ಚುನಾವಣಾ ಸಮೀಪಿಸುತ್ತಿದ್ದಂತೆ ಪೊಲೀಸರ ಮೇಲೆ ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದು, ಕಮಿಷನರ್ ಪ್ರತಾಪ್ ರೆಡ್ಡಿ ಫುಲ್ ಗರಂ ಆಗಿದ್ದಾರೆ ಯಾವುದೇ ಒತ್ತಡ ಇಲ್ಲದೆ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರು (ಏ.16): ಚುನಾವಣಾ ಸಮೀಪಿಸುತ್ತಿದ್ದಂತೆ ಪೊಲೀಸರ ಮೇಲೆ ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದು, ದಿನೇ ದಿನೇ ಆರೋಪಗಳು ಹೆಚ್ಚಾಗುತ್ತಿರುವುದಕ್ಕೆ ಕಮಿಷನರ್ ಪ್ರತಾಪ್ ರೆಡ್ಡಿ ಫುಲ್ ಗರಂ ಆಗಿದ್ದಾರೆ. ದಿನಕ್ಕೊಂದರಂತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪೊಲೀಸರ ಮೇಲೆ ದೂರುಗಳು ಬರ್ತಿದೆ. ಸದ್ಯ ಎಲ್ಲಾ ದೂರುಗಳ ಕುರಿತು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಕಮಿಷನರ್ ತನಿಖೆಗೆ ಆದೇಶಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನಗರದ ಸುಮಾರು 10ಕ್ಕೂ ಹೆಚ್ಚು ಪೊಲೀಸರ ವಿರುದ್ದ ಆರೋಪ ಕೇಳಿ ಬರುತ್ತಿದೆ. ಅದ್ರಲ್ಲಿ ಕೆಲವು ತನಿಖೆಯಾಗಿ ಅಮಾನತ್ತಾದ್ರೆ, ಇನ್ನು ಕೆಲವು ತನಿಖೆ ಹಂತದಲ್ಲಿ ಇದೆ.
ಒಂದು ತಿಂಗಳ ಅವಧಿಯಲ್ಲಿ ಪೊಲೀಸರ ಮೇಲೆ ಬಂದ ಆರೋಪಗಳು ಇಂತಿದೆ. ಕರ್ತವ್ಯಲೋಪ, ಲಂಚಾವತಾರ, ಅನುಚಿತ ವರ್ತನೆ ಹಾಗೂ ಏಕಪಕ್ಷೀಯವಾಗಿ ಕೆಲಸ ಮಾಡ್ತಿರೋ ಆರೋಪಗಳು ಸೇರಿ ಹಲವು ದೂರುಗಳು ಬಂದಿದೆ.
undefined
ಮಾರತ್ ಹಳ್ಳಿ ಸಬ್ ಇನ್ಸ್ಪೆಕ್ಟರ್ ಅಂಡ್ ಟೀಂ:
ಮಾರತ್ ಹಳ್ಳಿ ಸಬ್ ಇನ್ಸ್ಪೆಕ್ಟರ್ ರಂಗೇಶ್ ಅಂಡ್ ಟೀಂನಿಂದ ಹಣಕ್ಕಾಗಿ ಬೆದರಿಕೆ ಕೇಸ್ ಇದರಲ್ಲಿ ಮುಖ್ಯವಾಗಿದೆ. ಉದ್ಯಮಿಗೆ ಪಿಸ್ತೂಲ್ ಇಟ್ಟು 40 ಲಕ್ಷಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು. ಇದ್ರಲ್ಲಿ ಈಗಾಗಲೇ ಸಬ್ ಇನ್ಸ್ಪೆಕ್ಟರ್ ನಾಪತ್ತೆಯಾಗಿದ್ದು ತೀವ್ರ ಹುಡುಕಾಟ ನಡೆಯುತ್ತಿದೆ.
ಪುಲಿಕೇಶಿನಗರ ಪೊಲೀಸರ ವಿರುದ್ಧ ರೈಸ್ ಪೂಲಿಂಗ್ ಕೇಸ್:
ಇದಾದ ಬಳಿಕ ರೈಸ್ ಪೂಲಿಂಗ್ ಕೇಸಲ್ಲಿ ಪುಲಿಕೇಶಿನಗರ ಪೊಲೀಸರ ವಿರುದ್ದ ಆರೋಪ ಕೇಳೀಬಂದಿದೆ. ರೈಸ್ ಪೂಲಿಂಗ್ ಕೇಸಲ್ಲಿ ದೂರುದಾರನಿಂದಲೇ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಈಗಾಗಲೇ ಐದು ಜನ ಸಿಬ್ಬಂದಿ, ಓರ್ವ ಸಬ್ ಇನ್ಸ್ಪೆಕ್ಟರ್ ಅಮಾನತ್ತಾಗಿದ್ದು ಈಗ ಇನ್ಸ್ಪೆಕ್ಟರ್ ವಿರುದ್ಧ ತೂಗುಗತ್ತಿ ಇದೆ. ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಯುತ್ತಿದೆ
ಮಾಜಿ ಪ್ರಧಾನಿ ದೇವೇಗೌಡರಿಂದ ಮೂವರು ಇನ್ಸ್ಪೆಕ್ಟರ್ ಗಳ ಮೇಲೆ ಆರೋಪ:
ಇವೆಲ್ಲದರ ನಡುವೆ ಮಾಜಿ ಪ್ರಧಾನಿ ದೇವೇಗೌಡ ಅವರು ಮೂವರು ಇನ್ಸ್ಪೆಕ್ಟರ್ ಗಳ ಮೇಲೆ ಆರೋಪ ಹೊರಿಸಿದ್ದಾರೆ. ಚುನಾವಣಾ ಹಿನ್ನಲೆ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡ್ತಾ ಇದ್ದಾರೆ ಅಂತ ಕಗ್ಗಲೀಪುರ, ತಲಘಟ್ಟಪುರ ಹಾಗೂ ತಾವರೆಕೆರೆ ಇನ್ಸ್ಪೆಕ್ಟರ್ ಗಳ ಮೇಲೆ ಆರೋಪಿಸಿದ್ದಾರೆ. ಆರೋಪದ ಜೊತೆಗೆ ಮೂರು ಠಾಣೆಯ ಇನ್ಸ್ಪೆಕ್ಟರ್ ಗಳ ವಿರುದ್ದ ಪತ್ರ ಬರೆಸಿರೋ ಮಾಜಿ ಪ್ರಧಾನಿ ದೇವೇಗೌಡ. ಇದರ ಬಗ್ಗೆಯೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು ತನಿಖೆ ನಡೆಯುತ್ತಿದೆ.
ವಿಚಾರಣೆಗೆ ಬಂದ ಮಹಿಳೆ ಜೊತೆ ಸಬ್ ಇನ್ಸ್ಪೆಕ್ಟರ್ ಅನುಚಿತ ವರ್ತನೆ:
ಇದರ ಜೊತೆಗೆ ಸುದ್ದುಗುಂಟೆಪಾಳ್ಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಸ್ವಾಮಿ ವಿಚಾರಣೆಗೆ ಬಂದ ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿರುವ ಆರೋಪವಿದೆ. ಜೊತೆಗೆ ಆಕೆಯ ನಂಬರ್ ಪಡೆದು ಕಿರುಕುಳ ನೀಡಿದ ಆರೋಪವಿದೆ. ಹೀಗಾಗಿ ಮಂಜುನಾಥ್ ಸ್ವಾಮಿಯನ್ನು ಅಮಾನತು ಮಾಡಿ ಕಮಿಷನರ್ ಆದೇಶ ಹೊರಡಿಸಿದ್ದಾರೆ.
Vijayapura: ಮಗನಿಗೆ ಸರ್ಕಾರಿ ನೌಕರಿ ಸಿಕ್ಕ ಖುಷಿ, ಸಿಡಿ ಆಡಿ ಹರಕೆ ತೀರಿಸಲು ಹೋಗಿ ಮಹಿಳೆ ಬಲಿ!
ಐಷಾರಾಮಿ ಕಾರು ಕಳ್ಳತನ ಆರೋಪದಲ್ಲಿ ತಪ್ಪಿಲ್ಲದವರ ಮೇಲೆ ಕೇಸ್:
ಇತ್ತೀಚೆಗೆ ಹೈಗ್ರೌಂಡ್ಸ್ ಪೊಲೀಸರು ಐಷಾರಾಮಿ ಕಾರು ಕಳ್ಳತನ ಆರೋಪಿಗಳನ್ನು ಬಂಧಿಸಿದ್ದರು. ಈ ಬಗ್ಗೆ ಕೆಲ ಆರೋಪಿಗಳು ಜಾಮೀನು ಪಡೆದ ಬಳಿಕ ಸುದ್ದಿಗೋಷ್ಟಿ ನಡೆಸಿ ನಮ್ಮದು ತಪ್ಪಿಲ್ಲ ಅಂದ್ರೂ ಕೇಸ್ ನಲ್ಲಿ ಸಿಲುಕಿಸಿದ್ದಾರೆ ಅಂತ ಆರೋಪ ಮಾಡಿದ್ದರು. ಇದರ ಜೊತೆಗೆ ಲಕ್ಷ ಲಕ್ಷ ಹಣಕ್ಕೆ ಪೊಲೀಸರು ಬೇಡಿಕೆ ಇಟ್ಟಿದ್ದಾರೆ ಅಂತ ದೂರಿದ್ದರು.
Bengaluru: ಅನ್ನ ಕೊಟ್ಟ ಮನೆಗೆ ಕನ್ನ ಹಾಕಿ, ಸಹಚರರ ಜೊತೆ ಸಿಕ್ಕಿಬಿದ್ದ ಚಾಲಾಕಿ ಕಳ್ಳಿ!
ಸದ್ಯ ಈ ಎಲ್ಲಾ ಕೇಸ್ ಗಳಿಂದ ತಲೆಕೆಡಿಸಿಕೊಂಡ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಯಾವುದೇ ಒತ್ತಡ ಇಲ್ಲದೆ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಈಗಾಗಲೇ ಕೆಲವರನ್ನು ಅಮಾನತು ಮಾಡಲಾಗಿದ್ದು, ಇನ್ನು ಕೆಲವರು ಶೀಘ್ರವೇ ಅಮಾನತು ಆಗಲಿದ್ದಾರೆ.