ಹೆಣ್ಣುಮಕ್ಕಳ ಬಟ್ಟೆ ನೋಡಿ ಪ್ರಚೋದನೆಯಾಗತ್ತೆ ಎನ್ನುವವರಿಗೆ ಇಟ್ಟಿರೋ ಸಂತ್ರಸ್ತೆಯರ ಬಟ್ಟೆಗಳಿವು!

Published : Apr 11, 2025, 10:16 PM ISTUpdated : Apr 12, 2025, 08:44 AM IST
ಹೆಣ್ಣುಮಕ್ಕಳ ಬಟ್ಟೆ ನೋಡಿ ಪ್ರಚೋದನೆಯಾಗತ್ತೆ ಎನ್ನುವವರಿಗೆ ಇಟ್ಟಿರೋ ಸಂತ್ರಸ್ತೆಯರ ಬಟ್ಟೆಗಳಿವು!

ಸಾರಾಂಶ

ಹೆಣ್ಣುಮಕ್ಕಳ ಮೇಲಿನ ಅತ್ಯಾ*ರಕ್ಕೆ ಬಟ್ಟೆ ಕಾರಣವೆಂಬ ವಾದವಿದೆ. ನಟಿಯರು ಮತ್ತು ಯುವತಿಯರ ದೇಹ ಪ್ರದರ್ಶನವು ಕಾಮುಕರನ್ನು ಪ್ರಚೋದಿಸುತ್ತದೆ ಎನ್ನಲಾಗುತ್ತದೆ. ಆದರೆ, ಅತ್ಯಾಚಾರಕ್ಕೊಳಗಾದವರ ಬಟ್ಟೆ ಪ್ರದರ್ಶನವು, ಬಟ್ಟೆಗೂ ಈ ಕೃತ್ಯಕ್ಕೂ ಸಂಬಂಧವಿಲ್ಲ, ಇದು ಕಾಮುಕರ ಕ್ರೂರ ಮನಸ್ಥಿತಿಯ ಫಲಿತಾಂಶ ಎಂದು ತೋರಿಸುತ್ತದೆ. ಚಿಕ್ಕ ಮಕ್ಕಳ ಮೇಲಿನ ದೌರ್ಜನ್ಯವು ವಯಸ್ಸು ಮುಖ್ಯವಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಆದರೂ, ಕೆಲವರು ಅಸಭ್ಯ ಬಟ್ಟೆಗಳೇ ಅತ್ಯಾ*ರಕ್ಕೆ ಕಾರಣ ಎನ್ನುತ್ತಾರೆ.

ಹಸಿಗೂಸುಗಳಿಂದ ಹಿಡಿದು ವೃದ್ಧೆಯರ ಮೇಲೆ ದಿನನಿತ್ಯವೂ ಅತ್ಯಾ*ರ ನಡೆಯುತ್ತಲೇ ಇದೆ. ಆದರೆ ಹೆಚ್ಚಿನವರು ಹೇಳುವುದು ಇದಕ್ಕೆ ಕಾರಣ, ಹೆಣ್ಣುಮಕ್ಕಳ ಬಟ್ಟೆ ಎನ್ನುವುದು. ಇದರ ಪರ-ವಿರೋಧದ ನಿಲುವು ವ್ಯಕ್ತವಾಗುತ್ತಲೇ ಇದೆ. ಇಂದಿನ ಹೆಣ್ಣುಮಕ್ಕಳು ಫ್ಯಾಷನ್​ ಎನ್ನುವ ಹೆಸರಿನಲ್ಲಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ಇದ್ದಾರೆ. ಅದರಲ್ಲಿಯೂ ಇಂದಿನ ನಟಿಯರಿಗೆ ಇವರಿಗೆ ಪ್ರೇರಕರು. ಹಿಂದೆ ಕೆಲವು ನಟಿಯರು ತುಂಡುಡುಗೆ ತೊಟ್ಟು ಕುಣಿಯುವುದಕ್ಕಾಗಿಯೇ  ಮೀಸಲು ಇದ್ದರು. ಅಂಥವರು ಕೂಡ ಒಳಗಡೆ ಮೈಬಣ್ಣದ ಬಟ್ಟೆ ಧರಿಸುತ್ತಿದ್ದರು. ಆದರೆ ಇಂದು ಪೈಪೋಟಿಗೆ ಬಿದ್ದವರಂತೆ ನಟಿಮಣಿಗಳು ಇಡೀ ದೇಹವನ್ನು ಪ್ರದರ್ಶನ ಮಾಡುತ್ತಲೇ ಇದ್ದಾರೆ. ಸಾಲದು ಎನ್ನುವುದಕ್ಕೆ ಪ್ಲಾಸ್ಟಿಕ್​ ಸರ್ಜರಿಯ ಮೊರೆ ಹೋಗುತ್ತಿದ್ದಾರೆ.

ಇದು ನಟಿಯರ ಮಾತಾದರೆ, ಸಾಮಾನ್ಯ ಯುವತಿಯರೂ ಕಡಿಮೆಯೇನಿಲ್ಲ. ಕೆಲವು ಪ್ರತಿಷ್ಠಿತ ಕಾಲೇಜುಗಳಿಗೆ ಹೋಗಿ ನೋಡಿದರೆ ತಿಳಿಯುತ್ತದೆ, ಯಾವ ಪರಿಯಲ್ಲಿ ಇಂದು ಬಟ್ಟೆಗಳು ಬದಲಾಗಿವೆ ಎನ್ನುವುದು. ಅಶ್ಲೀಲ ಎನ್ನುವ ಪದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗುವ ಯುವತಿಯರೂ ಧಾರಾಳವಾಗಿ ಸಿಗುತ್ತಾರೆ. ಇವರನ್ನು ನೋಡುವ ಕಾಮುಕರು ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಸಿಕ್ಕ ಸಿಕ್ಕ ಯುವತಿಯರ ಮೇಲೆ ಅತ್ಯಾ*ರ ಮಾಡುತ್ತಾರೆ ಎನ್ನುವ ಮಾತು ಬಹಳ ಹಿಂದಿನಿಂದಲೂ ಇದೆ. ಆದರೆ  ಕೆಲವರು ಅರೆಬರೆ ಡ್ರೆಸ್​ ಹಾಕಿಕೊಂಡಿರುವ ಕಾರಣ ಅಂಥವರ ಮೇಲೆ ಇಂಥ ಕೃತ್ಯಗಳು ನಡೆಯುತ್ತಿವೆ ಎನ್ನುವುದು ಉಂಟು.

ಹಿಜಾಬ್​ಗಾಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ: ಬಚಾವ್​ ಮಾಡಿದ್ರೂ ಅಗ್ನಿಗಾಹುತಿಯಾದಳು!

ಆದರೆ   ಮನುಷ್ಯ ರೂಪದ ಈ ರಾಕ್ಷಸರು ಬಟ್ಟೆಯನ್ನು ನೋಡಿ ಇಂಥ ಹೀನ ಕೃತ್ಯಕ್ಕೆ ಇಳಿಯುವುದಿಲ್ಲ, ಬದಲಿಗೆ ಅವರಿಗೆ ಹೆಣ್ಣು ಜೀವ ಸಿಕ್ಕರೆ ಸಾಕು ಎನ್ನುವುದನ್ನು ತೋರಿಸುವ ಸಲುವಾಗಿ ಬಟ್ಟೆಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಅದೀಗ ವೈರಲ್​ ಆಗಿದೆ. ಅತ್ಯಾ*ರ ಸಂತ್ರಸ್ತೆಯರು ಆ ಘಟನೆ ನಡೆದಾಗ ಧರಿಸುವ ಬಟ್ಟೆಗಳು ಇವಾಗಿದೆ. ಇದರಲ್ಲಿ ಯಾವುದೇ ಪ್ರಚೋದನಕಾರಿಯಾಗಿರಲಿಲ್ಲ. ಅತ್ಯಾ*ರಿಗಳಿಗೆ ಬಟ್ಟೆ ನೋಡಿ ಉದ್ರೇಕ ಆಗುವುದಿಲ್ಲ. ಬಟ್ಟೆಗೂ ಇಂಥ ಹೀನ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಿರೂಪಿಸುವ ಸಲುವಾಗಿ ಇಂಥದ್ದೊಂದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಇದರಲ್ಲಿ ಚಿಕ್ಕ ಮಗುವಿನ ಮೇಲೂ ಕಾಮುಕರು ದೌರ್ಜನ್ಯ ನಡೆಸಿರುವುದು ತಿಳಿಯುತ್ತದೆ. ಚಿಕ್ಕ ಮಕ್ಕಳ ಬಟ್ಟೆಯೂ ಇದರಲ್ಲಿ ಇದೆ. ಅಂದರೆ ಇಂಥ ಕೃತ್ಯ ಎಸಗುವವರಿಗೆ ವಯಸ್ಸು, ಬಟ್ಟೆ ಯಾವುದೂ ಕಾರಣವಾಗುವುದಿಲ್ಲ. ಬದಲಿಗೆ ಅವರ ಕ್ರೂರ ಮನಸ್ಥಿತಿಯೇ ಕಾರಣ ಎಂದು ತೋರಿಸಲು ಇದನ್ನು ಇಡಲಾಗಿದೆ. ಆದರೆ ಇದನ್ನು ಒಪ್ಪದ ಮತ್ತೊಂದು ವರ್ಗವೇ ಇದೆ. ಈ ಬಟ್ಟೆ ಸಂತ್ರಸ್ತೆಯರು ಧರಿಸಿದ್ದಿರಬಹುದು. ಆದರೆ ಆ ಕಾಮುಕರಲ್ಲಿ ಉದ್ರೇಕ ತರಿಸುತ್ತಿರುವುದು ನಟಿಯರು ಹಾಗೂ ಕೆಲವು ಯುವತಿಯರು ಧರಿಸುವ ಅಸಭ್ಯ, ಅಶ್ಲೀತೆಯನ್ನು ಮೀರಿದ ಬಟ್ಟೆಗಳು. ಅವರು ಸಿಗದ ಕಾರಣ, ಅಮಾಯಕ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಬಲಿಯಾಗುವ ಹೆಣ್ಣುಮಕ್ಕಳು ಸಭ್ಯ ಬಟ್ಟೆ ಧರಿಸಿದ್ದರೂ ಅವರು ಕಾಮುಕರ ಕೈಗೆ ಸಿಲುಕಿ ನಲುಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.   

ವಾಟ್ಸಾಪ್‌ನಲ್ಲಿ ಬಂದ ಫೋಟೋ ಓಪನ್‌ ಮಾಡಿ 2 ಲಕ್ಷ ಕಳೆದುಕೊಂಡ ವ್ಯಕ್ತಿ: ಏನಿದು ವಂಚನೆ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ