
ಬೆಂಗಳೂರು (ಜು.7) ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕಾ ಎಂದು ಮೆಸೇಜ್, ಕರೆ ಮಾಡಿ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಪೂರ್ವ ವಿಭಾಗದ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆನಂದ್ ಶರ್ಮಾ, ಬಂಧಿತ ಆರೋಪಿ. ಯುವಕ ಯುವತಿಯರ ನಂಬರ್ ಸಂಗ್ರಹಿಸಿ ಬೇರೆ ಬೇರೆ ಸಿಮ್ ಕಾರ್ಡ್ ಬಳಸಿ ಹುಡುಗಿಯರ ಸರ್ವಿಸ್ ಬೇಕಾ ಎಂದು ಕರೆ ಮಾಡುತ್ತಿದ್ದ ಆರೋಪಿ. ಹುಡುಗಿಯರಿಗೂ ಕರೆ ಮಾಡಿ ಹುಡುಗರ ಸರ್ವಿಸ್ ಬೇಕಾ ಎಂದು ಕೇಳುತ್ತಿದ್ದ ಆಸಾಮಿ. ಒಬ್ಬೊಬ್ಬರಿಗೂ ಒಂದೊಂದು ನಂಬರ್‌ನಿಂದ ಕರೆ, ಮಸೇಜ್ ಮಾಡುತ್ತಿದ್ದ ಆರೋಪಿ.
ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ; ಕಂಡ ಕ್ಷಣವೇ ಅಟ್ಟಾಡಿಸಿ ಕೊಚ್ಚಿ ಕೊಂದ ಗ್ರಾಮಸ್ಥರು!
ಸುಭಿ ಎಂಬಾಕೆಗೂ 'ಸರ್ವಿಸ್ ಬೇಕಾ?' ಎಂದು ಕರೆ ಮಾಡಿದ್ದ ಆರೋಪಿ. ಬೇರೆ ಬೇರೆ ನಂಬರ್‌ಗಳಿಂದ ಪದೇಪದೆ ಕರೆ ಮಾಡಿ ಆರೋಪಿಯಿಂದ ತೊಂದರೆ. ಇದರಿಂದ ಬೇಸತ್ತು ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ. ದೂರು ದಾಖಲಿಸಿಕೊಂಡ ಪೂರ್ವ ವಿಭಾಗ ಸೆನ್ ಪೊಲೀಸರು. ಆರೋಪಿ ಬಳಸಿದ ಮೊಬೈಲ್ ನಂಬರ್, ಲೋಕೇಶನ್ ಟ್ರ್ಯಾಕ್ ಮಾಡಿ ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ ಆರೋಪಿಯನ್ನ ಬಂಧಿಸಿದ ಸೆನ್ ಪೊಲೀಸರು.
ಕೃತ್ಯಕ್ಕೆ ಬಳಸುತ್ತಿದ್ದ ಆರೋಪಿಯ ಮೊಬೈಲ್, ಹಲವಾರು ಸಿಮ್‌ಗಳು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದೇ ರೀತಿ ಯಾರಾರಿಗೆ ಕರೆ ಮಾಡಿ್ದ್ದಾನೆ, ಇದರ ಹಿಂದೆ ಜಾಲವೇ ಕೆಲಸ ಮಾಡ್ತಿದೆಯಾ? ಎಂಬ ಬಗ್ಗೆ ತನಿಖೆ ಮಾಡಲಿರುವ ಪೊಲೀಸರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ