ನಟ ದರ್ಶನ್ ಕೊಲೆ ಆರೋಪದಲ್ಲಿ ಗೆಳತಿ ಪವಿತ್ರಾ ಗೌಡ ಹೆಸರು!

By Suvarna News  |  First Published Jun 11, 2024, 11:07 AM IST

ನಟ ದರ್ಶನ್ ಕೊಲೆ ಆರೋಪದಲ್ಲಿ ಬಂಧನವಾಗಿದ್ದು, ಈ ಕೊಲೆ ನಡೆದಿರುವುದು ಯಾಕೆ ಎಂಬ ಅಂಶ ಬಯಲಾಗಿದೆ. ಅದು ದರ್ಶನ್ ಗೆಳತಿ ಪವಿತ್ರಾ ಗೌಡ ವಿಚಾರದಲ್ಲಿ ಎಂಬುದು ಈಗ ಜಗಜ್ಜಾಹೀರಾಗಿದೆ.


ಬೆಂಗಳೂರು (ಜೂ.11): ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಆರೋಪದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು, ಈ ವಿಚಾರವನ್ನು ಪೊಲೀಸರು ಖಚಿತಪಡಿಸಿದ್ದಾರೆ. ಇದೀಗ ಈ ಕೊಲೆ ನಡೆದಿರುವುದು ಯಾಕೆ ಎಂಬ ಅಂಶ ಬಯಲಾಗಿದೆ. ಅದು ದರ್ಶನ್ ಗೆಳತಿ ಪವಿತ್ರಾ ಗೌಡ ವಿಚಾರದಲ್ಲಿ ಎಂಬುದು ಈಗ ಜಗಜ್ಜಾಹೀರಾಗಿದೆ.

ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದನಂತೆ. ಕೆಟ್ಟ ಫೋಟೊ ಕಳಿಸುತ್ತಿದ್ದನಂತೆ ಹೀಗಾಗಿ ರೇಣುಕಾಸ್ವಾಮಿಯನ್ನ ಒಂದು ವಾರದಿಂದ ಟ್ರಾಕ್ ಮಾಡಲಾಗಿತ್ತು.

Tap to resize

Latest Videos

BIG BREAKING: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಸೇರಿ 10 ಜನರ ಬಂಧನ

ಒಂದು ವಾರದಿಂದ ಟ್ರಾಕ್ ಮಾಡಿದ ನಂತರ ರೇಣುಕಾಸ್ವಾಮಿಯನ್ನ ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ, ರಾಘವೇಂದ್ರ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದನಂತೆ. ನಂತ್ರ  ಆರ್ ಆರ್ ನಗರ , ವಾಹನ ಸೀಜರ್ ಮಾಡಿ ಇಡುವ ಶೆಡ್ ನಲ್ಲಿ ಇಟ್ಟು ರೇಣುಕಾಸ್ವಾಮಿಯನ್ನ ಹೊಡೆದಿದ್ದಾರೆ. ಹಲ್ಲೆಯಲ್ಲಿ ಗಾಯವಾದ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದ.

ಅದಾದ ನಂತರ ಶನಿವಾರ ನಡುರಾತ್ರಿ ಕಾಮಾಕ್ಷಿ ಪಾಳ್ಯದ  ಸಲಾರ್ ಪುರ ಸತ್ವ ಬಳಿಯ  ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು  ಎಸೆದು ಹೋಗಲಾಗಿದೆ. ದರ್ಶನ್ ರೇಣುಕಾಸ್ವಾಮಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾರೆ ಎನ್ನಲಾಗುತ್ತಿದೆ.

BREAKING ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸರ ವಶಕ್ಕೆ 

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ 10 ಜನರನ್ನು ಬಂಧಿಸಲಾಗಿದೆ. ಖ್ಯಾತ ಹೋಟೆಲ್ ಉದ್ಯಮಿ ವಿನಯ್ ಎಂಬಾತನನ್ನು ಕೂಡ ಬಂಧಿಲಾಗಿದೆ. ಜೂ.8 ರ ರಾತ್ರಿ ವಿನಯ್ ಕಾರ್ ಶೆಡ್ ನಲ್ಲಿ ರೇಣುಕಾ ಸ್ವಾಮಿಯನ್ನು ಇಟ್ಟು ಹಲ್ಲೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.

ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ ಆರೋಪಿಗಳು ಸುಮನಹಳ್ಳಿ ಬ್ರಿಡ್ಜ್ ಬಳಿ ಇರುವ ಸತ್ವ ಅಪಾರ್ಟ್ ಮೆಂಟ್ ಬಳಿ ರಾಜಕಾಲುವೆ ಎಸೆದಿದ್ದರು. ಬೆಳಗಿನ ಜಾವ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಮೃತದೇಹ ನೋಡಿ 112 ಕರೆ ಮಾಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದ. 

ಅಪರಿಚಿತ ಶವದ ಕುರಿತು ತನಿಖೆ ವೇಳೆ ಇಬ್ಬರು ಪೊಲೀಸರಿಗೆ ಶರಣಾಗಿದ್ದರು. ವಿಚಾರಣೆ ಮಾಡಿದಾಗ ವಿನಯ್ ಪಾತ್ರ ಬಯಲಿಗೆ ಬಂದಿತ್ತು. ವಿನಯ್ ಸೇರಿ ನಾಲ್ವರನ್ನ  ಪೊಲೀಸರು ಅರೆಸ್ಟ್ ಮಾಡಿದ್ದರು. ಈ ವೇಳೆ ವಿನಯ್ ಜೊತೆಗೆ ನಟ ದರ್ಶನ್ ಇದ್ದಿದ್ದು ಸ್ಪಷ್ಟವಾಗಿತ್ತು. ವಿನಯ್ ಮತ್ತು ದರ್ಶನ್ ರಿಂದ ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿರುವ  ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಯ್ತು. ನಾಲ್ವರ ಹೇಳಿಕೆ ಆಧರಿಸಿ ನಟ ದರ್ಶನ್ ಅರೆಸ್ಟ್ ಮಾಡಲಾಗಿದೆ.

ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಏನಿದೆ?: ಘಟನೆ ಸಂಬಂದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಶವವನ್ನು ಮೊದಲ ಬಾರಿ ನೋಡಿದ್ದ ಅನುಗ್ರಹ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ಈ ಸಂಬಂಧ ದೂರು ದಾಖಲಿಸಿದ್ದರು. ಅಪಾರ್ಟ್ಮೆಂಟ್ ಮುಂಭಾಗ ಗಸ್ತು ಮಾಡುತ್ತಿದ್ದಾಗ ಪತ್ತೆಯಾಗಿತ್ತು. 35 ವರ್ಷ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಮುಖ ಹಾಗೂ ತಲೆಗೆ ಮತ್ತು ಕಿವಿಗೆ ರಕ್ತದ ಗಾಯ ಆಗಿರೊದು ಕಂಡಬಂದಿತ್ತು. ಮೃತದೇಹವನ್ನು ಮರಣೋತ್ತರ  ಪರೀಕ್ಷೆಗೆ ಒಳಪಡಿಸಿ ಕೊಲೆ

click me!