
ಕೊಲ್ಕತ್ತಾ(ಜು.23): ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಮಕ್ಕಳ ಕಳ್ಳಸಾಗಣೆ ದಂಧೆ ನಡೆಸಿದ ಆರೋಪದ ಮೇಲೆ ಕೇಂದ್ರೀಯ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಬಂಧಿಸಲಾಗಿದೆ. ಇವರೂ ಸೇರಿ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಪಾದಿತ ದಂಧೆಯನ್ನು ಭಾನುವಾರ ಭೇದಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಂಟು ತಿಂಗಳ ಮತ್ತು ಆರು ವರ್ಷದೊಳಗಿನ ಮೂರು ಹುಡುಗಿಯರು ಮತ್ತು ಇಬ್ಬರು ಹುಡುಗರನ್ನು ನಾವು ರಕ್ಷಿಸಿದ್ದೇವೆ. 75 1.75 ಲಕ್ಷ ಮೊತ್ತವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸಿಐಡಿ (ಅಪರಾಧ ತನಿಖಾ ಇಲಾಖೆ) ಈಗ ಪ್ರಕರಣವನ್ನು ವಹಿಸಿಕೊಳ್ಳಲಿದೆ ಎಂದು ಬಂಕುರಾದ ಪೊಲೀಸ್ ಅಧೀಕ್ಷಕ ಧೃತಿಮಾನ್ ಸರ್ಕಾರ್ ಹೇಳಿದ್ದಾರೆ.
ಮುಳುಗಡೆಯಾಗಿದ್ದ ಭೂಪ್ರದೇಶ ನೀರಿಂದ ಎದ್ದು ಬಂತು..! ಏನೀ ವಿಸ್ಮಯ ?
ಕೆಲವು ಸ್ಥಳೀಯರು ಪ್ರಾಂಶುಪಾಲರಾದ ಕಮಲ್ ಕುಮಾರ್ ರಾಜೋರಿಯಾ ಮತ್ತು ಶಿಕ್ಷಕಿ ಸುಷ್ಮಾ ಶರ್ಮಾ ಅವರು ಭಾನುವಾರ ಮೂರು ಬಾಲಕಿಯರನ್ನು ಬಲವಂತವಾಗಿ ವಾಹನದಲ್ಲಿ ಹತ್ತಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿದ ನಂತರ ಘಟನೆ ಬಯಲಾಗಿದೆ. ಹುಡುಗಿಯರು ಅಳುತ್ತಿರುವುದನ್ನು ನೋಡಿದ ಸ್ಥಳೀಯರು ರಾಜೋರಿಯಾ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ. ರಾಜೋರಿಯಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿರೂ ಅವರನ್ನು ತಡೆದು ಪೊಲೀಸರಿಗೆ ಒಪ್ಪಿಸಲಾಯಿತು.
ಪ್ರಕರಣದ ತನಿಖೆ ಆರಂಭಿಕ ಹಂತದಲ್ಲಿದೆ. ಹೆಚ್ಚೇನು ಹೇಳಲು ಸಾಧ್ಯವಿಲ್ಲ. ಆದರೆ ಇದು ಅಂತರ ಜಿಲ್ಲೆ ಮತ್ತು ಅಂತರ-ರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆಯ ಒಂದು ಭಾಗವೆಂದು ತೋರುತ್ತದೆ ಎಂದು ಎಂದು ಸರ್ಕಾರ್ ಹೇಳಿದ್ದಾರೆ.
ಬೆಳೆ ನಾಶ ಮಾಡೋ ಕಾಡುಹಂದಿ ಬೇಟೆಗೆ ಹೈಕೋರ್ಟ್ ಅನುಮತಿ
ತನಿಖೆ ಆರಂಭಿಸಲು ಸಿಐಡಿ ತಂಡ ಶುಕ್ರವಾರ ಬಂಕುರಾಕ್ಕೆ ಆಗಮಿಸುವ ನಿರೀಕ್ಷೆಯಿತ್ತು. ಐವರು ಮಕ್ಕಳನ್ನು ಅಸನ್ಸೋಲ್ ಮತ್ತು ದುರ್ಗಾಪುರ ಪ್ರದೇಶಗಳಿಂದ ಕರೆತರಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಒಂದು ಮಗುವನ್ನು 2.5 ಲಕ್ಷ ರೂಪಾಯಿಗೆ ಆರೋಪಿಯೊಬ್ಬರು ಖರೀದಿಸಿದ್ದಾರೆ. ಎಲ್ಲಾ ಹೇಳಿಕೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ರಾಜೋರಿಯಾ ರಾಜಸ್ಥಾನ ಮೂಲದವರಾಗಿದ್ದು, ಅವರನ್ನು ಇತ್ತೀಚೆಗೆ ಬಂಕುರಾಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ