ಸತ್ತ ಮಗು ಅಂತ್ಯಸಂಸ್ಕಾರಕ್ಕೂ ಮುನ್ನ ಬದುಕಿತು! ಆದರೆ...

By Suvarna News  |  First Published Nov 10, 2020, 12:41 AM IST

ಬದುಕಿದ್ದ ಮಗುವನ್ನು ಸತ್ತಿದೆ ಎಂದು ಸರ್ಟಿಫಿಕೇಟ್ ಕೊಟ್ಟ ಕಾಂಪೌಂಡರ್/  ಮಗುವನ್ನು ಮನೆಗೆ ತೆಗೆದುಕೊಂಡು ಹೋದಾಗ ಬದುಕಿರುವುದು ಗೊತ್ತಾಗಿದೆ/ ಮತ್ತೆ ಆಸ್ಪತ್ರೆಗೆ ಕರೆತರುವ ವೇಳೆ ಮೃತಪಟ್ಟಿದೆ


ಗುವಾಹಟಿ(ನ. 10)  ಅಸ್ಸಾಂ ಚಹಾ ತೋಟದಲ್ಲಿನ ಮಗುವೊಂದರ ಕತೆ ಹೇಳುತ್ತೇವೆ ಕೇಳಿ. ಕಾಂಪೌಂಡರ್ ಮಾಡಿದ ಎಡವಟ್ಟಿಗೆ ಇಡೀ ಕುಟುಂಬ ಪರಿತಪಿಸಬೇಕಾಗಿ ಬಂದಿದೆ.

ಟೀ ಗಾರ್ಡನ್ ಆಸ್ಪತ್ರೆಯ ಕಾಂಪೌಂಡರ್ ಒಂದು ವರ್ಷಕ್ಕಿಂತಲೂ ಕಡಿಮೆ ಇದ್ದ ಮಗು ಸಾವನ್ನಪ್ಪಿದೆ ಎಂದು ಪ್ರಮಾಣ ಪತ್ರ ನೀಡಿದ್ದ.  ಆದರೆ ಮಗುವಿನ ಅಂತ್ಯಸಂಸ್ಕಾರಕ್ಕೆಂದು ತೆರಳಿದಾಗ ಮಗು ಬುದುಕಿದೆ!

Tap to resize

Latest Videos

ಪ್ರೀ ವೆಡ್ಡಿಂಗ್ ಪೋಟೋ ಶೂಟ್ ಗೆ ತೆರಳಿದ್ದ ಜೋಡಿ ತೆಪ್ಪ ಮುಗುಚಿ ದುರ್ಮರಣ

ಆದರೆ ಈ ಸಂತಸ ಬಹಳ ಕಾಲ ಉಳಿದಿಲ್ಲ. ಮಗುವನ್ನು ಮತ್ತೆ ವೈದ್ಯಕೀಯ ಕಾಲೇಜಿಗೆ ಕರೆದು ತರಲಾಯಿತಾದರೂ ಆ ವೇಳೆಗೆ ಮಗು ಸಾವನ್ನಪ್ಪಿತ್ತು.

ಮಗು ಸಾವನ್ನಪ್ಪಿದೆ ಎಂದು ಹೇಳಿದ್ದ ಕಾಂಪೌಂಡರ್ ಗೌತಮ್ ಮಿತ್ರಾ ನನ್ನು ಬಂಧಿಸಲಾಗಿದೆ.  ಕಾಂಪೌಂಡರ್ ಹೇಳಿದ ಮೇಲೆ ಮಗುವನ್ನು ಮನೆಗೆ ಕರೆತರಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವ ವೇಳೆ ಮಗು ಬದುಕಿರುವುದು ಗೊತ್ತಾಗಿದೆ. ಈ ವೇಳೆ ಮಗುವಿಗೆ ತಾಯಿ ಎದೆಹಾಲು ಸಹ ನೀಡಿದ್ದಾಳೆ.

ಆಸ್ಪತ್ರೆಯ ವೈದ್ಯರು ಲಭ್ಯವಿರದ ಕಾರಣ ಕಾಂಪೌಂಡರ್ ನೇ ಜವಾಬ್ದಾರಿ ತೆಗೆದುಕೊಂಡಿದ್ದು ಮಗು ಸಾವನ್ನಪ್ಪಿದೆ ಎಂದು ಘೋಷಣೆ ಮಾಡಿದ್ದ.  ಕಾಂಪೌಂಡರ್ ವೈದ್ಯರ ಕೆಲಸ ಮಾಡಲು ಸಾಧ್ಯವಿಲ್ಲ. ವ್ಯಕ್ತಿಯ ಸಾವನ್ನು ಘೋಷಣೆ ಮಾಡಲು ಆಗುವುದಿಲ್ಲ ಎಂದು ಹೇಳಿರುವ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಇದೇ ಕಾರಣಕ್ಕೆ ಆಸಪತ್ರೆ ಎದುರು ಪ್ರತಿಭಟನೆ ಸಹ ನಡೆದಿದೆ.

 

 

click me!