'ನಿನ್‌ ಹೆಂಡ್ತಿಗೆ ಪ್ರೆಗ್ನೆಂಟ್‌ ಮಾಡಿದ್ದು ನಾನು..': ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ ಈ ಕ್ರೈಮ್‌ ಸ್ಟೋರಿ

By Suvarna News  |  First Published Nov 1, 2022, 5:38 PM IST

Uttar Prdesh Crime News: ಅತ್ಯಾಚಾರ ಆರೋಪಿಯನ್ನು ಸೂರಜ್‌ ಎಂದು ಗುರುತಿಸಲಾಗಿದ್ದು, ಈತ ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದ.  


ಕಾನ್ಪುರ್‌ (ನ. 01): ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತ್ಯಾಚಾರ ಆರೋಪಿ ಯುವತಿಯೊಬ್ಬಳ ಜೀವನದಲ್ಲಿ ಚೆಲ್ಲಾಟವಾಡಿದ್ದು ಈ ಕ್ರೈಮ್‌ ಸ್ಟೋರಿ ಯಾವ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಅತ್ಯಾಚಾರ ಆರೋಪಿಯನ್ನು  ಸೂರಜ್‌ ಎಂದು ಗುರುತಿಸಲಾಗಿದ್ದು, ಈತ ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದ. ಯುವತಿ ಪೋಷಕರೊಂದಿಗೆ ದೂರು ದಾಖಲಿಸಲು ಮುಂದಾದಾಗ ಆರೋಪಿ ಸೂರಜ್‌ ಯುವತಿಯನ್ನು ಮದುವೆಯಾಗುವುದಾಗಿ ಆಕೆಯ ತಾಯಿಗೆ ಭರವಸೆ ನೀಡಿದ್ದ. ಆದರೆ ಎರಡು ತಿಂಗಳ ಬಳಿಕ ಮದುವೆಗೆ ನಿರಾಕರಿಸಿದ್ದ. ಅಲ್ಲಿಯವರೆಗೆ ಸಂತ್ರಸ್ತ ಯುವತಿ ಗರ್ಭಿಣಿಯಾಗಿದ್ದಳು. ಬಳಿಕ ತಂದೆ ಹೇಗೋ ಬೇರೆ ಹುಡುಗನೊಂದಿಗೆ ಯುವತಿಯ ಮದುವೆ ಮಾಡಿಸಿದ್ದಾರೆ.  

ಮದುವೆಯಾದ ಬಳಿಕ ಯುವತಿ ತವರು ಮನೆಗೆ ಬಂದಾಗ ಆರೋಪಿ ಸೂರಜ್ ಮತ್ತೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿ ಪ್ರತಿಭಟಿಸಿದಾಗ ಆರೋಪಿ ಸೂರಜ್, "ನಿನ್ನ ಹೆಂಡತಿಯನ್ನು ಗರ್ಭಿಣಿಯನ್ನಾಗಿ ಮಾಡಿದ್ದೇನೆ, ಆಕೆಯ ಹೊಟ್ಟೆಯಲ್ಲಿ ನನ್ನ ಗುರುತು ಇದೆ" ಎಂದು ಯುವತಿಯ ಪತಿಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಪತಿ ಅದೇ ದಿನ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ. ಕೆಲವು ತಿಂಗಳ ನಂತರ ಸಂತ್ರಸ್ತ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

Tap to resize

Latest Videos

ಯುವತಿ ಮೇಲೆ ಮತ್ತೆ ರೇಪ್:‌ ಸೆಪ್ಟೆಂಬರ್ 25 ರಂದು ಸೂರಜ್ ಮತ್ತೆ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವತಿ ಎಫ್‌ಐಆರ್‌ ದಾಖಲಿಸಲು ಹೋದಾಗ ಸೂರಜ್ ಒತ್ತಡಕ್ಕೆ ಮಣಿದು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಲ್ಲ ಎನ್ನಲಾಗಿದೆ. ಅಕ್ಟೋಬರ್ 8ರಂದು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸಂತ್ರಸ್ತ ಯುವತಿಯ ಪರವಾಗಿ ಶಿವರಾಜಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು, ಆದರೆ ಇಲ್ಲಿಯವರೆಗೆ ಆರೋಪಿ ಸೂರಜ್‌ನನ್ನು ಪೊಲೀಸರು ಬಂಧಿಸಿಲ್ಲ. 

ಇದನ್ನೂ ಓದಿ: 8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ!

ಡಿಎನ್‌ಎ ವರದಿಗೂ ಮುನ್ನ ಕೊಲ್ಲುವೆ: ಯುವತಿಯ ಮೊದಲ ಮಗು ಮತ್ತು ಸೂರಜ್‌ನ  ಡಿಎನ್‌ಎ ಪರೀಕ್ಷೆಯನ್ನು ಮಾಡುವುದದಾಗಿ ಪೊಲೀಸರು ತಿಳಿಸಿದ್ದಾರೆ.  ಡಿಎನ್‌ಎ ವರದಿ ಬಂದ ನಂತರವೇ ಆರೋಪಿ ಸೂರಜ್‌ನನ್ನು ಬಂಧಿಸಲಾಗುವುದು ಎಂದು ಕಾನ್ಪುರ ಪೊಲೀಸರು ಹೇಳಿದ್ದಾರೆ. ಇದಕ್ಕಾಗಿ ಡಿಎನ್‌ಎ ಟೆಸ್ಟ್ ಮಾಡಲು ಅನುಮತಿ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.  ಇತ್ತ ಡಿಎನ್‌ಎ ವರದಿ ಬರುವ ಮುನ್ನವೇ  ಬಾಲಕಿ ಮತ್ತು ನಿನ್ನನ್ನು ಸಾಯಿಸುವುದಾಗಿ ಸೂರಜ್ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ಯವತಿ ಆರೋಪಿಸಿದ್ದಾರೆ.

ಇನ್ನು ಸಂತ್ರಸ್ತೆಯ ಪರಿಚಯಸ್ಥರು, "ಆರೋಪಿ ಸೂರಜ್ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ಈಗ ಪೊಲೀಸರು ಮೊದಲು ಡಿಎನ್ಎ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ, ಇದಕ್ಕಾಗಿ ಅವರು ನ್ಯಾಯಾಲಯದ ಅನುಮತಿ ಕೇಳಿದ್ದಾರೆ, ಆದರೆ ಅಷ್ಟರೊಳಗೆ ಯವತಿಗೆ ಏನಾದರೂ ಆದರೆ ಯಾರು ಹೊಣೆ?" ಎಂದು ಅಳಲು ತೋಡಿಕೊಂಡಿದ್ದಾರೆ. 

click me!