
ಚಿತ್ರದುರ್ಗ (ಜೂ.3): ಕುರಾನ್ ಓದಲು ಹೋಗಿದ್ದ ಬಾಲಕಿ ಮೇಲೆ ಮಸೀದಿಯ ಹಜರತ್(ಮೌಲ್ವಿ) ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು, ಆರೋಪಿಯನ್ನ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೇ 31ರಂದು ದಾಖಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
3ವರ್ಷದಿಂದ ಖುರಾನ್ ಓದಲು ಮಸೀದಿಗೆ ಹೋಗುತ್ತಿದ್ದ ಬಾಲಕಿ. ಬಾಲಕಿಗೆ ಗಾಳಿ ಸೋಕಿದೆ ಪೂಜೆ ಮಾಡಬೇಕೆಂದಿದ್ದ ಮೌಲ್ವಿ. ಆದರೆ ಪೂಜೆ ಮಸೀದಿಯಲ್ಲಿ ಆಗೊಲ್ಲ, ಮನೆಯಲ್ಲೇ ಮಾಡಬೇಕು ಎಂದು ನಂಬಿಸಿದ್ದ ಮೌಲ್ವಿ. ಇದನ್ನ ನಂಬಿದ್ದ ಬಾಲಕಿ ಪೋಷಕರು ಒಪ್ಪಿದ್ದಾರೆ. ಅದರಂತೆ ಬಾಲಕಿಯ ಮನೆಗೆ ಬಂದು ರೂಮಿಗೆ ಕರೆದೊಯ್ಯುತ್ತಿದ್ದ ಮೌಲ್ವಿ. ಈ ವೇಳೆ ತಾಯಿಯನ್ನ ಹೊರಗೆ ಇರುವುಂತೆ ಹೇಳುತ್ತಿದ್ದ ಕಾಮುಕ. ಬಾಲಕಿಗೆ ದೆವ್ವ ಮುಟ್ಟಿದೆ, ದೈಹಿಕ ಸುಖ ಕೊಟ್ಟರೆ ಶಾಂತಿ ಆಗುತ್ತದೆಂದು ನಂಬಿಸಿದ್ದ ಅದರಂತೆ ಸಹೋದರಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರೇರಣೆ ನೀಡಿರುವ ಮೌಲ್ಯ, ಸಹೋದರನೇ ಅತ್ಯಾಚಾರ ನಡೆಸಲು ಪ್ರೇರಣೆ ನೀಡಿರುವ ಮೌಲ್ವಿ. ಬಾಲಕಿ ಮೇಲೆ ಸಹೋದರನೇ ಅತ್ಯಾಚಾರ ಎಸಗಿದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿ ಬಳಿಕ ತಾನೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಕಾರಲ್ಲಿ ಕರೆದೊಯ್ದು ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪ್ರಕರಣ ದಾಖಲಾಗ್ತಿದ್ದಂತೆ ಆರೋಪಿ ನಾಪತ್ತೆ!
ಇದೇ ರೀತಿ ಕಳೆದ ಆರೇಳು ತಿಂಗಳಿನಿಂದ ವಾರಕ್ಕೊಮ್ಮೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಮೇರೆಗೆ ಆರೋಪಿ ಮೌಲ್ವಿ ಹಾಗೂ ಬಾಲಕಿ ಸಹೋದರನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿರುವ ಪೊಲೀಸರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ