ಮಾ.25 ರಂದೇ ರೇಣುಕಾಸ್ವಾಮಿ ವಿರುದ್ಧ ದೂರಿದ್ದರೂ ಪೊಲೀಸರ ನಿರ್ಲಕ್ಷ್ಯ!

By Kannadaprabha NewsFirst Published Jun 19, 2024, 9:36 AM IST
Highlights

ಮೂರು ತಿಂಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಸಂಬಂಧ ಚಿತ್ರದುರ್ಗದ ರೇಣುಕಾಸ್ವಾಮಿ ವಿರುದ್ಧ ಇಬ್ಬರು ಕಿರುತೆರೆ ಸಹಕಲಾವಿದೆಯರು ನೀಡಿದ್ದ ದೂರಿನ ಬಗ್ಗೆ ಬಸವೇಶ್ವನಗರ ಠಾಣೆ ಪೊಲೀಸರು ನಿರ್ಲಕ್ಷ್ಯತನ ತೋರಿದ್ದರು ಎಂಬ ಆರೋಪ ಕೇಳಿ ಬಂದಿದೆ. 

ಬೆಂಗಳೂರು (ಜೂ.19): ಮೂರು ತಿಂಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಸಂಬಂಧ ಚಿತ್ರದುರ್ಗದ ರೇಣುಕಾಸ್ವಾಮಿ ವಿರುದ್ಧ ಇಬ್ಬರು ಕಿರುತೆರೆ ಸಹಕಲಾವಿದೆಯರು ನೀಡಿದ್ದ ದೂರಿನ ಬಗ್ಗೆ ಬಸವೇಶ್ವನಗರ ಠಾಣೆ ಪೊಲೀಸರು ನಿರ್ಲಕ್ಷ್ಯತನ ತೋರಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕಿರುತೆರೆಯಲ್ಲಿ ನಟಿಸಿರುವ ಇಬ್ಬರು ಸಂತ್ರಸ್ತೆಯರು ದೂರು ನೀಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಈ ಸಂತ್ರಸ್ತೆಯರಿಗೂ ಸಹ ಗೌತಮ್‌ ಹೆಸರಿನಲ್ಲೇ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿ ಕಾಟ ಕೊಟ್ಟಿದ್ದ. ಈ ದೂರನ್ನು ಬಸವೇಶ್ವರನಗರ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದರೆ ಈಗಿನ ಅನಾಹುತ ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ಇನ್‌ಸ್ಟಾಗ್ರಾಂನಲ್ಲಿ ಕಿರುತೆರೆ ಸಹನಟಿಯರು ರೀಲ್ಸ್‌ ಮಾಡುತ್ತಿದ್ದರು. ಈ ರೀಲ್ಸ್‌ಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ ಆತ, ಕೆಲ ಬಾರಿ ಖಾಸಗಿಯಾಗಿ ಸಂದೇಶ ಕಳುಹಿಸುತ್ತಿದ್ದ. ಇದೇ ವರ್ಷದ ಫೆಬ್ರವರಿಯಿಂದ ಈ ಸಂತ್ರಸ್ತೆಯರಿಗೆ ಅಶ್ಲೀಲ ಸಂದೇಶಗಳನ್ನು ನಿರಂತರವಾಗಿ ಕಳುಹಿಸಿ ರೇಣುಕಾಸ್ವಾಮಿ ತೊಂದರೆ ಕೊಡುತ್ತಿದ್ದ. ಈ ಸಂತ್ರಸ್ತೆಯರಿಗೂ ಕೂಡ ತನ್ನ ಗುಪ್ತಾಂಗದ ಪೋಟೋ ಕಳುಹಿಸಿ ಆತ ಅಸಹ್ಯವಾಗಿ ವರ್ತಿಸಿದ್ದ ಎಂದು ಸಂತ್ರಸ್ತೆಯರು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ.

Latest Videos

ರೇಣುಕಾಸ್ವಾಮಿ ಹತ್ಯೆ ದಿನ ದರ್ಶನ್‌ ಧರಿಸಿದ್ದ ಶೂ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆ!

ಪೊಲೀಸ್ ಅಧಿಕಾರಿ ಪುತ್ರ ಎಂದಿದ್ದ: ಇನ್ನು ಸಂತ್ರಸ್ತೆಯರಿಗೆ ತಾನು ಪೊಲೀಸ್ ಅಧಿಕಾರಿ ಪುತ್ರ. ನನಗೆ ಹುಡುಗಿಯರ ಜತೆ ಏಕಾಂತವಾಗಿ ಕಳೆಯವುದು ಅಂದರೆ ಬಹಳ ಇಷ್ಟ. ಆದರೆ ನನ್ನ ಪೋಟೋಗಳನ್ನು ನೀವು ಯಾರೊಂದಿಗೆ ಹಂಚಿಕೊಳ್ಳಬಾರದು. ನನ್ನ ತಂದೆ ಪೊಲೀಸ್ ಅಧಿಕಾರಿಯಾಗಿರುವ ಕಾರಣ ಅವುಗಳು ವೈರಲ್ ಆಗುತ್ತವೆ ಎಂದು ಮೃತ ರೇಣುಕಾಸ್ವಾಮಿ ಹೇಳಿಕೊಂಡಿದ್ದ ಎನ್ನಲಾಗಿದೆ.

ಅವಾಜ್‌ಗೆ ಬೆದರಿದ್ದ: ಅಪರಿಚಿತ ವ್ಯಕ್ತಿಯ ಅಶ್ಲೀಲ ಸಂದೇಶಗಳ ಬಗ್ಗೆ ಬೆಂಗಳೂರಿನ ನೆರೆ ಜಿಲ್ಲೆಯಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ ಆಗಿರುವ ತನ್ನ ಹಿರಿಯ ಸೋದರನಿಗೆ ಸಂತ್ರಸ್ತೆಯೊಬ್ಬರು ತಿಳಿಸಿದ್ದರು. ಆಗ ಸೋದರನ ಸೂಚನೆ ಮೇರೆಗೆ ಸಲುಗೆ ಮಾತುಗಳಿಂದ ರೇಣುಕಾಸ್ವಾಮಿಯನ್ನು ಅವರು ಗಾಳಕ್ಕೆ ಬೀಳಿಸಿದ್ದರು.

ಸಲುಗೆ ಚಾಟ್‌ ಮಾಡಿ ರೇಣುಕಾಸ್ವಾಮಿಗೆ ಪವಿತ್ರಾಗೌಡ ಗಾಳ: ಏನಿದು ರೋಚಕ ಕತೆ...

ಈ ಮಾತಿಗೆ ಮರುಳಾಗಿ ತನ್ನ ಹೆಸರು ಗೌತಮ್ ಚಿತ್ರದುರ್ಗ ಜಿಲ್ಲೆಯವನು. ಕೆ.ಆರ್‌.ಪುರದ ಟಿನ್ ಫ್ಯಾಕ್ಟರಿ ಸಮೀಪ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪೋಟೋ ಸಹಿತ ಮೊಬೈಲ್ ಸಂಖ್ಯೆಯನ್ನು ಕೊಟ್ಟು ವೈಯಕ್ತಿಕ ವಿವರವನ್ನು ಆತ ಹಂಚಿಕೊಂಡಿದ್ದ. ಈ ಮೊಬೈಲ್ ಸಂಖ್ಯೆ ಪಡೆದ ಸಂತ್ರಸ್ತೆ ಸೋದರ, ರೇಣುಕಾಸ್ವಾಮಿಗೆ ಬೈದಿದ್ದರಿಂದ ಕೂಡಲೇ ಸಂತ್ರಸ್ತೆಯನ್ನು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ. ಈ ಬಗ್ಗೆ ಮಾರ್ಚ್ 25 ರಂದು ಬಸವೇಶ್ವರ ನಗರ ಠಾಣೆಗೆ ದೂರು ಸಲ್ಲಿಸಲು ಸಂತ್ರಸ್ತೆಯರು ತೆರಳಿದ್ದರು. ಆದರೆ ಆ ವೇಳೆ ಪೊಲೀಸರು ಲಘುವಾಗಿ ವರ್ತಿಸಿದ್ದರಿಂದ ಬೇಸರಗೊಂಡು ಅವರು ಮರಳಿದ್ದರು ಎಂದು ತಿಳಿದು ಬಂದಿದೆ.

click me!