ
ಹಾವೇರಿ, (ಜೂನ್.07): ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ: ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ಎಂದು ಗುರುವಿಗೆ ಪರಮಾತ್ಮನ ಸ್ಥಾನವನ್ನು ಕಲ್ಪಿಸಲಾಗಿದೆ. ಆದ್ರೆ ಇಲ್ಲೊಬ್ಬ ಪ್ರಾಧ್ಯಾಪಕ ಮನೆಯಲ್ಲಿ ಪಾಠ ಹೇಳಿಕೊಡುವುದಾಗಿ ವಿದ್ಯಾರ್ಥಿನಿಯನ್ನು ಕರೆಯಿಸಿಕೊಂಡು ಗರ್ಭಿಣಿ ಮಾಡಿದ್ದಾನೆ.
ಹೌದು..ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಕಲಕೋಟಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.
undefined
ಆರೋಪಿ ನಿಂಗಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ನಿಂಗಪ್ಪ ಕಲಕೋಟಿ ಎಂಬುವವರು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿ ಪಾಠ ಹೇಳಿಕೊಡುವುದಾಗಿ ಮನೆಗೆ ಕರೆಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಒಂದೂವರೆ ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ಏಳೆಂಟು ಬಾರಿ ಲೈಂಗಿಕಆಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಬಗ್ಗೆ ಯಾರಿಗೂ ಹೇಳದಂತೆ ವಿದ್ಯಾರ್ಥಿನಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾನಂತೆ.
ಬಾಯಿಗೆ ಬಟ್ಟೆ ತುರುಕಿ ಅಂಗವಿಕಲೆ ಮೇಲೆ ಅತ್ಯಾಚಾರ
ಇದೀಗ ವಿದ್ಯಾರ್ಥಿನಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ಹಾವೇರಿ ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಕಲಕೋಟಿ ವಿರುದ್ಧ ವಿದ್ಯಾರ್ಥಿನಿಯಿಂದ ಸವಣೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 376(2)(N) ಮತ್ತು 506 ಅಡಿ ದೂರು ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.
ಪ್ರೀತಿಸಿ ಮೋಸ ಮಾಡಿದ ಇಂಜಿನಿಯರ್
ಬಳ್ಳಾರಿ, (ಜೂನ್07) : ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ ಯುವತಿಯ ಜೊತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಆಕೆಗೆ ವಂಚಿಸಿದ ಇಂಜಿನಿಯರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ಜತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಆಕೆಗೆ ವಂಚಿಸಿದ ಆರೋಪದಡಿ ಬಳ್ಳಾರಿ ಕೆಎಂಎಫ್ನ ಅಸಿಸ್ಟೆಂಟ್ ಟೆಕ್ನಿಕಲ್ ಇಂಜಿನಿಯರ್ವೊಬ್ಬರನ್ನು ಮಹಿಳಾ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪಿ.ವೆಂಕಟೇಶ್ ಎಂಬುವರೆ ಬಂಧಿತ ಇಂಜಿನಿಯರ್. ರಾಯಚೂರು ಮೂಲದ ವೆಂಕಟೇಶ್ ಬಳ್ಳಾರಿಯ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ತದನಂತರ ಯುವತಿ ಮದುವೆಯಾಗೋಣ ಎಂದಾಗ ಅದೆಲ್ಲ ಸದ್ಯ ಬೇಡ, ಹೀಗೆಯೇ ಸ್ನೇಹಿತರಾಗಿ ಇರೋಣ ಎಂದು ಹೇಳಿದ್ದಾನೆ.
ಯುವಕನ ಮಾತಿನಿಂದ ಯುವತಿಗೆ ಪ್ರೀತಿಯ ನಾಟಕವಾಡಿ ವಂಚನೆ ಆಗಿರುವುದು ಗೊತ್ತಾಗಿದೆ. ಹೀಗಾಗಿ, ಪ್ರೇಮದ ವಿಚಾರವನ್ನು ಮನೆಯವರಲ್ಲಿ ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ವೆಂಕಟೇಶ್ ಬಳಿ ತಮ್ಮ ಮಗಳನ್ನು ಮದುವೆ ಆಗುವಂತೆ ಕೇಳಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ವೆಂಕಟೇಶ್ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ.
ಕೊನೆಗೆ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದಾಳೆ. ಯುವತಿಯ ದೂರಿನ ಮೇರೆಗೆ ಬಳ್ಳಾರಿ ಮಹಿಳಾ ಪೊಲೀಸರು ಆರೋಪಿ ವೆಂಕಟೇಶ್ ಹಾಗೂ ಆತನಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಸಹೋದರರಾದ ರಾಮಕೃಷ್ಣ, ತಾಯಣ್ಣ ಅವರನ್ನ ಬಂಧಿಸಿದ್ದು, ಸದ್ಯ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.