ಕೇರಳದಲ್ಲಿ ಅತಿದೊಡ್ಡ ಚೈಲ್ಡ್ ಪೋರ್ನೋಗ್ರಫಿ ಹಗರಣ ಬಯಲು/ ಮಕ್ಕಳನ್ನು ಬಳಸಿಕೊಂಡು ವಿಡಿಯೋ ಅಪ್ ಲೋಡ್ ಮಾಡುತ್ತಿದ್ದ ಜಾಲ/ ಪೊಲೀಸರ ಕಾರ್ಯಾಚರಣೆಯಲ್ಲಿ ಹಲವರ ಬಂಧನ
ತಿರುವನಂತಪುರ(ಅ. 08) ಕೇರಳ ಪೊಲೀಸರು ಚೈಲ್ಡ್ ಪೋರ್ನೋಗ್ರಫಿಯ ದೊಡ್ಡ ದಂಧೆಯನ್ನು ಪತ್ತೆ ಮಾಡಿದ್ದಾರೆ. ಮಕ್ಕಳನ್ನು ಅಶ್ಲೀಲ ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದ ಆರೋಪದ ಮೇಲೆ 41 ಜನರನ್ನು ಬಂಧಿಸಲಾಗಿದೆ.
ಐಟಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರನ್ನು ಬಂಧಿಸಲಾಗಿದೆ. ಡಾರ್ಕ್ ವೆಬ್ ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಶೇರ್ ಮಾಡಿಕೊಳ್ಳುತ್ತಿದ್ದ ಆರೋಪ ಇವರ ಮೇಲೆ ಇದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಘಟಕ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಪಿ ಹಂಟ್ -20.2 ಎಂಬ ಹೆಸರಿನಲ್ಲಿ ಆಪರೇಶನ್ ನಡೆಸಿದ್ದಾರೆ.
ಆನ್ ಲೈನ್ ಕ್ಲಾಸ್ ಮಧ್ಯೆ ಪೋರ್ನ್ ಪ್ರಸಾರ
ಹೈಟೆಕ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ಡಾರಕ್ ವೆಬ್ ಹೆಸರಿನಲ್ಲಿ ಮಕ್ಕಳ ಪೋರ್ನ್ ಅಪ್ ಲೋಡ್ ಮಾಡುತ್ತಿದ್ದವರು ಬಲೆಗೆ ಬಿದ್ದಿದ್ದಾರೆ. ಲಾಕ್ ಡೌನ್ ನಂತರ ಕೇರಳದಲ್ಲಿ ಮಕ್ಕಳ ಮೇಲಿನ ಇಂಥ ದೌರ್ಜನ್ಯಗಳ ಸಂಖ್ಯೆ ಹೆಚ್ಚಿದ್ದು ಇಲ್ಲಿಯವರೆಗೆ ಮೂನ್ನೂರಕ್ಕೂ ಅಧಿಕ ಮಂದಿಯ ಬಂಧನ ಮಾಡಲಾಗಿದೆ.
ತಿಂಗಳ ಹಿಂದೆ ಒಂದಿಷ್ಟು ಜನರನ್ನು ಅರೆಸ್ಟ್ ಮಾಡಿ ಅವರದಿಂದ ಮೊಬೈಲ್, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ವಶಪಡಿಸಿಕೊಳ್ಳಲಾಗಿತ್ತು. ಮಕ್ಕಳ ಅಶಲೀಲ ಚಿತ್ರ ಬ್ರೌಸ್ ಮಾಡುವುದು, ಕಲೆಕ್ಟ್ ಮಾಡುವುದನ್ನು ಮಾಡುತ್ತಿದ್ದರು ಎಂಬ ಅಂಶ ಬಹಿರಂಗವಾಗಿತ್ತು. ಮನೆಗೆ ಅಳವಡಿಕೆ ಮಾಡಿದ್ದ ಕ್ಯಾಮರಾದಲ್ಲಿ ಇಂಥ ದೃಶ್ಯಗಳು ಶೇಖರಣೆಯಾಗಿದ್ದು ಅದನ್ನು ಅಪ್ ಲೋಡ್ ಮಾಡುತ್ತಿದ್ದ ಮಾಹಿತಿಯೂ ಸಿಕ್ಕಿತ್ತು.
ಏನಿದು ಡಾರ್ಕ್ ವೆಬ್?
ಸಾಮಾನ್ಯವಾಗಿ ಬಳಕೆ ಮಾಡುವ ಬ್ರೌಸರ್ ನಲ್ಲಿ ಈ ಡಾರ್ಕ್ ವೆಬ್ ಕಾಣುವುದಿಲ್ಲ. ಇದನ್ನು ಬ್ರೌಸ್ ಮಾಡಲು Tor ಬ್ರೌಸರ್ ಬೇಕಾಗುತ್ತದೆ. ಕಾನೂನು ಬಾಃಇರ ಚಟುವಟಿಕೆಗಳ ತಾಣ ಈ ಡಾರ್ಕ್ ವೆಬ್. ಕ್ರೆಡಿಟ್ ಕಾರ್ಡ್ ನಂಬರ್ ಗಳನ್ನು ವಂಚಕರು ಇಲ್ಲಿಯೇ ಲಪಟಾಯಿಸುತ್ತಾರೆ. ಡ್ರಗ್ಸ್, ಕದ್ದ ಮಾಲುಗಳ ವ್ಯಾಪಾರ, ಕಪ್ಪು ಹಣ ವಹಿವಾಟು ಸಹ ನಡೆಯುತ್ತದೆ.
ಒಟ್ಟಿನಲ್ಲಿ ಎಲ್ಲ ಬಗೆಯ ಕ್ರಿಮಿನಲ್ ಚಟುವಟಿಕೆಗಳ ತಾಣ ಎಂದು ಹೇಳಬಹುದು. ಚೈಲ್ಡ್ ಪೋನ್ರೋಗ್ರಫಿಯೂ ಇದರಲ್ಲಿಯೇ ಸೇರಿಕೊಂಡಿದೆ. ನೂರಾರು ವೆಬ್ ತಾಣಗಳಿಗೆ ಕಳ್ಳ ಕಿಂಡಿಯ ಮೂಲಕ ಇದು ಲಿಂಕ್ ಕೊಡುತ್ತದೆ.