
ಹಾವೇರಿ: ಚಿತ್ರದುರ್ಗ ಮೂಲದ ಡ್ಯಾನ್ಸ್ ಮಾಸ್ಟರ್ ಒಬ್ಬರ ಕತ್ತು ಸೀಳಿ ಕೊ*ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಮೊಟೆಬೆನ್ನೂರು ಎಂಬಲ್ಲಿ ನಡೆದಿದೆ. ಲಿಂಗೇಶ್ ಕೊ*ಲೆಯಾದ ಡ್ಯಾನ್ಸ್ ಮಾಸ್ಟರ್. ಲಿಂಗೇಶ್ ಮೃತದೇಹ ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರ ಫ್ಲೈಓವರ್ ಮೇಲೆ ಪತ್ತೆಯಾಗಿದೆ. ಮೃತ ಲಿಂಗೇಶ್ ಚಿತ್ರದುರ್ಗದಲ್ಲಿ ಡ್ಯಾನ್ಸ್ ಸ್ಕೂಲ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದ ಲಿಂಗೇಶ್ ಮನೆಗೆ ಶವವಾಗಗಿ ಬಂದಿದ್ದಾರೆ.
ಭಾನುವಾರ ರಾತ್ರಿ ಲಾಂಗ್ ರೈಡ್ ಹೋಗುತ್ತಿರೋದಾಗಿ ಲಿಂಗೇಶ್ ಮನೆಯಿಂದ ಹೊರ ಹೋಗಿದ್ದರು. ತಾಯಿ ರಾತ್ರಿ ಊಟಕ್ಕೆ ಕರೆಯಲು ಫೋನ್ ಮಾಡಿದ್ದಾಗ ಲಿಂಗೇಶ್, ಬರ್ತಿನಮ್ಮ ಎಂದು ಸಹ ಹೇಳಿದ್ದರು. ಆದರೆ ಈ ವೇಳೆಗಾಗಲೇ ಲಿಂಗೇಶ್ ಹುಬ್ಬಳ್ಳಿ ತಲುಪಿದ್ದರು ಎನ್ನಲಾಗಿದೆ. ಇದೀಗ ಬೆಳಗ್ಗೆ ಲಿಂಗೇಶ್ ಮೃತದೇಹ ಪತ್ತೆಯಾಗಿದೆ. ಲಿಂಗೇಶ್ ಹುಬ್ಬಳ್ಳಿಗೆ ಬಂದ ಮೇಲೆ ಏನಾಯ್ತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಮತ್ತೊಂದೆಡೆ ಲಿಂಗೇಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಕತ್ತು ಸೀಳಿ ಕೊ*ಲೆ ಮಾಡಿರುವ ಹಂತಕರು ಶವವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಿಟ್ಟು ಹೋಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಲಿಂಗೇಶ್ ಬಳಸುತ್ತಿದ್ದ ಡ್ಯೂಕ್ ಬೈಕ್, ಒಂದು ನೀರಿನ ಬಾಟೆಲ್, ಸಿಗರೇಟ್ ಪ್ಯಾಕ್ ಮತ್ತು ಸಣ್ಣದಾದ ಚಾಕು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಾವೇರಿ ಎಸ್‌ಪಿ ಯಶೋಧಾ ವಂಟಗೋಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿಂಗೇಶ್ ಶವ ಪತ್ತೆಯಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಲಿಂಗೇಶ್ ಒತ್ತಡದಲ್ಲಿರೋದು ನನ್ನ ಗಮನಕ್ಕೂ ಬಂದಿತ್ತು. ನನ್ನ ಮಕ್ಕಳು ಬೆಂಗಳೂರಿನಲ್ಲಿ ಓದುತ್ತಿದ್ದು, ಅವರನ್ನು ಭೇಟಿಯಾಗಲು ಹೋಗಿದ್ದಾಗಲೂ ನನಗೆ ಕಾಲ್ ಮಾಡಿದ್ದ. ಏನೋ ಒಂದು ರೀತಿಯಲ್ಲಿ ಭಯ ಆಗ್ತಿದೆ ಅಂತ ಸಹ ಹೇಳಿಕೊಂಡಿದ್ದನು. ನಾನು ಅವನೊಂದಿಗೆ ಸೇರಿಕೊಂಡು ಕೆಫೆ ಆರಂಭಿಸಿದ್ದೇವು. ಕೆಫೆಯಲ್ಲಿ ಕುಳಿತುಕೊ ಎಂದು ಹೇಳಿದ್ದೆ. ಬೆಂಗಳೂರಿನಿಂದ ಬಂದ್ಮೇಲೆ ಆತನನ್ನು ಕರೆಸಿಕೊಂಡು ಮಾತನಾಡಿದ್ದೆ. ಆದ್ರೆ ಅವನು ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಇದೀಗ ಅವನ ಕೊ*ಲೆಯಾಗಿರೋ ವಿಷಯ ಕೇಳಿ ಶಾಕ್ ಆಗಿದೆ ಎಂದು ಲಿಂಗೇಶ್ ಸ್ನೇಹಿತ ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾ ವಿರುದ್ಧ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಂದಾಯ ಜಾರಿ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಒಟ್ಟು 72 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.
‘ವೀಡ್ ಔಟ್’ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬೆಂಗಳೂರಿನ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಹೋಟೆಲ್ ಮತ್ತು ಮಧ್ಯಪ್ರದೇಶ ರಾಜ್ಯದ ಭೂಪಾಲ್ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ನಾಲ್ವರು ಪೆಡ್ಲರ್‌ಗಳು ಡಿಆರ್‌ಐ ಬಲೆಗೆ ಬಿದ್ದಿದ್ದಾರೆ. ಅಲ್ಲದೆ ಈ ಜಾಲದ ಮಾಸ್ಟರ್ ಮೈಂಡ್ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಬಂಧಿತರಿಂದ 72 ಕೋಟಿ ರು. ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಹಾಗೂ 1.04 ಕೋಟಿ ರು. ನಗದು ಜಪ್ತಿಯಾಗಿದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ಮದ್ವೆಯಾಗಿದ್ರೂ ಅಕ್ರಮ ಸಂಬಂಧ; ಬಾಯಿಗೆ ಸ್ಪೋಟಕ ತುರುಕಿ ಕೊಂದ ಪ್ರೇಮಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ