ಕೇವಲ 750 ರೂ. ಸಾಲದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ

By Sathish Kumar KH  |  First Published Aug 28, 2023, 2:03 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇವಲ 750 ರೂಪಾಯಿ ಸಾಲದ ಕಿರುಕುಳ ತಾಳದೇ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.


ಚಿಕ್ಕಮಗಳೂರು (ಆ.28): ರಾಜ್ಯದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇವಲ 750 ರೂಪಾಯಿ ಸಾಲದ ಕಿರುಕುಳ ತಾಳದೇ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.

ಹೌದು, 14 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಕಾರಣ ಬಹಿರಂಗವಾಗಿದೆ. ಕೇವಲ 750 ರೂಪಾಯಿ ಸಾಲಕ್ಕೆ ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮಗನ ಸಾವಿಗೆ ಗಳಗಳನೆ ಕಣ್ಣೀರಿಟ್ಟ ಮಾಜಿ ಯೋಧನ ಕುಟುಂಬ ಸದಸ್ಯರು.  ಹಾಸ್ಟೆಲ್ ಸಿಬ್ಬಂದಿಯೇ ವಿದ್ಯಾರ್ಥಿಗೆ ಸಾಲ ಕೊಟ್ಟು ಕಿರುಕುಳ ನೀಡಿದ್ದರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಖಾಸಗಿ ಶಾಲೆಯಲ್ಲಿ ನಡೆದಿದ್ದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ರೋಚಕ ಟ್ವಿಸ್ಟ್‌ ಸಿಕ್ಕಿದೆ.

Tap to resize

Latest Videos

undefined

'ಯಾರೇನೇ ಅನ್ನಲಿ ನನ್ನ ಜೀವನ ನನ್ನ ಕೈಯಲ್ಲಿ'; ಕಸ ವಿಲೇವಾರಿ ಆಟೋ ಚಾಲಕಿ ವೀಣಾ ಮಾತು!

ಇನ್ನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ನಂತರ, ಆತನು ಬರೆದಿಟ್ಟ ಡೆತ್‌ನೋಟ್‌ ವೈರಲ್‌ ಆಗುತ್ತಿದೆ. ಹಾಸ್ಟೆಲ್‌ ಸಿಬ್ಬಂದಿ ಕೇವಲ 750 ರೂ ಸಾಲ ಕೊಟ್ಟು, ಆ ಬಾಲಕನಿಂದ 3 ಸಾವಿರ ಹಣ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಗ ವಿದ್ಯಾರ್ಥಿ ಬರೆದಿಟ್ಟ ಡೆತ್ ನೋಟ್ ವೈರಲ್ ಆಗುತ್ತಿದ್ದು, ಡೆತ್ ನೋಟ್ ನಲ್ಲಿ ಸಾವಿಗೆ ಕಾರಣರಾದವರ ಬಗ್ಗೆ ವಿದ್ಯಾರ್ಥಿ ಬರೆದಿದ್ದಾನೆ. ಇದನ್ನು ಆಧರಿಸಿ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತ ಬಾಲಕನ ತಂದೆ-ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ಆಗಸ್ಟ್ 22ರಂದು ಕೊಪ್ಪದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದನು. ವಿದ್ಯಾರ್ಥಿ ಶ್ರೀನಿವಾಸ್ (15) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು. ಕಡೂರು ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ ವಿದ್ಯಾರ್ಥಿ ಶ್ರೀನಿವಾಸ್. ಕೊಪ್ಪ ಪಟ್ಟಣದ ಖಾಸಗಿ ಶಾಲೆಯ 9ನೇ ತರಗತಿ ಓದುತ್ತಿದ್ದನು. ಡೆತ್ ನೋಟ್ ನಲ್ಲಿ ಸಾವಿಗೆ ಕಾರಣರಾದ ಅವರ ಬಗ್ಗೆ ಬರೆದಿದ್ದನು. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ತಂದೆ-ತಾಯಿ ಕಣ್ಣೀರು ಹಾಕುತ್ತಿದ್ದಾರೆ. 

click me!