
ಕೋಲ್ಕತಾ(ನ.01): ಅಕ್ಕ ಹಾಗೂ ತಂಗಿ ಶಾಪಿಂಗ್ ಮಾಲ್‌ಗೆ ತೆರಳಿದ್ದಾರೆ. ಈ ವೇಳೆ ಬಗೆ ಬಗೆಯ ಚಾಕೋಲೇಟ್ ನೋಡಿದ 21ರ ಹರೆಯದ ಕಾಲೇಜು ಯುವತಿಗೆ ತಿನ್ನುವ ಆಸೆಯಾಗಿದೆ. ಮೆಲ್ಲನೆ ಚಾಕೋಲೆಟ್ ಕದ್ದಿದ್ದಾಳೆ. ಆದರೆ ಇದು ಮಾಲ್ ನಿರ್ವಹಣೆ ಮಾಡುವರಿಗೆ ಗೊತ್ತಾಗಿದೆ. ಹೀಗಾಗಿ ಸಿಬ್ಬಂದಿಗಳು ಯುವತಿಯನ್ನು ಹಿಡಿದಿದ್ದಾರೆ. ಈ ವೇಳೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದ್ದಾಳೆ. ಬಳಿಕ ಚಾಕೋಲೇಟ್ ಹಣ ನೀಡಿ ಶಾಪಿಂಗ್ ಮಾಲ್‌ನಿಂದ ಮನೆಗೆ ವಾಪಾಸ್ಸಾಗಿದ್ದಾಳೆ. ನಡೆದ ಘಟನೆಯನ್ನು ತಂದೆಗೆ ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಇನ್ನು ಈ ರೀತಿಯ ಯಾವುದೇ ಕೆಲಸಕ್ಕೆ ಇಳಿಯಬಾರದು. ಖುಷಿಯಾಗಿರು ಎಂದು ತಂದೆ ಆಕೆಯನ್ನು ಸಮಾಧಾನ ಪಡಿಸಿದ್ದಾರೆ. ಅಲ್ಲಿಗೆ ಎಲ್ಲವೂ ತಿಳಿಗೊಂಡಿದೆ. ಆದರೆ ಶಾಪಿಂಗ್ ಮಾಲ್ ಸಿಬ್ಬಂದಿಗಳು ಈ ಘಟನೆಯನ್ನು ಮಾತ್ರ ಇಲ್ಲಿಗೆ ಬಿಡಲಿಲ್ಲ. ಸಿಸಿಟಿವಿ ವಿಡಿಯೋಗಳನ್ನು ಪಡೆದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಈ ಯುವತಿಗೂ ವಿಡಿಯೋ ಪೋಸ್ಟ್ ಆಗಿರುವ ಮಾಹಿತಿ ಸಿಕ್ಕಿದೆ. ಹಲವರು ಕರೆ ಮಾಡಿ ಅವಮಾನ ಮಾಡಿದ್ದಾರೆ. ಇದರಿಂದ ಮನನೊಂದ ಯುವತಿ ಜೀವನವನ್ನೇ ಅಂತ್ಯಗೊಳಿಸಿದ್ದಾಳೆ. ಪಶ್ಚಿಮ ಬಂಗಳಾದ ಆಲಿಪುರ್ದೌರ್ ಜಿಲ್ಲೆಯಲ್ಲಿ ನಡೆದಿದೆ.
ಜೈಗೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸುಬಾಸ್ ಪಲ್ಲಿ ಗ್ರಾಮದ 21ರ ಹರೆಯದ ಯುವತಿ ತನ್ನ ಅಕ್ಕನೊಂದಿಗೆ ಶಾಪಿಂಗ್ ಮಾಲ್‌ಗೆ ತೆರಳಿದಾಗ ಈ ಘಟನೆ ನಡೆದಿದೆ. ವೈರಲ್ ವಿಡಿಯೋದಿಂದ ಅಪಮಾನ ತಾಳಲಾರದೆ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಾಪಿಂಗ್ ಮಾಲ್ ಸಿಬ್ಬಂದಿಗಳ ವಿಚಾರಣೆಗೂ ಮುಂದಾಗಿದ್ದಾರೆ.
ನಗುವ ಸದ್ದಿನಲ್ಲೇ ಹೃದಯ ಒಡೆದೆಯಾ...' ಮೋಸ ಮಾಡಿದ ಗರ್ಲ್‌ಫ್ರೆಂಡ್ ಹೆಸರು ಹೇಳದೆ ಉಸಿರುಬಿಟ್ಟ ಹುಡುಗ!
ಸೆಪ್ಟೆಂಬರ್ 29 ರಂದು ಯುವತಿ ಶಾಪಿಂಗ್ ಮಾಲ್ ತೆರಳಿ ಚಾಕೋಲೆಟ್ ಕದ್ದಿದ್ದಳು. ಈ ವಿಡಿಯೋ ವೈರಲ್ ಮಾಡಲಾಗಿದೆ. ಯುವತಿ ತನ್ನ ತಪ್ಪಿಗೆ ಕ್ಷಮೆ ಕೇಳಿದ್ದಾಳೆ. ಚಾಕೋಲೇಟ್ ಹಣವನ್ನೂ ನೀಡಿದ್ದಾಳೆ. ಆದರೆ ಕಾಲೇಜು ಯುವತಿ ಅನ್ನೋದನ್ನು ನೋಡದೆ ಶಾಪಿಂಗ್ ಮಾಲ್ ಸಿಬ್ಬಂದಿಗಳು ವಿಡಿಯೋ ವೈರಲ್ ಮಾಡಿದ್ದಾರೆ. ಶಾಪಿಂಗ್ ಮಾಲ್ ಸಿಬ್ಬಂದಿಗಳು ಪೊಲೀಸ್ ದೂರು ನೀಡಿದ್ದರೂ ಯುವತಿ ಈ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದ ಶಾಪಿಂಗ್ ಮಾಲ್ ಸಿಬ್ಬಂಧಿಗಳಿಗೆ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮಗಳನ್ನು ಅಮಾನಿಸಲಾಗಿದೆ. ಇದರಿಂದ ಯುವತಿ ತೀವ್ರನೊಂದಿದ್ದಾಳೆ. ಮೊದಲೇ ತಾನು ಮಾಡಿದ ತಪ್ಪಿನಿಂದ ನೊಂದಿದ್ದಳು. ಈ ಕುರಿತು ತನ್ನ ಬಳಿ ಹೇಳಿಕೊಂಡಿದ್ದಳು. ನಾನು ಸಮಾಧಾನಪಡಿಸಿದ್ದೆ. ಎಲ್ಲವೂ ಶಾಂತವಾಯಿತು ಅನ್ನುವಷ್ಟರಲ್ಲೇ ವೈರಲ್ ವಿಡಿಯೋ ನಮ್ಮ ಜೀವನವನ್ನು ಕತ್ತಲಿಗೆ ತಳ್ಳಿದೆ ಎಂದು ಯುವತಿ ತಂದೆ ಕಣ್ಣೀರು ಹಾಕಿದ್ದಾರೆ.
'ನಿನ್ ಹೆಂಡ್ತಿಗೆ ಪ್ರೆಗ್ನೆಂಟ್ ಮಾಡಿದ್ದು ನಾನು..': ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ ಈ ಕ್ರೈಮ್ ಸ್ಟೋರಿ
ಗ್ರಾಮಸ್ಥರು ಶಾಪಿಂಗ್ ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶಾಪಿಂಗ್ ಮಾಲ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ