ಮಧ್ಯರಾತ್ರಿ ರಾಗಿಣಿ-ಸಂಜನಾ ಕಿತ್ತಾಟ.. ಸಿಬ್ಬಂದಿ ಸುಸ್ತೋ ಸುಸ್ತು!

By Suvarna News  |  First Published Oct 9, 2020, 7:43 PM IST

ಜೈಲಿನ ಒಳಗಡೆ ಸಂಜನಾ-ರಾಗಿಣಿ ಮತ್ತೆ ಕಿತ್ತಾಟ/ ಹುಟ್ಟು ಹಬ್ಬಕ್ಕೆ ವಿಶ್ ಮಾಡುವವರು ಸಹ ಇಲ್ಲ/ ಇಬ್ಬರನ್ನು ಬೇರೆ ಬೇರೆ ಕೊಠಡಿಗೆ ಶಿಫ್ಟ್ ಮಾಡಿದ ಸಿಬ್ಬಂದಿ/ ಬಟ್ಟೆ ತಂದ ವಿಚಾರದಲ್ಲಿ ಗಲಾಟೆ


ಬೆಂಗಳೂರು(ಅ. 09) ಹುಟ್ಟುಹಬ್ಬದ ಹಿಂದಿನ ದಿನವೇ ಜೈಲಿನಲ್ಲಿರುವ ಸಂಜನಾಗೆ ಶಾಕ್ ಸಿಕ್ಕಿದೆ. ಇಬ್ಬರು ಸಾಮಾನ್ಯ ಕೈದಿಗಳು  ಸಂಜನಾ ಜತೆ ಕಿರಿಕ್ ಮಾಡಿದ್ದಾರೆ. ಇತ್ತ ರಾಗಿಣಿಗೂ ಕೂಡ ಅದೇ ಪರಿಸ್ಥಿತಿಯಾಗಿದೆ.

"

Tap to resize

Latest Videos

ಬಟ್ಟೆ ತಂದ ವಿಚಾರದಲ್ಲಿ ಸಂಜನಾ ರಾಗಿಣಿ ಮೇಲೆ ರಾಂಗ್ ಆಗಿದ್ದರು ರಾಗಿಣಿ ಹಾಗೂ ಸಂಜನಾ ಕಳೆದ ರಾತ್ರಿ ಅವಾಚ್ಯಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ ಸಿಬ್ಬಂದಿ ಎದುರೆ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಇವರಿಬ್ಬರ ಕಿತ್ತಾಟವನ್ನು ಸಹಿಸಿ ಸುಸ್ತಾದ ಸಿಬ್ಬಂದಿ  ರಾಗಿಣಿ ಹಾಗೂ ಸಂಜನಾಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಿದ್ದಾರೆ.

ಬಡ್ಡಿ ಬಂಗಾರಮ್ಮ ಸಂಜನಾ ಆಸ್ತಿ ವಿವರ

ಇಬ್ಬರನ್ನು ಬೇರೆ ಬೇರೆ ಕೊಠಡಿಗೆ ವರ್ಗಾವಣೆ ಮಾಡಿದ ಜೈಲರ್ ಪ್ರತ್ಯೇಕವಾಗಿ ಇರುವ ಕೊಠಡಿಗೆ ಇಬ್ಬರು ಸಿಬ್ಬಂದಿ ನೇಮಕ ಮಾಡಿದ್ದಾರೆ ಒಬ್ಬರು ಸಜಾ ಕೈದಿ ಇನ್ನೊಬ್ಬರು ವಿಚಾರಣಾಧೀನ ಕೈದಿ ಇರುವ ಕೊಠಡಿಗೆ ಕಳುಹಿಸಲಾಗಿದೆ.

ಕಳೆದ ರಾತ್ರಿ 12 ಮೂವತ್ತಕ್ಕೆ ಒಂದೇ ಕೊಠಡಿಯಲ್ಲಿ ಕಿತ್ತಾಟ ನಡೆದಿತ್ತು. ಇವರ ಕಿತ್ತಾಟಕ್ಕೆ ಬ್ರೇಕ್ ಹಾಕಲು ಕ್ರಮ ತೆಗೆದುಕೊಳ್ಳಲಾಯಿತು ಇಂದಿನಿಂದ ಇಬ್ಬರಿಗೂ ಪ್ರತ್ಯೇಕ ಕೊಠಡಿ ಮಾಡಲಾಗಿದೆ. ಸಂಜನಾಗೆ ಹುಟ್ಟು ಹಬ್ಬಕ್ಕೆ ವಿಶ್ ಮಾಡುವವರು ಕೂಡ ಇಲ್ಲದ ಸ್ಥಿತಿ ಡ್ರಗ್ಸ್ ಕಾರಣಕ್ಕೆ ನಿರ್ಮಾಣವಾಗಿದೆ. 

click me!