ಮುರುಘಾ ಮಠ ಶ್ರೀ ಪೋಕ್ಸೋ ಕೇಸ್, ಭಾನುವಾರ ಏನೆಲ್ಲಾ ಬೆಳವಣಿಗೆಗಳು ನಡೆದವು, ಇಲ್ಲಿದೆ ಮಾಹಿತಿ

By Ramesh B  |  First Published Aug 28, 2022, 9:38 PM IST

ಚಿತ್ರದುರ್ಗದ ಮುರುಘಾ ಮಠಧ ಶ್ರೀಗಳ ವಿರುದ್ಧ ಪೋಕ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಇಂದು(ಭಾನುವಾರ) ಏನೆಲ್ಲಾ ಬೆಳವಣಿಗೆಗಳು ನಡೆದವು ಎನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


ಚಿತ್ರದುರ್ಗ, (ಆಗಸ್ಟ್.28): ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದ್ದು, ಮಠದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಒಡನಾಡಿ ಸಂಸ್ಥೆ ದೂರು ದಾಖಲಿಸಿದೆ. ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದೆ. 

ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. ಇಂದು(ಭಾನುವಾರ) ಏನೆಲ್ಲಾ ಬೆಳವಣಿಗೆಗಳು ನಡೆದವು ಎನ್ನುವ ಸಂಕ್ಷಿಪ್ತ ಮಾಹಿತಿ  ಮುಂದೆ ಇದೆ ಓದಿ. 

Tap to resize

Latest Videos

ಮುರುಘಾ ಮಠ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ, ಜುಲೈ 25ಕ್ಕೆ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿನಿಯರು!

ವಿದ್ಯಾರ್ಥಿನಿಯರ ಹೇಳಿಕೆ ಪಡೆದ ಪೊಲೀಸ್ರು
ಒಂದೆಡೆ ಮಠಕ್ಕೆ ವಿವಿಧ ಶ್ರೀಗಳು ಹಾಗೂ ಗಣ್ಯ ವ್ಯಕ್ತಿಗಳು ಆಗಮಿಸುತ್ತಿದ್ರೆ, ಮತ್ತೊಂದೆಡೆ ಪೊಲೀಸರ ತನಿಖೆ ಚುರುಕಾಗಿತ್ತು. ವಿದ್ಯಾರ್ಥಿನಿಯರನ್ನು ಭಾನುವಾರ ಬೆಳಗ್ಗೆ ಪೊಲೀಸರ ತಂಡ ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆದುಕೊಂಡು ಬಂದಿದ್ದು, ಸಂತ್ರಸ್ಥ ಬಾಲಕಿಯರಿಗೆ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ನೀಡಿದ್ದಾರೆ.

ಬಳಿಕ ತನಿಖಾ ತಂಡ ಬಾಲಕಿಯರ ಪೋಷಕರನ್ನು ವಿಚಾರಣೆ ನಡೆಸಿದರು.ಇದಾದ ಬಳಿಕ ಮಹಿಳಾ ಪೊಲೀಸ್ರು, ಬಾಲಕೀಯರನ್ನು ವಿಚಾರಣೆ ನಡೆಸಿದ್ರು. ಸತತ ನಾಲ್ಕು ಗಂಟೆಗಳ ಕಾಲ ಬಾಲಕಿಯರ ಹೇಳಿಕೆಯನ್ನು ಪಡೆದುಕೊಂಡರು. ಅವರು ಕೊಟ್ಟ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿರು.

ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಶ್ರೀಗಳಿಗೆ ಮಠಾಧೀಶರು, ಮುಖಂಡರಿಂದ ಧೈರ್ಯ

ಸಂತ್ರಸ್ಥ ಬಾಲಕಿಯರಿಗೆ ಮೆಡಿಕಲ್ ಟೆಸ್ಟ್
ಬಾಲಕಿಯರಿಂದ ಹೇಳಿಕೆ ಪಡೆದ ಬಳಿಕ ಅವರನ್ನ ಮೆಡಿಕಲ್ ಟೆಸ್ಟ್‌ಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು.ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯೆ ಡಾ  ಉಮಾ ಅವರು ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ಮಾಡಿದರು.

ಬಾಲಕಿಯರ ಮೆಡಿಕಲ್ ಟೆಸ್ಟ್‌ ಮಾಡುತ್ತಿದ್ದಾಗ ಜಿಲ್ಲಾಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಕೆ ಪರಶುರಾಮ ಭೇಟಿ ನೀಡಿ ತನಿಖೆ ಬಗ್ಗೆ ಮಾಹಿತಿ ಪಡೆದುಕೊಂಡರು. ತನಿಖಾ ಅಧಿಕಾರಿ ಡಿವೈಎಸ್ಪಿ ಅನಿಲ್ ಕುಮಾರ್ ಅವರಿಂದ  ಮಾಹಿತಿ ಪಡೆದರು. ಎರಡು ಗಂಟೆಗಳ ಕಾಲ ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆದಿದ್ದು, ಬಳಿಕ ಇಲ್ಲಿಂದ ತನಿಖಾಧಿಕಾರಿಗಳು ಬಾಲಕಿಯರ ಬಾಲಮಂದಿರಕ್ಕೆ ಕರೆದೊಯ್ದಿರು.

ಬಾಲಕಿಯರು ಹಾಗೂ ಅವರ ಪೊಷಕರ ಹೇಳಿಕೆ ಪಡೆದುಕೊಂಡು 2  ಎಫ್‌ಐಆರ್‌ಗೆ ಸಂಬಂಧಿಸಿದ ಪೂರಕ‌ ಮಾಹಿತಿ ಸಂಗ್ರಹಿಸಿದ್ದಾರೆ. ಇವತ್ತು ಇಡೀ ದಿನ ಸಂತ್ರಸ್ಥ ಬಾಲಕಿಯರು  ವಿಚಾರಣೆ ಎದುರಿಸಿದರು. ಇನ್ನು ಸೋಮವಾರ ಏನೆಲ್ಲಾ ಆಗಹುದು ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಮುರುಘಾ ಶರಣ ಕೇಸ್‌ನಲ್ಲಿ ಹಲವು ಅನುಮಾನಗಳು: ಕಾಟನ್‌ಪೇಟೆ ಠಾಣೆಯಲ್ಲಿ ನಡೆದಿದ್ದೇನು?

ಸೋಮವಾರ 164 ಹೇಳಿಕೆ ಸಾಧ್ಯತೆ
ಹೌದು...ಸಂತ್ರಸ್ಥ ಬಾಲಕಿಯರ ವಿಚಾರಣೆ ಮಾಡಲಾಗಿದೆ. ಅಲ್ಲದೇ ಮೆಡಿಕಲ್ ಟೆಸ್ಟ್‌ ಸಹ ಮಾಡಿಸಲಾಗಿದೆ. ಇನ್ನು ಕೊನೆದಾಗಿ ಉಳಿದಿರುವುದು ಬಾಲಕಿಯರನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು.

ಯೆಸ್...ಭಾನುವಾರ ಇಡೀ ದಿನ ಸಂತ್ರಸ್ಥ ಬಾಲಕಿಯರು ವಿಚಾರಣೆ ಎದುರಿಸಿದ್ದು, ನಾಳೆ ಅಂದ್ರೆ ಸೋಮವಾರ ಬಾಲಕಿಯರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಎಲ್ಲಾ ಸಾಧ್ಯತೆಗಳಿವೆ. ಲೈಂಗಿಕ ದೌರ್ಜನ್ಯದ ಕೇಸ್ ಆಗಿರುವುದರಿಂದ ಸಂತ್ರಸ್ಥರು ನ್ಯಾಯಾಧೀಶರ ಮುಂದೆ 164 ಹೇಳಿಕೆ ನೀಡಬೇಕಾಗುತ್ತದೆ. ಅದರಂತೆ ಬಾಲಕಿಯರನ್ನು ಸೋಮವಾರ ಜಡ್ಸ್‌ ಮುಂದೆ ಹಾಜರುಪಡಿಸಿ 164 ಹೇಳಿಕೆ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.

ಹೇಳಿಕೆ ಮೇಲೆ ನಿಂತಿದೆ ಶ್ರೀಗಳ ಭವಿಷ್ಯ
ಸಿಆರ್ ಪಿಸಿ 164 ನಂತೆ ಸಂತ್ರಸ್ಥ ಬಾಲಕಿಯರಿಂದ ನ್ಯಾಯದೀಶರು ಹೇಳಿಕೆ ಪಡೆಯಲಿದ್ದು, 164 ಹೇಳಿಕೆ ದಾಖಲಿಸಿದ ನಂತರ ಸ್ವಾಮೀಜಿಯ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ಸಂತ್ರಸ್ಥ ಬಾಲಕಿಯರು ನ್ಯಾಯಾದೀಶರ ಮುಂದೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿಕೆ ಕೊಟ್ಟರೆ, ಅಲ್ಲದೇ ಮೆಡಿಕಲ್ ಟೆಸ್ಟ್‌ ವರದಿಯಲ್ಲೂ ನಿಜವಾಗಿದ್ರೆ ಮುರುಘಾ ಶ್ರೀಗಳಿಗೆ ಸಂಕಷ್ಟಕ್ಕೆ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ಸಂತ್ರಸ್ಥ ಬಾಲಕಿಯರು ನ್ಯಾಯಾಧೀಶರ ಮುಂದೆ ನೀಡಲಿರುವ ಹೇಳಿಕೆ ಮೇಲೆ  ಶ್ರೀಗಳ ಭವಿಷ್ಯ ನಿಂತಿದೆ.

click me!