ಅಕ್ರಮ ಮದ್ಯ ಮಾರಾಟದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು; ಮದ್ಯದ ಪಾಕೆಟ್‌ಗಳಿಗೆ ಬೆಂಕಿ ಇಟ್ಟು ಆಕ್ರೋಶ!

By Ravi Janekal  |  First Published Jul 7, 2024, 10:02 PM IST

ಅಬಕಾರಿ ಇಲಾಖೆ, ಬನ್ನೇರುಘಟ್ಟ ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ಅಕ್ರಮ ಮದ್ಯ ಮಾರಾಟದ ವಿರುದ್ಧ ಗ್ರಾಮಸ್ಥರೇ ಸಿಡಿದೆದ್ದ ಘಟನೆ ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ನಡೆದಿದೆ.


ಆನೇಕಲ್ (ಜು.7): ಅಬಕಾರಿ ಇಲಾಖೆ, ಬನ್ನೇರುಘಟ್ಟ ಪೊಲೀಸರ ನಿರ್ಲಕ್ಷ್ಯಕ್ಕೆ ಬೇಸತ್ತು ಅಕ್ರಮ ಮದ್ಯ ಮಾರಾಟದ ವಿರುದ್ಧ ಗ್ರಾಮಸ್ಥರೇ ಸಿಡಿದೆದ್ದ ಘಟನೆ ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ನಡೆದಿದೆ.

ಬೈಕ್‌ನಲ್ಲಿ  ಮನೆ ಮನೆಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ. ಹೊಮ್ಮದೇವನಹಳ್ಳಿ(Hommadevanahalli) ಬಳಿಯಿರುವ ಸುಧಾ ವೈನ್ಸ್ ಅಂಡ್ ಬಾರ್‌(Sudha Wines and Bar)ನಿಂದ ಗ್ರಾಮದ ಅಂಗಡಿ, ಕೆಲ ಮನೆಗಳಿಗೆ ನೇರವಾಗಿ ಮದ್ಯ ಸರಬರಾಜು ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಗ್ರಾಮದ ಅಂಗಡಿ, ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಆರೋಪ ಅಕ್ರಮ ಮದ್ಯ ಮಾರಾಟದ ವಿರುದ್ಧ ಕೊನೆಗೂ ಸಿಡಿದೆದ್ದಿರುವ ಗ್ರಾಮಸ್ಥರು.

Tap to resize

Latest Videos

undefined

'ಹುಡುಗ-ಹುಡುಗಿಯರ ಸರ್ವಿಸ್ ಬೇಕಾ?' ಎಂದು ಮೆಸೇಜ್ ಕರೆ ಮಾಡುತ್ತಿದ್ದ ಆರೋಪಿ ಬಂಧನ

ಮದ್ಯಪಾನಕ್ಕೆ ಗ್ರಾಮದ ಯುವಕರು ಅಪ್ರಾಪ್ತರು ಬಲಿಯಾಗುತ್ತಿದ್ದಾರೆ. ಅಕ್ರಮವಾಗಿ ಹಾಡಹಗಲೇ ನಡೆಯುತ್ತಿದ್ದರೂ ನಿರ್ಲಕ್ಷ್ಯವಹಿಸಿರುವ ಅಬಕಾರಿ ಇಲಾಖೆ, ಬನ್ನೇರುಘಟ್ಟ ಪೊಲೀಸರು(Bannerughatta police) ನಿರ್ಲಕ್ಷ್ಯವಹಿಸಿದ್ದಾರೆ. ಹೀಗಾಗಿ ಸುಧಾ ವೈನ್ಸ್ ಬಾರ್ ನಿಂದ ಗ್ರಾಮದ ಸಣ್ಣಪುಟ್ಟ ಅಂಗಡಿ, ಮನೆಗಳಲ್ಲೂ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಮನವಿ ಮಾಡಿದರೂ ತಲೆಕೆಡಿಸಿಕೊಳ್ಳದ ಪೊಲೀಸರು. ಇಲ್ಲಿಯವರೆಗೆ ಯಾವುದೇ ರೀತಿಯ ಕಟ್ಟುನಿಟ್ಟಿ ಕ್ರಮವಾಗಿಲ್ಲ ಎಂದು ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ; ಕಂಡ ಕ್ಷಣವೇ ಅಟ್ಟಾಡಿಸಿ ಕೊಚ್ಚಿ ಕೊಂದ ಗ್ರಾಮಸ್ಥರು!

ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಹಿಡಿದ ಗ್ರಾಮಸ್ಥರು. ಪೊಲೀಸರು ಸ್ಥಳಕ್ಕೆ ಬರುವವರೆಗೆ ಬಿಡುವುದಿಲ್ಲ ಎಂದು ಪಟ್ಟು. ಕೊನೆಗೂ ಪೊಲೀಸರು ಅಧಿಕಾರಿಗಳು ಸ್ಥಳಕ್ಕೆ ಬಾರದಿರುವ ಹಿನ್ನೆಲೆ ಊರಿನ ಮಧ್ಯೆದಲ್ಲೇ ಮದ್ಯದ ಪಾಕೆಟ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟ ಗ್ರಾಮಸ್ಥರು. ಮದ್ಯದ ಪಾಕೆಟ್‌ಗಳಿಗೆ ಬೆಂಕಿ ಇಟ್ಟು ಅಬಕಾರಿ ಇಲಾಖೆ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು. ಅಕ್ರಮ ಮದ್ಯ ಮಾರಾಟದಲ್ಲಿ ಅಬಕಾರಿ, ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪವಿದೆ ಇದೇ ಕಾರಣಕ್ಕೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

click me!